
ದೊಡ್ಡಬಳ್ಳಾಪುರ ( ವಿಜಯ ಮಿತ್ರ ): ಯುವ ಜನತೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನಮೂಡಿಸುವುದೇ ಈ ಕಾರ್ಯಕ್ರದ ಮುಖ್ಯ ಉದ್ದೇಶ ಓಟದ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ವಿಶೇಷ ಈ ನಮ್ಮ ಕಾರ್ಯಕ್ರಮಕ್ಕೆ ತಾಲ್ಲೂಕಿನ ಡಿ ಟಿ ಎ ಎ ಸಹಯೋಗ ದೊರೆತಿದ್ದು ಮ್ಯಾರಥೋನ್ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ರೂಪಿಸಲಾಗಿದೆ ಎಂದು ಕನ್ನಡ ಪರ ಹೋರಾಟಗಾರರು ಹಾಗೂ ನಗರಸಭಾ ಸದಸ್ಯ ತ ನಾ ಪ್ರಭುದೇವ್ ತಿಳಿಸಿದರು.
69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಡಿ ಟಿ ಎ ಎ ಸಹಾಯವದೊಂದಿಗೆ 5ಕೆ ಮ್ಯಾರಥಾನ್ ಓಟ ಕುರಿತಂತೆ ನಗರದ ಕನ್ನಡ ಜಾಗೃತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ತೆಲುಗು ತಮಿಳು ಚಲನಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುವಂತೆ ಹೋರಾಟನೆಡೆಸಿದ ಹೆಗ್ಗಳಿಕೆ ನಮ್ಮ ಭುವನೇಶ್ವರಿ ಕನ್ನಡ ಸಂಘಕ್ಕೆ ಸಲ್ಲುತ್ತದೆ, ಕನ್ನಡ ಭಾಷೆ ಕುರಿತಂತೆ ಹಲವಾರು ರೀತಿಯ ಹೋರಾಟಗಳನ್ನು ಮಾಡಿ ನಿರಂತರ ಕನ್ನಡ ಸೇವೆ ಮಾಡುತ್ತಿದ್ದೇವೆ ಅಂತೆಯೇ ಹೊಸ ಪೀಳಿಗೆಯ ಯುವ ಜನತೆಗಾಗಿ ಈ 5 ಕಿ.ಮೀಗಳ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ರೂಪಿಸಿದ್ದು ಕನ್ನಡಕ್ಕಾಗಿ ಓಟ ಆಯೋಜನೆ ಮಾಡಿದ್ದೇವೆ ಎಂದರು.
ಈಗಾಗಲೇ ಆನ್ಲೈನ್ ನಲ್ಲಿ ನೂರಕ್ಕೂ ಅಧಿಕ ಯುವಕರು ನೊಂದಣಿ ಪಡೆದಿದ್ದು , ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳುವ ಯುವಕರಿಗೆ ಟಿ-ಶರ್ಟ್ ವಿತರಣೆ ಮಾಡುವುದಾಗಿ ತಿಳಿಸಿದರು.
ಡಿ ಟಿ ಎ ಎ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಮೂಲತಃ ನಾನು ದೈಹಿಕ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸತಂದಿದೆ,ಇಂತಹ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಯಿಂದ ಯುವಕರಲ್ಲಿ ಕ್ರೀಡಾಮನೋಭಾವ ಹೆಚ್ಚಿಸುವುದಷ್ಟೇ ಅಲ್ಲದೇ ಭಾಷೆ ಕುರಿತು ಅಭಿಮಾನ ಹೆಚ್ಚಿಸುತ್ತದೆ, ಮ್ಯಾರಥಾನ್ ಓಟದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದೇವೆ. ಓಟ ಕೇವಲ ದೈಹಿಕವಾಗಿ ಶಕ್ತಿ ನೀಡುವುದಲ್ಲದೆ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢರನ್ನಾಗಿ ಮಾಡುತ್ತದೆ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಮ್ಯಾರಥಾನ್ ಓಟದ ರೂಟ್ ಮ್ಯಾಪ್
ನಗರದ ಸಿದ್ದಲಿಂಗಯ್ಯ ಸರ್ಕಲ್ ನಿಂದ ಹೊರಟು ಸರ್ಕಾರಿ ಆಸ್ಪತ್ರೆ ವೃತ್ತ ದ ಮೂಲಕ ಮಹಾತ್ಮ ಗಾಂಧಿ ವೃತ ಡಿ ಕ್ರಾಸ್ ಮಾರ್ಗವಾಗಿ ಡಾಕ್ಟರ್ ಅಂಬೇಡ್ಕರ್ ವೃತ್ತ (ಪ್ರವಾಸಿ ಮಂದಿರ) ಮುಖೇನಾ ಸಮೃದ್ಧಿ ಹೋಟೆಲ್ ಮುಂಭಾಗದ ರಸ್ತೆಯ ಮೂಲಕ ಭಗತ್ ಸಿಂಗ್ ಕ್ರೀಡಾಂಗಣ ತಲುಪುವುದು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನವೀನ್, ಫಯಾಜ್, ಪ್ರವೀಣ್ ಶಾಂತಿನಗರ , ವೇಣು, ರಾಮಕೃಷ್ಣ, ಚೌಡಪ್ಪ, ಶ್ರೀನಿವಾಸ್ ಸೂರ್ಯನಾರಾಯಣ್ ಸೇರಿದಂತೆ ಹಲವರು ಉಪಸಿತರಿದ್ದರು.