
ದೊಡ್ಡಬಳ್ಳಾಪುರ : ಹಳೇ ದ್ವೇಷದ ಹಿನ್ನಲೆ ಪತ್ರಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಪತ್ರಕರ್ತ ದೊಡ್ಡಬಳ್ಳಾಪುರ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ರಥದಬೀದಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ಪತ್ರಕರ್ತರಾದ ಶಿವಕುಮಾರ್ ಸ್ವಾಮಿ ಎಂಬುವರು ಹಲ್ಲೆಗೆ ತುತ್ತಾಗಿದ್ದಾರೆ, ನಿನ್ನೆ ರಾತ್ರಿ 8:30 ಸಮಯದಲ್ಲಿ ಶಿವಕುಮಾರ್ ಸ್ವಾಮಿ ಮನೆಯ ಬಳಿ ಇದ್ದಾಗ, ಏಕಾಏಕಿ ಬಂದ ಲೋಕೇಶ್ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ, ಇದನ್ನು ಶಿವಕುಮಾರ್ ವಿಡಿಯೋ ಮಾಡಲು ಮುಂದಾದಾಗ, ಲೋಕೇಶ್ ಸೇರಿದಂತೆ ಶೇಖರ್ , ರಾಮಚಂದ್ರ, ನಾಗಮಣಿ, ವೆಂಕಟಲಕ್ಷಮ್ಮ, ದೊಣ್ಣೆ, ರಾಡ್ ಮತ್ತು ಚಾಕುವಿನಿಂದ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ನೀಡಲಾಗಿದೆ.
ಹಲ್ಲೆಯಲ್ಲಿ ಶಿವಕುಮಾರ್ ಸ್ವಾಮಿಯವರ ಕಣ್ಣಿನ ಕೆಳಭಾಗದಲ್ಲಿ ಪೆಟ್ಟಾಗಿದೆ, ಶಿವಕುಮಾರ್ ತಂದೆ ತಾಯಿಯನ್ನ ಥಳಿಸಲಾಗಿದೆ, ಹಲ್ಲೆ ಮಾಡಿದವರು ಎದುರು ಮನೆಯವರಾಗಿದ್ದು, ಕೋವಿಡ್ ಸಮಯದಲ್ಲಿ ಶಟಲ್ ಕಾಕ್ ನೆಟ್ ಕಟ್ಟುವ ವಿಚಾರಕ್ಕೆ ಸಂಬಂಧಿಸದಂತೆ ಎರಡು ಮನೆಗಳ ನಡುವೆ ಜಗಳವಾಗಿದ್ದು, ಇದೇ ದ್ವೇಷಕ್ಕೆ ನಿನ್ನೆ ರಾತ್ರಿ ಏಕಾಏಕಿ ಬಂದ ಹಲ್ಲೆ ನಡೆಸಿದ್ದಾರೆಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.