
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಗೋಕುಲ್ದಾಸ್ ಎಕ್ಸ್ಪೋರ್ಟ್ ಚಾರಿಟಬಲ್ ಫೌಂಡೇಶನ್ ಸಿಎಸ್ಆರ್ ಅನುದಾನ ದಲ್ಲಿ ಶವ ಸಂಗ್ರಹಕ ಕೋಲ್ಡ್ ಬಾಕ್ಸ್ (ಡೀಪ್ ಫ್ರೀಜರ್ ಬಾಕ್ಸ್) ಹಸ್ತಾಂತರಿಸಿತು.
ಈ ವೇಳೆ ಡಾ.ಮಂಜುನಾಥ್ ಮಾತ ನಾಡಿ, ಗೋಕುಲ್ ದಾಸ್ ಸಂಸ್ಥೆ ನೀಡಿದ ಡೀಪ್ ಕೋಲ್ಡ್ ಬಾಕ್ಸ್ ಸಾಕಷ್ಟು ಅನುಕೂಲಕರವಾಗಿದ್ದು ಅಪಘಾತ, ರೈಲ್ವೆ ಅಪಘಾತಗಳಲ್ಲಿ ಮೃತಪಟ್ಟಿರುವ ಶವಗಳನ್ನು ವಾರಸುದಾರರು ಸಿಕ್ಕಿ ಶವದ ಗುರುತು ಪತ್ತೆಯಾಗುವವರೆಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಶವವನ್ನು ಅಲ್ಲಿಯವರೆಗೂ ಸಂಗ್ರಹಿಸುವುದು ಅಗತ್ಯವಾಗಿದೆ. ಈ ಕೋಲ್ಡ್ ಬಾಕ್ಸ್ನಲ್ಲಿ ಸಂಗ್ರಹಿಸುವ ಮೂಲಕ ಶವ ಗುರುತು ಪತ್ತೆಯಾದ ನಂತರ ಮರಣೋತ್ತರ ಪರೀಕ್ಷೆಯಲ್ಲಿ ಫಲಿತಾಂಶ ನಿಖರವಾಗಿ ಪಡೆಯಲು ಸಹಾಯಕ ವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗೋಕುಲ್ದಾಸ್ ಎಕ್ಸ್ಪೋರ್ಟ್ ಚಾರಿಟಬಲ್ ಫೌಂಡೇಶನ್ನ ಶ್ರೀನಿ ವಾಸ್, ಸಿದ್ದೇಶ್ವರ್ ಗೌಡ, ಮಹಂತೇಶ್, ನಾಗರಾಜ್, ವಿಶ್ವನಾಥ್, ಕೆಂಪೇಗೌಡ, ವೀರಭದ್ರಾಚಾರಿ, ದೊಡ್ಡ ಬೆಳವಂಗಲ ಠಾಣೆ ಇನ್ಸ್ ಪೆಕ್ಟರ್ ನವೀನ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ. ರಾಜು ಹಾಗೂ ಸಿಬ್ಬಂದಿ ಹಾಜರಿದ್ದರು.