
ದೊಡ್ಡಬಳ್ಳಾಪುರ : ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಿ ಮಾರನೇ ದಿನ ಅಣ್ಣತಮ್ಮಂದಿರಂತೆ ಇದ್ದ ದೊಡ್ಡತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಲ್ಲಿ ರಾಜಕೀಯ ದ್ವೇಷ, ಅಸೂಯೆ ಮೂಡುವಂತೆ ಮಾಡುವಲ್ಲಿ ಶಾಸಕರು ನೇರವಾಗಿ ಅಥವಾ ಅವರ ಕಾರ್ಯಕರ್ತರ ಮೂಲಕ ಮಾಡಿಸಿ ಅಶಾಂತಿಯ ವಾತವಾರಣಕ್ಕೆ ಕಾರಣರಾಗಿದ್ದಾರೆ ಎಂದು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಟಿಎನ್ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡತುಮಕೂರು ವಿಎಸ್ಎಸ್ಎನ್ ಸಹಕಾರ ಸಂಘದ ಚುನಾವಣೆಯಲ್ಲಿನ ಬೆಳವಣಿಗೆ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಕೆಲವರು ಜೆಡಿಎಸ್ ಮುಖಂಡ ಹರೀಶ್ ಗೌಡರ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಿದ್ದಾರೆ ಅವರಿಗೆ ತಿಳಿಸುವುದೇನೆಂದರೆ ನಮ್ಮ ಗ್ರಾಮಕ್ಕೆ ಹರೀಶ್ ಗೌಡರನ್ನು ಮೊದಲು ಕರೆತಂದವರೇ ವಸಂತ್ ಕುಮಾರ್ ಆದರೆ ಇಂದು ಅವರ ಕೊಡುಗೆ ಏನು ಎಂದು ಅವರೇ ಪ್ರಶ್ನೆ ಮಾಡುವುದು ಹಾಸ್ಯಸ್ಪದವಾಗಿದೆ, ಗ್ರಾಮದಲ್ಲಿ ಈವರೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದ್ದಾರೆ. ಹರೀಶ್ ಗೌಡ ತಾಲ್ಲೂಕಿನಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸಿದ್ದಾರೆ. ಜೆಡಿಎಸ್ ಇಬ್ಬಾಗವಾಗಿಲ್ಲ… ಜೆಡಿಎಸ್ ಕಾರ್ಯಕರ್ತರು ಸದಾ ಒಮ್ಮತದ ನಿರ್ಧಾರದಿಂದ ಜೊತೆಯಲ್ಲಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ರಾಮಕೃಷ್ಣ ಮಾತನಾಡಿ ಈ ವಿಎಸ್ಎಸ್ಎನ್ ಸಹಕಾರಿ ಸಂಘ ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಚುಂಚಗೌಡ ಹಾಗೂ ಕೆಂಪಣ್ಣನವರು, ಈ ಸಂಘ ಪ್ರಾರಂಭವಾದ ಸಮಯದಲ್ಲಿ ಸರ್ವ ಪಕ್ಷಗಳಿಗೆ ಸಮಪಾಲು ಅಧಿಕಾರ ನೀಡಿ ಪ್ರಾರಂಭಿಸಿದೆವು, ಆದರೆ ಈ ಒಪ್ಪಂದವನ್ನು ಬಿಜೆಪಿ ಪರಿಪಾಲನೆ ಮಾಡದ ಕಾರಣ ಈ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ರಾಜಕೀಯ ಉದ್ದೇಶದಿಂದ ಚುನಾವಣೆ ಅಧಿಕಾರಿಯಾಗಿದ್ದ ಮಾಧವರೆಡ್ಡಿ ಬದಲಾಗಿ ನಾಗಮಣಿಯವರನ್ನು ಕರೆತಂದವರು ನೀವು, ಚುನಾವಣೆಯಲ್ಲಿ ಗಲಾಟೆ ಉಂಟಾದಾಗ ಸ್ಥಳಕ್ಕೆ ಬಂದ ಶಾಸಕರು ಇತರೆ ಪಕ್ಷಗಳ ಅಹವಾಲುಗಳನ್ನು ಆಲಿಸದೇ ತಾವೇ ಬಿಜೆಪಿ ಪಕ್ಷದ ಪರ ನಿಂತು ಪ್ರತಿಭಟನೆಗೆ ಮುಂದಾಗುತ್ತಾರೆ. ಶಾಸಕರು ಕೇವಲ ಒಂದು ಪಕ್ಷಕ್ಕೆ ಶಾಸಕರಲ್ಲ ಅವರು ತಾಲ್ಲೂಕಿನ ಪ್ರಥಮ ಪ್ರಜೆಯಗಿರುತ್ತಾರೆ, ಸರ್ವರಿಗೂ ಹಿತ ಕಾಯುವ ಕಾರ್ಯ ಮಾಡುವುದು ಅವರ ಪ್ರಮುಖವಾಗಿರುತ್ತದೆ ಅದನ್ನು ಅವರು ಅರಿಯಬೇಕಿದೆ ಎಂದರು.
ಮುಖಂಡ ವೆಂಕಟೇಶ್ ಮಾತನಾಡಿ ಹರೀಶ್ ಗೌಡ ಮುಖಕ್ಕೆ ಮಸಿ ಬಳಿಯುತ್ತೇವೆ ಎನ್ನುವ ಮನಸ್ಥಿತಿ ಕುರಿತು ಶಾಸಕರು ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕಿದೆ, ಈ ಮಾತುಗಳು ಯಾರ ಭಾವನೆಯನ್ನು ವ್ಯಕ್ತಪಡಿಸುತ್ತವೆ ಎಂಬುದು ಪ್ರಶ್ನೆಯಾಗಿದೆ.. ?ಈ ಕುರಿತು ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೆವೆ ಶಾಸಕರು ತಮ್ಮ ಹಿಂಬಾಲಕರಿಗೆ ಈ ಮನಸ್ಥಿತಿಯನ್ನು ಕೈಬಿಡುವಂತೆ ಬುದ್ದಿ ಹೇಳಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಮಾತನಾಡಿ ಅಜಯ್ ಮಾತನಾಡಿ ನಮ್ಮೊಂದಿಗೆ ಒಡಂಬಡಿಕೆಯಲ್ಲಿ ಮಾಡಿಕೊಳ್ಳುವ ಮನಸ್ಥಿತಿ ಇರುವ ಬಿಜೆಪಿಗರು ನಾವು ಬೆಂಬಲಿಸಿ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಬಲವಂತದಿಂದ ಹಿಂಪಡೆಯುವಂತೆ ಮಾಡುವುದು ಎಷ್ಟು ಸರಿ, ಅವರು ಕುತಂತ್ರದಿಂದ ಚುನಾವಣೆಗೆ ಮುಂದಾಗಿದ್ದರು ಅದಕ್ಕೆ ತಕ್ಕ ಉತ್ತರವನ್ನು ನಾವು ನೀಡಿದ್ದೇವೆ ಎಂದರು. ಚುನಾವಣೆಯಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ ಸಂಘವನ್ನು ಅಭಿವೃದ್ಧಿಯತ್ತಾ ನೆಡಿಸುವ ಮಾರ್ಗ ಅನುಸರಿಸಬೇಕಿದೆ ಎಂದರು.
ಮುಖಂಡರಾದ ದೀಪು ಮಾತನಾಡಿ ಇದು ನಮ್ಮ ದೊಡ್ಡತುಮಕೂರಿನ ಮೊದಲ ಚುನಾವಣೆ, ಈ ಚುನಾವಣೆಯಲ್ಲಿ ಸತತವಾಗಿ ಮೈತ್ರಿಗೆ ಪ್ರಯತ್ನ ಮಾಡಿದ್ದೆವು ಆದರೆ ಬಿಜೆಪಿ ಒಪ್ಪದ ಕಾರಣ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ . ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿದ್ದರೆ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು, ಚುನಾವಣೆ ನೆಡೆಸಲು ಇದ್ದ ಬದ್ಧತೆ ಗ್ರಾಮದ ಅಭಿವೃದ್ಧಿಗೆ ಬಳಸಿ ಎಂದರು.
ಗ್ರಾಮಪಂಚಾಯತಿ ಸದಸ್ಯ ವಿರೇಗೌಡ ಮಾತನಾಡಿ ಸೊಸೈಟಿಯನ್ನು ಒಂದು ಉತ್ತಮ ಸ್ಥಿತಿ ತಲುಪಿಸುವುದು ನಮ್ಮೆಲ್ಲರ ಉದ್ದೇಶವಾಗಿತ್ತು, ಆದರೆ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ ನಮ್ಮ ಸೊಸೈಟಿ ಹೆಸರನ್ನು ಹಾಳುಮಾಡಿದ್ದಾರೆ, ಇಂದು ನಮ್ಮ ಸಹಕಾರಿ ಸಂಘ 3ಲಕ್ಷ ನಷ್ಟದಲ್ಲಿ ನೆಡೆಯುತ್ತಿದೆ, ಇದಕ್ಕೆ ಕಾರಣ ಯಾರು, ಕಾನೂನು ಮೊರೆಹೋದ ನಂತರ ಕಾನೂನು ಪಾಲನೆ ಮಾಡಬೇಕಲ್ಲವೇ.. ವಿನಾಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಸುದ್ದಿಗೊಷ್ಟಿಯಲ್ಲಿ ಮುಖಂಡರಾದ ಚೈತ್ರ ಭಾಸ್ಕರ್, ವಿರೇಗೌಡ ಅಜಯ್, ದೀಪು, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.