
ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರವೇ ರಜೆ ಘೋಷಿಸಿದರು, ರಾಜ್ಯ ಸರ್ಕಾರದ ಆದೇಶ ಅವರು ಧಿಕ್ಕರಿಸಿ, ಕಾರ್ಮಿಕರಿಂದ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಸೋಲಾರ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಚಿರಋಣಿ ಕನ್ನಡಾಂಬೆ ಹೊರಟ ಸಮಿತಿ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು.
ಖ್ಯಾತ ವಕೀಲರು ಹಾಗೂ ಕನ್ನಡ ಪರ ಹೋರಾಟಗಾರಾದ ರವಿ ಮಾವಿನಕುಂಟೆ ಮಾತನಾಡಿ ಕರ್ನಾಟಕದ ನೆಲ ಜಲ ಸಂಪನ್ಮೂಲ ಬಳಸಿ ಹಣ ಗಳಿಸುವ ಕಾರ್ಖಾನೆಗಳಿಗೆ , ಕನ್ನಡ ಭಾಷೆ, ಕನ್ನಡಿಗರ ಸ್ವಾಭಿಮಾನಕ್ಕೆ ಗೌರವ ಸಲಿಸಬೇಕೆಂಬುದು ಅರಿವಿಲ್ಲದಂತಿದೆ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಇಂದು ಕರ್ತವ್ಯ ನಡೆಸಲು ಮುಂದಾಗಿರುವ ಸುಪ್ರೀಂ ಸೋಲಾರ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿದೆ ಎಂದರು
ಕನ್ನಡ ರಾಜ್ಯೋತ್ಸವ ರಾಜ್ಯದ ಪ್ರತಿ ಕನ್ನಡಿಗರಿಗೂ ದೊಡ್ಡ ಹಬ್ಬ ಇಂತಹ ದಿನದಂದು ಸರ್ಕಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ರಜೆ ಘೋಷಿಸಿದ್ದು ಸರ್ಕಾರಿ ಆದೇಶವನ್ನು ಉಲ್ಲಂಘನೆ ಮಾಡಿ ತಾಲೂಕಿನ ಸುಪ್ರೀಂ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಾರ್ಮಿಕರಿಗೆ ರಜೆ ಘೋಷಿಸದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯು ಕಾರ್ಖಾನೆ ಬಳಿ ಪ್ರತಿಭಟನೆಗೆ ಮುಂದಾಗಿದ್ದೆವೆ ಇದು ಕನ್ನಡಿಗರ ಸ್ವಾಭಿಮಾನಕ್ಕೆ ಅದಕ್ಕೆ ಉಂಟು ಮಾಡುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಸುಬ್ರಮಣಿ ತಿಳಿಸಿದರು.
ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಆನಂದ ಮಾತನಾಡಿ ಕಾರ್ಖಾನೆ ಬಳಿ ಬಂದು ವಿಚಾರಿಸಿದಾಗ ಕೇವಲ ನಾಲ್ಕು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಕಾರ್ಖಾನೆ ಸಿಬ್ಬಂದಿ ತದನಂತರ ಕಾರ್ಖಾನೆಯಿಂದ ಸುಮಾರು 350ಕ್ಕೂ ಅಧಿಕ ಕಾರ್ಮಿಕರು ಹೊರ ಬರುತ್ತಿದ್ದಾರೆ, ಕಾರ್ಖಾನೆ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
Ad
ತಾಲೂಕು ಘಟಕದ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಖಚಿತ ಮಾಹಿತಿ ಹಿನ್ನೆಲೆ ಸುಪ್ರೀಂ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಭೇಟಿ ಕೊಟ್ಟಿದ್ದು , ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದರೆ ಇಲ್ಲ ನಮ್ಮಲ್ಲಿ ಕರ್ತವ್ಯ ನಡೆಸುತ್ತಿಲ್ಲ ಎಂದು ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆ, ಪೊಲೀಸ್ ಬಂದ ನಂತರ ಸುಮಾರು 350ಕ್ಕೂ ಅಧಿಕ ಕಾರ್ಮಿಕರು ಕಾರ್ಖಾನೆಯಿಂದ ಹೊರ ಬಂದಿದ್ದು , ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವದಕ್ಕೆ ನಿದರ್ಶನವಾಗಿದೆ, ಇಂತಹ ಕಂಪನಿ ವಿರುದ್ಧ ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅರಿವು ಮೂಡಿಸುವ ಕಾರ್ಯಕ್ಕೆ ಬಂದಾಗ ಬೇಕಿದೆ , ಕನ್ನಡ ಭಾಷೆ ನೆಲ ಜಲದ ವಿಚಾರದಲ್ಲಿ ನಮ್ಮ ಸಂಘಟನೆ ಎಂದಿಗೂ ಹಿಂಜರಿಯುವುದಿಲ್ಲ ಎಂದರು.
ಕನ್ನಡಪರ ಹೋರಾಟಗಾರ ಮಲ್ಲೇಶ್ ಮಾತನಾಡಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಕಾರ್ಯಗಳನ್ನು ಮಾಡುತ್ತಾ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಹಣ ಆಸ್ತಿ ಮಡುವ ಕಾರ್ಖಾನೆಗಳು ಸಾಕಷ್ಟು ಆಗಿವೆ. ಇದಕ್ಕೆ ಪೂರಕವೆಂಬಂತೆ ಇಂದು ತಾಲೂಕಿನ ಸುಪ್ರೀಂ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಕನ್ನಡ ರಾಜ್ಯೋತ್ಸವಕ್ಕೆ ರಜೆ ಘೋಷಿಸದೆ. ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದೆ. ಇಂತಹ ಕಾರ್ಖಾನೆಗಳಿಗೆ ಕಾನೂನು ಚಾಟಿ ಬೀಸುವ ಮೂಲಕ ತಕ್ಕ ಪಾಠಕಲಿಸಬೇಕಿದೆ.ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಬಾವುಟವನ್ನು ಹರಿಸಬೇಕೆಂಬ ಕನಿಷ್ಠ ಜ್ಞಾನವಿಲ್ಲದ ಸಂಸ್ಥೆ ವಿರುದ್ಧ ಕ್ರಮ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು