
ನಮ್ಮಲ್ಲಿ ಸರ್ವ ಧರ್ಮಗಳ ಸಮ್ಮಿಲನವಾಗಿದ್ದು, ಇಂದಿನ ಶ್ರೀನಿವಾಸ ಕಲ್ಯಾಣ ಮತ್ತು ಶ್ರೀ ಪೂರಿ ಜಗನ್ನಾಥ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಮ್ಮ ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯಲ್ಲಿ ಒಂದು ಮಿನಿ ಇಂಡಿಯಾ ವನ್ನು ಕಾಣಬಹುದಾಗಿದೆ ಎಂದು PWC ಅಪಾರ್ಟ್ಮೆಂಟ್ ನ ಅಧ್ಯಕ್ಷೆ ವಿದ್ಯಾ ಮಿಶ್ರ ತಿಳಿಸಿದರು.
ಜುಲೈ 7ರಂದು ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯ ನಿವಾಸಿಗಳು ಶ್ರೀನಿವಾಸ ಕಲ್ಯಾಣ ಹಾಗೂ ಪೂರಿಜಗನ್ನಾಥ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗೋ ಪೂಜೆ ಗಣೇಶ ಪೂಜೆ ಸೇರಿದಂತೆ ಬೆಳಗಿನಿಂದಲೂ ಹಲವು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು ಕಾರ್ಯಕ್ರಮವು ಅದ್ದೂರಿಯಾಗಿ ಮೂಡಿ ಬಂದಿದೆ. ಸುಮಾರು 42 ಎಕ್ಕರೆ ಪ್ರದೇಶದಲ್ಲಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಪೂರಿಜಗನ್ನಾಥ ರಥೋತ್ಸವ ಸಾಗುತ್ತಿದ್ದು ಸಂಪೂರ್ಣ ಅಪಾರ್ಟ್ಮೆಂಟ್ ಪ್ರದೇಶವು ಕೃಷ್ಣಮಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಧ್ಯಾಹ್ನ 1500 ಭಕ್ತಾದಿಗಳು ಪ್ರಸಾದ ಸ್ವೀಕರಿಸಿದ್ದು. ಸಂಜೆ ಬರೋಬ್ಬರಿ 3000ಕ್ಕೂ ಅಧಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಸ್ಥಳೀಯ ನಿವಾಸಿ ಶಾಂತಕುಮಾರ್ ಗೌಡ ಮಾತನಾಡಿ ನಮ್ಮಲ್ಲಿ ದೇಶದ ಹಲವು ಭಾಗಗಳಿಂದ ಬಂದು ವಾಸ ಮಾಡುತ್ತಿರುವ ಹಲವು ಬಗೆಯ ನಿವಾಸಿಗಳನ್ನು ನೀವು ಕಾಣಬಹುದಾಗಿದೆ. ಆದರೆ ನಮ್ಮಲ್ಲಿ ಯಾವುದೇ ಜಾತಿ ಭೇದವಿಲ್ಲ ಸರ್ವರೂ ಸಮಾನರಾಗಿ ಸಮಾನತೆಯಿಂದ ಬಾಳ್ವೆ ನಡೆಸುತ್ತಿದ್ದೇವೆ. ನಮ್ಮಲ್ಲಿ ಎಲ್ಲಾ ರೀತಿಯ ಹಬ್ಬ ಹರಿದಿನಗಳನ್ನು ಸರ್ವ ಸಮುದಾಯದವರು ಒಗ್ಗೂಡಿ ಆಚರಿಸುವುದು ವಾಡಿಕೆಯಾಗಿದೆ ಎಂದರು.
ಸ್ಥಳೀಯ ನಿವಾಸಿ ಚಂದ್ರಶೇಖರ್ ಶೆಟ್ಟಿ ಮಾತನಾಡಿ ಈ ಬಾರಿ ಪೂರಿ ಜಗನ್ನಾಥ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸುವುದು ನೋಡಲು ಸಂತಸವಾಗುತ್ತದೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ಸ್ ಎಲ್ಲರೂ ಒಟ್ಟಾಗಿ ಸೇರಿ ಈ ಹಬ್ಬವನ್ನು ಆಚರಿಸುತ್ತಿದ್ದು. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಸರ್ವಧರ್ಮಗಳ ಹಬ್ಬಗಳನ್ನು ಆಚರಿಸುತ್ತೇವೆ. ಉದಾಹರಣೆಗೆ ಬಕ್ರೀದ್, ರಂಜಾನ್, ಗುಡ್ ಫ್ರೈಡೇ, ಕ್ರಿಸ್ ಮಸ್, ಗಣೇಶ ಚತುರ್ಥಿ, ದಸರಾ ಹೀಗೆ ಎಲ್ಲಾ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ ಎಂದರು.
ಕಾರ್ಯಕ್ರಮದ ಆಯೋಜಕ ದೇವಿ ಪ್ರಸಾದ್ ಮಿಶ್ರ ಮಾತನಾಡಿ ಜುಲೈ 7ರಂದು ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇದೇ ದಿನ ಶ್ರೀ ಕ್ಷೇತ್ರ ಪೂರಿ ಜಗನ್ನಾಥ ದೇವಾಲಯದಲ್ಲಿ ಜಗನ್ನಾಥ ರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ನಮ್ಮ ಪಿಡಬ್ಲ್ಯೂಸಿ ಅಪಾರ್ಟ್ಮೆಂಟ್ ನಲ್ಲೂ ಕೂಡ ಜಗನ್ನಾಥ ರಥೋತ್ಸವ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಸಿ ಅಪಾರ್ಟ್ಮೆಂಟ್ ನ ಮುಖಂಡರು, ಸಾವಿರಾರು ನಿವಾಸಿಗಳು ಉಪಸ್ಥಿತರಿದ್ದರು.