
ದೊಡ್ಡಬಳ್ಳಾಪುರ ಮೇ 27 ( ವಿಜಯ ಮಿತ್ರ ) : ದಾನಿಗಳು ತಮ್ಮ ಸ್ವಯಿಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಡವರಿಗೆ, ಹಸಿದವರಿಗೆ ಅನ್ನದಾನ ಮಾಡುತ್ತಿರುವುದು ಸಂತಸ ತಂದಿದೆ.1552 ನೇ ದಿನದ ದಾನಿಗಳಾಗಿ ಸಹಾಯಹಸ್ತ ನೀಡಿರುವ ಪುನೀತ್ ಅಪ್ಪು ರವರಿಗೆ ಶುಭವಾಗಾಲಿ ಎಂದು ಅನ್ನದಾಸೋಹಿ ಮಲ್ಲೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸತತ 1552ನೇ ದಿನಗಳ ಈ ನಿರಂತರ ಅನ್ನದಾಸೋಹ ಕಾರ್ಯಕ್ರಮವು ದಾನಿಗಳ ನೆರವಿನಿಂದ ಸಾಗುತ್ತಿದ್ದು. ಇಂದಿನ ಕಾರ್ಯಕ್ರಮಕ್ಕೆ ವಿಶೇಷವಾಗಿ ಎಳ್ಳುಪುರ ಕ್ರಾಸ್ ನಿವಾಸಿಗಳಾದ ಪುನೀತ್ ಅಪ್ಪು ರವರು ತಮ್ಮ ಪುತ್ರ ಪಿ ಸೂರ್ಯ ರವರ ಹುಟ್ಟುಹಬ್ಬದ ಅಂಗವಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಅನ್ನದಾಸೋಹ ಸಮಿತಿಗೆ ಸಹಕಾರ ನೀಡಿದ್ದು. ಅವರ ಈ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.
ಪುನೀತ್ ಅಪ್ಪು ರವರು ಮಾತನಾಡಿ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಹಲವು ಬಾರಿ ಭಾಗವಹಿಸಿದ್ದು. ಮಲ್ಲೇಶ್ ಮತ್ತು ತಂಡದ ನಿಸ್ವಾರ್ಥ ಸೇವೆ ನೋಡಿದ್ದೇನೆ. ಅವರ ಜನಪರ ಕಾರ್ಯದಲ್ಲಿ ನಮ್ಮದೊಂದು ಸಣ್ಣ ಸಹಾಯ ಮಾಡಿದ್ದೇವೆ. ಎಲ್ಲರೂ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ ಹಸಿದವರಿಗೆ ಆಹಾರ ವಿತರಣೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಖಾಸ್ ಬಾಗ್ ಕೆಂಪರಾಜು , ಮಾರಸಂದ್ರ ಶಂಕರ್ , ಶ್ರೀನಗರ ಶಶಿ , ದೊಡ್ಡತುಮಕೂರು ರಘು , ರಘು , ಕಡತನ ಮಲೆ ಮಂಜುನಾಥ್, ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.