
ದೊಡ್ಡಬಳ್ಳಾಪುರ : ಭಾರತ ದೇಶದ ಗಡಿ ಭಾಗವನ್ನು ಕಾಯುತ್ತಿರುವುದು ನಮ್ಮ ಅರೇಸೇನಾ ಪಡೆಗಳು ದೇಶದ ನಕ್ಸಲ್ ಹಾಗೂ ಭಯೋತ್ಪಾದನೆ ವಿರುದ್ಧ ಸದಾ ಹೋರಾಟ ನೆಡೆಸುವ ನಮ್ಮ ಅರೆಸೇನಾ ಪಡೆಯ ಯೋಧರ ಕುಟುಂಬಕ್ಕೆ ರಕ್ಷಣೆ ಇಲ್ಲಾ ಎಂದು ಕರ್ನಾಟಕ ಸಿಎಪಿಎಫ್ ನ ಅಧ್ಯಕ್ಷರಾದ ನರಸಿಂಹ ರೆಡ್ಡಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ನಿವಾಸಿ ರಾಜಗೋಪಾಲ್ 20 ವರ್ಷ ಸಿಆರ್ ಪಿಎಫ್ ನಲ್ಲಿ ಯೋಧನಾಗಿ ಸೇವೆ ಸಲ್ಲಿಸಿ, ಇತ್ತಿಚೇಗೆ ನಿವೃತ್ತಿಯನ್ನ ಪಡೆದು, ಖಾಸಗಿ ಸಂಸ್ಥೆಯಲ್ಲಿ ಭದ್ರತಾ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ, ನವೆಂಬರ್ 17ರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ರಾಜಗೋಪಾಲ್ ರವರ ಸಹೋದರ ಶಿವಕುಮಾರ್ ಸ್ವಾಮಿ, ವಯಸ್ಸಾದ ತಂದೆ ತಾಯಿಯಾದ ವೆಂಕಟೇಶಪ್ಪ ಮತ್ತು ಶಾಂತಮ್ಮ ಎಂಬುರವರ ಮೇಲೆ ಹಲ್ಲೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಯೋಧ ರಾಜ ಗೋಪಾಲರವರ ತೂಬಗೆರೆ ನಿವಾಸಕ್ಕೆ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯೋಧರು ಭೇಟಿ ನೀಡಿ ಕುಟುಂಬದವರ ಕ್ಷೇಮ ವಿಚಾರಣೆ ಮಾಡಿದರು ಇದೇ ವೇಳೆ ಮಾತನಾಡಿದ ಅವರ ದೇಶಕಾಯುವ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲಾ ಎಂದರೆ ಹೇಗೆ ವೃದ್ಧರು ಮಹಿಳೆಯರು ಎಂಬುದನ್ನು ನೋಡದೆ ಹಲ್ಲೆ ಮಾಡಿದ್ದಾರೆ. ಇಂತಹ ಕ್ರೋರ್ಯ ಮನಸ್ಥಿತಿಯುಳ್ಳವರಿಗೆ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಒತ್ತಾಯಿಸುತ್ತದೆ. ಹಾಗೂ ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಘದ ವತಿಯಿಂದ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ಹಲವು ಮಾಜಿ ಸೈನಿಕರು ಉಪಸ್ಥಿತರಿದ್ದರು.