
ದೊಡ್ಡಬಳ್ಳಾಪುರ : 6 ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಸಾವನಪ್ಪಿರುವ ಘಟನೆ ತಾಲ್ಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ ನೆಡೆದಿದೆ.
ರತ್ನಮ್ಮ ( 32 ವರ್ಷ ) ಮೃತ ದುರ್ದೈವಿ 3ವರ್ಷಗಳ ಹಿಂದೆ ಗುಮ್ಮನಹಳ್ಳಿ ಗ್ರಾಮದ ಸುರೇಶ್ ಅನ್ನು ಪ್ರೀತಿಸಿ ಮದುವೆಯಾಗಿದ್ದು, 3ತಿಂಗಳು ಸುಖವಾಗಿ ಸಾಗಿದ ಸಂಸಾರ ತುಂಬಾ ದಿನ ಉಳಿಯಲಿಲ್ಲ ನಂತರ ಪ್ರತಿನಿತ್ಯ ರತ್ನಮ್ಮಳಿಗೆ ಮನೆಯಿಂದ ಹಣ ತರುವತ್ತೆ ಅತ್ತೆ ಮಾವ ಮತ್ತು ಗಂಡ ಪೀಡಿಸುತ್ತಿದ್ದರು ಈ ಕಾಟ ತಾಳಲಾರದೆ ನೆನ್ನೆ ಕುಟುಂಬಸ್ಥರಿಗೆ ವಾಟ್ಸ್ ಆಪ್ ಮೂಲಕ ಸಂದೇಶ ರವಾನಿಸಿ ರತ್ನಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರತ್ಮಮ್ಮ ರ ಚಿಕ್ಕಪ್ಪ ನಾರಾಯಣ್ ತಿಳಿಸಿದರು.
ಸಾಸಲು ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ರನ್ನು ಸದ್ಯ ದೊಡ್ಡಬೆಳವಂಗಲ ಪೊಲೀಸ್ ವಶಕ್ಕೆ ಪಡೆದಿದ್ದಾರೆ,
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ಪ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಂತರವೇ ಸತ್ಯ ಸತ್ಯತೆ ಹೊರಬೀಳಬೇಕಿದೆ