
ಯಲಹಂಕ ಮಾರ್ಗದ ಕೆಲ ಗಣಪತಿ ಮೂರ್ತಿ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಮತ್ತು 5 ಆಡಿಗಿಂತ ಎತ್ತರದ ಗಣೇಶ ಮೂರ್ತಿಗಳ ತಯಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವ ಸಂಚಲನ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶ್ರೀನಿವಾಸ್ ಮತ್ತು ತಂಡ ಗಣೇಶ ಮೂರ್ತಿಗಳ ತಯಾರಿಕ ಘಟಕ( ಶೆಡ್ )ಗಳ ಮೇಲೆ ದಾಳಿ ನಡೆಸಿತು.
ಬಹುತೇಕ ಗಣೇಶ ಮೂರ್ತಿ ತಯಾರಿಕ ಘಟಕಗಳು ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ, ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಮತ್ತು 5 ಆಡಿಗಿಂತ ಎತ್ತರದ ಗಣೇಶ ಮೂರ್ತಿಗಳ ತಯಾರಿಕೆಯನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ.ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೆಲ ಘಟಕಗಳು ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗಿವೆ.
ಈ ಸಾಲಿನಲ್ಲಿ ಯಲಹಂಕ ತಾಲೂಕಿನ ಮಾರಸಂದ್ರದಲ್ಲಿ ಗಣೇಶ ಮೂರ್ತಿ ತಯಾರಿಕೆಯ 9 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಎಲ್ಲಾ ಘಟಕಗಳಲ್ಲಿ ಕಾನೂನು ಬಾಹಿರವಾಗಿಯೇ ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ನಾಗದಳ ಮತ್ತು ಯುವ ಸಂಚಲನ ತಂಡಗಳು ಪರಿಸರ ಮಾಲಿನ್ಯ ನಿಯಂತ್ರಣ ಘಟಕಕ್ಕೆ ದೂರು ಸಲ್ಲಿಸಿದ್ದು.ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು , ಪರಿಸರ ಪ್ರೇಮಿಗಳ ಒತ್ತಡಕ್ಕೆ ಮಣಿದ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಗಣೇಶ ಮೂರ್ತಿ ತಯಾರಿಕ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ, ಈ ವೇಳೆ ಪ್ಲಾಸ್ಟರ್ ಆಫ್ ಫ್ಯಾರೀಸ್, ಬಣ್ಣ ಲೇಪಿತ ಗಣೇಶ ಮೂರ್ತಿಗಳು ಪತ್ತೆಯಾಗಿದ್ದು ಅಧಿಕಾರಿಗಳ ದಾಳಿಗೆ ಹೆದರಿದ ಇನ್ನೂಳಿದ 8 ಘಟಕಗಳು ಬಾಗಿಲು ಹಾಕಿ ಪರಾರಿಯಾಗಿದ್ದಾರೆ.
ಸರ್ಕಾರವು ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡುವ ಗಣೇಶಮೂರ್ತಿಗಳನ್ನು ಬಳಸದಂತೆ, ನಿರ್ಮಿಸಿ ಮಾರಾಟ ಮಾಡದಂತೆ ಆದೇಶಿಸಿದ್ದರು. ಸಹ ಕೆಲ ಗಣಪತಿ ಮೂರ್ತಿ ತಯಾರಕರು ಹಣದ ಆಸೆಗೆ ಇಂದಿಗೂ ಅಕ್ರಮವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಗಣಪತಿಗಳನ್ನು ತಯಾರಿಸುತ್ತಿದ್ದಾರೆ.
ಈ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕಿನ ಯುವ ಸಂಚಲನ ಸಂಘಟನೆಯ ಮುಖಂಡ ಗಿರೀಶ್ ನೀಡಿದ ದೂರಿನ ಹಿನ್ನೆಲೆ ಅಧಿಕಾರಿಗಳ ತಂಡ ಗಣೇಶ ತಯಾರಿಕಾ ಅಡ್ಡಗಳಿಗೆ ಭೇಟಿಕೊಟ್ಟು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಗಣಪತಿಗಳನ್ನು ತಯಾರಿಸಿದಂತೆ ಎಚ್ಚರಿಕೆ ನೀಡಿದರು.
ಪ್ರತಿ ವರ್ಷವೂ ಪ್ಲಾಸ್ಟರ್ ಆಫ್ ಪ್ಯಾರೀಸ್ (POP), ಬಣ್ಣ ಲೇಪಿತ ಗಣಪತಿಗಳ ತಯಾರಾಗುತ್ತಿದ್ದು. ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸದ ಕಾರಣ ಇದು ಇಂದಿಗೂ ಸಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಯುವ ಸಂಚಲನ ಮುಖಂಡ ಚಿದಾನಂದ್ ಆರೋಪಿಸಿದರು.
ಪಿಓಪಿ ಅಥವಾ ರಾಸಾಯನಿಕ ಬಣ್ಣವುಳ್ಳ ಗಣಪತಿ ಮಾರಾಟ ಮಾಡುವುದು, ತಯಾರಿಸುವುದು ಅಪರಾಧವೆಂದು ಸರ್ಕಾರವು ಈಗಾಗಲೇ ಆದೇಶ ನೀಡಿದ್ದು, ತಯಾರಕರು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದೆ ಇಂದಿಗೂ ಕೆಲ ಪ್ರಭಾವಿಗಳ ಬೆಂಬಲದಿಂದ ತಯಾರಿಕೆ ನಡೆಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ದೂರು ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ , ಇನ್ನಾದರೂ ಅಧಿಕಾರಿಗಳು ಏಚ್ಚೆದ್ದು ಈ ಪಿ ಓ ಪಿ ಗಣೇಶಗಳಿಗೆ ಬ್ರೇಕ್ ಹಾಕಬೇಕಿದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಅ) ಕಾಯ್ದೆ ಪ್ರಕಾರ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ , ಬಣ್ಣ ಲೇಪಿತ ವಿಗ್ರಹಗಳನ್ನು, ರಾಜ್ಯದ ಯಾವುದೇ ಜಲಗಳಲ್ಲಿ, ನದಿ, ಕಾಲುವೆ, ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಲಂ 45-1 ಅನ್ವಯ 10 ಸಾವಿರ ದಂಡವನ್ನು ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ. ಅಲ್ಲದೆ ಕಡ್ಡಾಯವಾಗಿ ಗಣೇಶ ಮೂರ್ತಿಗಳು 5 ಅಡಿ ಎತ್ತರವನ್ನು ಮೀರಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ. ಈ ರೀತಿಯ ಗಣೇಶಗಳನ್ನು ಜನತೆ ಖರೀದಿ ಮಾಡಿ ಕೆರೆ ಕುಂಟೆ ಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಸಂಪನ್ಮೂಲ ಸಂಪೂರ್ಣ ಹಾಳಾಗುತ್ತದೆ. ಸಾರ್ವಜನಿಕರು ಇನ್ನಾದರೂ ಎಚ್ಚೆದ್ದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಲು ಮುಂದಾಗ ಬೇಕಿದೆ ಎಂದರು.
ಈ ಸಂದರ್ಭದಲ್ಲಿ ಯುವ ಸಂಚಲನ ಸಂಘಟನೆಯ ಯುವಪಡೆ, ಅರಕೆರೆ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿರಿದ್ದರು