
ದೊಡ್ಡಬಳ್ಳಾಪುರ ಗ್ರಾಮಾಂತರ ದೊಡ್ಡಬೆಳವಂಗಲ ಹೋಬಳಿ ತಿಪ್ಪೂರು ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅನೆಲಿಂಗೇಶ್ವರ ಸ್ವಾಮಿಯವರ ಕಟ್ಟೆಮನೆ ಮಹೋತ್ಸವ ನೆಡೆಯಿತು.
ಹಾಲು ಮತ ಸಂಸ್ಕೃತಿ ವೈಭವ ಮತ್ತು ಪೂರ್ವಜರ ಪರಂಪರೆಗಳನುಸಾರ ಕುರುಬ ಜನಾಂಗದವರ ಕುಲದೈವ ಶ್ರೀ ಆನೆಲಿಂಗೇಶ್ವರ ದೇವರ ಜಾತ್ರಾಮಹೋತ್ಸವವನ್ನು ಸಂಪ್ರದಾಯದಂತೆ ಆಚರಿಸಿದರು.
ದೇವಾಲಯದ ಪ್ರಧಾನ ಅರ್ಚಕ ಮಾತನಾಡಿ ಇತಿಹಾಸ ಹಿರಿಮೆಯ ದೈವತ್ವದ ಸದಾಚಾರಗಳನ್ನು ನಮ್ಮ ಸಮಾಜಕ್ಕೆ ಪಸರಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆದ್ದರಿಂದ ಕುಲದೇವರ ಸದ್ಭಕ್ತರೂ ಹಾಗೂ ಪೂಜಾರಿಗಳು ಗಂಗೆ ಪೂಜೆ ಹಾಗೂ ಮಹಾಲಕ್ಷ್ಮೀ ಪೂಜೆ ಶ್ರೀ ಅನೆಲಿಂಗೇಶ್ವರಸ್ವಾಮಿ ಯವರಿಗೆ ಕಂಕಣ ಕಟ್ಟುವ ಶಾಸ್ತ್ರ ,ಶ್ರೀ ಗಜಾರೂಢ ಅನೆಲಿಂಗೇಶ್ವರಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸಾಹದೊಂದಿಗೆ ಹೊಳೆ ಸ್ನಾನದ ನಂತರ ನಂದಿಧ್ವಜ ಕುಣಿತ, ವೀರಗಾಸೆ,ಗೊರವರ ಕುಣಿತ ಮತ್ತು ಕೀಲು ಕುದರೆ ಕುಣಿತ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ಈ ಜಾತ್ರಾ ಮಹೋತ್ಸವದ ಅಂಗವಾಗಿ ಆಚರಿಸಲಾಗುತ್ತದೆ ಎಂದರು.
ದೇವಾಲಯಧ ಅವರಣದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿದ ಕಲಾತಂಡದಿಂದ ವೀರಗಾಸೆ,ಗೊರವನ ಕುಣಿತ, ಕಾಲಾಟಕಾರರು,ಡೊಳ್ಳು ಕುಣಿತ, ಪೂಜಾ ಕುಣಿತ,ಸೇರಿದಂತೆ ಜನಪದ ನೃತ್ಯ ಪ್ರದರ್ಶನಗಳು ನೆರೆದಿದ್ದ ಭಕ್ತರ ಗಮನ ಸೆಳೆಯಿತು.
ವಿಶೇಷವಾಗಿ ತುಮಕೂರಿನಿಂದ ಅನೆಯನ್ನು ಕರೆತರಲಾಗಿತ್ತು ಬಂದ ಭಕ್ತರು ಮತ್ತು ಮಕ್ಕಳು ಆನೆಯ ಜೋತೆಯಲ್ಲಿ ಪೋಟೊ ತೆಗೆದುಕೊಳ್ಳುವುದು ಮತ್ತು ಮಕ್ಕಳಿಂದ ಬಾಳೆಹಣ್ಣು ಹಾಗೂ ಹಣವನ್ನು ನೀಡಿ ಆನೆಯಿಂದ ಆಶೀರ್ವಾದ ಪಡೆದುಕೊಳ್ಳುವುದು ಜಾತ್ರೆಗೆ ಬಂದ ಭಕ್ತರಲ್ಲಿ ವಿಶೇಷವಾಗಿ ಕಾಣುತ್ತಿತ್ತು.
ಈ ಸಂದರ್ಭದಲ್ಲಿ ಶ್ರೀ ಆನೆಲಿಂಗೇಶ್ವರ ಸ್ವಾಮಿ ಕಟ್ಟೆಮನೆ ಜೀರ್ಣೋದ್ದಾರ ಟ್ರಸ್ಟ್ ನ ಅಧ್ಯಕ್ಷ ಟಿ.ಸಿ ಚನ್ನಕೇಶವ , ಗೌರವಅಧ್ಯಕ್ಷ ಎಸ್ .ವೆಂಕಟೇಶ, ಕಾರ್ಯದರ್ಶಿ ಎಂ ಎಸ್. ಜಗದೀಶ,ಪದಾಧಿಕಾರಿಗಳಾದ ಎಂ ಶಿವಲಿಂಗಪ್ಪ,ಎಂ ಮುನಿಕೃಷ್ಣಪ್ಪ. ಎಸ್ .ಗೋಪಾಲ್,ಹೆಚ್.ಕೆ. ವೀರ ಕೆಂಪಯ್ಯ, ಸೇರಿದಂತೆ ಟ್ರಸ್ಟ್ ನ ಸದಸ್ಯರು ಸಾವಿರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು .