
ದೊಡ್ಡಬಳ್ಳಾಪುರ : ಹಲವು ಆರೋಪ ಗೊಂದಲಗಳ ನಡುವೆಯೂ ಸಕ್ಕರೆ ಗೊಲ್ಲಹಳ್ಳಿ ಪಂಚಾಯಿತಿಯ ನೂತನ ಕಚೇರಿಯನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು ಉದ್ಘಾಟಿಸಿ ಶುಭಹಾರೈಸಿದರು.
ಸುಮಾರು 28,50,000 ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಆಡಳಿತ ಕಚೇರಿಯನ್ನು ಗ್ರಾಮ ಪಂಚಾಯತಿಯ ಆಡಳಿತ ವರ್ಗದ ಜೊತೆಗೂಡಿ ಉದ್ಘಾಟಿಸಿದರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಧುನಿಕತೆಗೆ ಸರಿ ಹೊಂದುವಂತೆ ಸಕ್ಕರೆ ಗೊಲ್ಲಹಳ್ಳಿ ಪಂಚಾಯತಿಯು ತನ್ನ ಸ್ವಂತ ಅನುದಾನದಿಂದ ನರೇಗಾ ಯೋಜನೆಯ ಸಹಯೋಗದೊಂದಿಗೆ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ , ನೂತನ ಕಟ್ಟಡದಲ್ಲಿ ಪಂಚಾಯಿತಿಯು ಮತ್ತಷ್ಟು ಹೊಸ ಹುರುಪಿನಿಂದ ಕರ್ತವ್ಯ ನಿರ್ವಹಿಸಲಿ ಎಂದರು.
ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ (ಅಪ್ಪಿ ) ಮಾತನಾಡಿ ನೂತನ ಕಟ್ಟಡವು ಸುಸರ್ಜಿತ ವ್ಯವಸ್ಥೆಗಳೊಂದಿಗೆ ವಿಶೇಷ ವಿನ್ಯಾಸದೊಂದಿಗೆ ನಿರ್ಮಾಣವಾಗಿದ್ದು ಪಂಚಾಯಿತಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ , ಇಂದು ತಾಲ್ಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು ಅವರ ನೇತೃತ್ವದಲ್ಲಿ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ ನಿರ್ಮಿಸಬೇಕೆಂಬ ಕನಸು ನನಸಾಗಿದೆ. ಸರ್ವಸದಸ್ಯರ ಸಹಕಾರ ಹಾಗೂ ಶ್ರಮದ ಫಲ ಇಂದಿನ ಈ ಕಾರ್ಯಕ್ರಮ ಎಂದರೇ ತಪ್ಪಾಗಲಾರದು, ಪಂಚಾಯತಿ ಅಭಿವೃದ್ಧಿಯ ಜೊತೆ ಜೊತೆಗೆ ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ಶ್ರಮಿಸುತ್ತೇವೆ ಎಂದರು.
ಉಪಾಧ್ಯಕ್ಷರಾದ ದಿವ್ಯ ತಿಮ್ಮೆಗೌಡ ಮಾತನಾಡಿ ಈ ಹಿಂದೆ ನಾವುಗಳು ಹಳೆಯ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆವು , ವಿವಿಧ ಶಾಖೆಗಳನ್ನು ಒಳಗೊಂಡಿರುವ ನೂತನ ಕಟ್ಟಡ ಇಂದು ತಾಲ್ಲೂಕಿನ ಶಾಸಕರ ಮುಖೇನ ಉದ್ಘಾಟನೆಗೊಂಡಿದ್ದು, ಸ್ಥಳೀಯ ಸಾರ್ವಜನಿಕರ ಸೇವೆಗೆ ಸಿದ್ದವಾಗಿದೆ, ಸರ್ವ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮವು ನೆಡೆಯುತ್ತಿರುವುದು ಮತ್ತಷ್ಟು ಸಂತಸಕ್ಕೆ ಕಾರಣವಾಗಿದೆ ಎಂದರು
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಾಧರ್, ಮುಖಂಡರಾದ ಸಕ್ಕರೆಗೊಲ್ಲಹಳ್ಳಿ ಹನುಮಂತಯ್ಯ,R. ಹರೀಶ್ ಕುಮಾರ್, ತಿಮ್ಮೆ ಗೌಡ, ಕೊನೇನಹಳ್ಳಿ ಆನಂದ್ ಕುಮಾರ್, ಸಂಕರಸನಹಳ್ಳಿ ಕೆಂಪರಾಜು, ಲಿಂಗಾಪುರ ನಂದಕುಮಾರ್, ಗ್ರಾಮಪಂಚಾಯತಿ ಸದಸ್ಯರಾದ ದಿವ್ಯ ತಿಮ್ಮೆಗೌಡ, ಮುತ್ತುರಾಜು, ಪದ್ಮಶ್ರೀ ಬೈರಣ್ಣ, ಹನುಮಂತಯ್ಯ, ರೂಪ ಸೋಮಶೇಖರ್, ಗಿರೀಶ್, ಗೌರಮ್ಮ ವಿಜಿ ಕುಮಾರ್, ಕಾಮಾಕ್ಷಮ್ಮ, ಚೆನ್ನಮ್ಮ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.