
ದೊಡ್ಡಬಳ್ಳಾಪುರ : ತಾಲ್ಲೂಕಿನ ಹಲವು ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ವಾರ್ಷಿಕ ಸೇವಾ ಸಾಧನೆಗಳನ್ನ ಒಳಗೊಂಡಂತ 2025ನೇ ನೂತನ ವರ್ಷದ ಕ್ಯಾಲೆಂಡರ್ ನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಂ.ಹರೀಶ್ ಗೌಡ ಬಿಡುಗಡೆ ಮಾಡಿದರು.
ಶ್ಯಾಕಲದೇವನಪುರದಲ್ಲಿ ತಮ್ಮ ಸ್ವಗೃಹದ ಸಮೀಪ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಲವು ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು ವೇದಿಕೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಮತ್ತು ತಾಲ್ಲೂಕು ಜೆಡಿಎಸ್ ಪಕ್ಷದ ಮುಖಂಡ ಎಚ್. ಅಪ್ಪಯ್ಯಾಣ್ಣ ರವರಿಗೆ ಸಂತಾಪ ಸೂಚಿಸಿ ಮೌನಾಚಾರಣೆ ಮಾಡಲಾಯಿತು.
ವೇದಿಕೆಯಲ್ಲಿ ದಿ.ಎಚ್ ಅಪ್ಪಯಣ್ಣ ಅವರನ್ನು ನೆನೆದು ಕಣ್ಣೀರಿಟ್ಟ ಹರೀಶ್ ಗೌಡ
ಕಾರ್ಯಕ್ರಮದ ವೇದಿಕೆಯಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡ ಅಪ್ಪಯಣ್ಣ ಅವರನ್ನು ನೆನೆದು ಮಾತನಾಡುತ್ತಾ ನನ್ನನ್ನು ತಾಲೂಕಿನ ರಾಜಕೀಯಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಪ್ಪಯಣ್ಣ ಅವರಿಗೆ ಸಲ್ಲುತ್ತದೆ , ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದು ನನ್ನ ಬೆನ್ನೆಲುಬಾಗಿ ನಿಂತು ರಾಜಕೀಯವಾಗಿ ಸಮಸ್ಯೆಗಳು ಎದುರಾದಾಗ ನನ್ನೊಂದಿಗಿದ್ದು ಬುದ್ಧಿವಾದ ಹೇಳುತ್ತಿದ್ದ ಅಪ್ಪಯ್ಯಣ್ಣ ಅವರು ಇಂದು ನಮ್ಮೊಂದಿಗಿಲ್ಲ ಎಂದು ಭಾವುಕರಾದರು.
ಅವರ ಕನಸು ತಾಲೂಕಿನಲ್ಲಿ ಜೆಡಿಎಸ್ ಅಧಿಕಾರ ಹಿಡಿಯಬೇಕೆಂಬುದು ಅವರ ಕನಸು, ಇಂದು ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಭಾವನಾತ್ಮಕವಾಗಿ ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ, 2028ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಮೂಲಕ ಅವರ ಕನಸು ನನಸು ಮಾಡಲಾಗುತ್ತದೆ ಎಂದರು.
ವೇದಿಕೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಪ್ರತಿ ಮನೆಗೆ ನಾವು ಭೇಟಿಕೋಟ್ಟು ನಮ್ಮ ಸೇವಾ ಸಾಧನೆಗಳನ್ನು ಹೇಳಲು ಕಷ್ಟಸಾಧ್ಯ ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಾಧನೆಗಳನ್ನು ಪ್ರತಿ ಮನೆ ಮನಗಳಿಗೆ ತಲುಪಿಸುವ ಕಾರ್ಯವನ್ನು ಈ ಕ್ಯಾಲೆಂಡರ್ ಮೂಲಕ ಮಾಡುತ್ತಿದ್ದೇವೆ ಈ ಕಾರ್ಯಕ್ರಮವು ಅದ್ದೂರಿಯಾಗಿ ನೆಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ಸರಳ ರೀತಿಯಲ್ಲಿ ಮಾಡುತ್ತಿದ್ದೇವೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನೊಂದಿಗೆ ಕೈ ಜೋಡಿಸಿದ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನಾನೇ ಅಭ್ಯರ್ಥಿ ಚುನಾವಣೆ ಎದುರಿಸಲು ಸಿದ್ದರಾಗಿ – ಹರೀಶ್ ಗೌಡ
ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ತಾಲ್ಲೂಕಿನಲ್ಲಿ ರಾಜಕೀಯ ಬದಲಾವಣೆಯ ಅವಶ್ಯಕತೆ ಇದೆ, ಮೊದಲಿನಿಂದಲೂ ಜೆಡಿಎಸ್ ಪಕ್ಷವು ತಾಲ್ಲೂಕಿನಲ್ಲಿ ಶಾಸಕ ಸ್ಥಾನದ ಅಧಿಕಾರ ಪಡೆಯುವಲ್ಲಿ ವಿಪಲವಾಗಿದೆ, ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್, ಹಾಗೂ ನಗರಸಭೆಗಳಲ್ಲಿ ಈಗಾಗಲೇ ಅಧಿಕಾರ ಪಡೆದಿದ್ದು 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಪಡೆಯಲು ಶ್ರಮಿಸಲಿದೆ ಎಂದರು.
ಶೇಕಡಾ 100ರಷ್ಟು ನಾನು ಅಭ್ಯರ್ಥಿಯಾಗಿ ಸ್ಪರ್ದಿಸುವುದು ಖಚಿತ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲಬೇಡ ಚುನಾವಣೆ ಎದುರುಸಲು ಸಿದ್ದರಾಗಿ ಎಂದು ವೇದಿಕೆಯಿಂದ ಸಂದೇಶ ರವಾನಿಸಿದರು. ಚುನಾವಣೆಯ ಸಲುವಾಗಿ ಈಗಾಗಲೇ ತಾಲ್ಲೂಕಿನ ಹಲವು ಸಹಕಾರ ಸಂಘ, ಗ್ರಾಮ ಮಟ್ಟದ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತಿದ್ದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದರು.
ಶಾಸಕರು ತಮ್ಮ ಪಕ್ಷ ಬಗ್ಗೆ ಚಿಂತಿಸಲಿ ನಮ್ಮ ಪಕ್ಷದ ಪದಾಧಿಕಾರಿಗಳ ಬಗ್ಗೆ ಚಿಂತಿಸುವುದು ಬೇಡ
ಪಕ್ಷದಲ್ಲಿ ಹರೀಶ್ ಗೌಡರ ಸ್ಥಾನ ಕುರಿತು ಮೂಡಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಪಕ್ಷದಲ್ಲಿ ನನ್ನ ಸ್ಥಾನ ಮನ ಏನೆಂಬುದನ್ನು ಕುರಿತು ಚಿಂತಿಸಲು ನಿರ್ಧರಿಸಲು ಪಕ್ಷದ ಹಿರಿಯ ನಾಯಕರು ಮುಖಂಡರು ಇದ್ದಾರೆ, ಅದರ ಚಿಂತೆ ಶಾಸಕರಿಗೆ ಬೇಡ, ಅವರು ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಬಗ್ಗೆ ಚಿಂತಿಸಲಿ, ತಮ್ಮ ಪಕ್ಷದ ಬಗ್ಗೆ ಯೋಚಿಸಲಿ, ನಮ್ಮ ಪಕ್ಷದ ಪದಾಧಿಕಾರಿಗಳು ಕುರಿತು ಮಾತನಾಡುವುದು ಸರಿಯಲ್ಲ, ಅವರ ಪಕ್ಷದ ಸಮಸ್ಯೆ ಮೊದಲು ಬಗೆಹರಿಸಿ ಕೊಳ್ಳಲಿ ಎಂದರು.
ವೇದಿಕೆಯಲ್ಲಿ ಕಂತಾಮಣಿ ಹರೀಶ್ ಗೌಡ ಮಾತನಾಡಿ ತಾಲ್ಲೂಕಿನಲ್ಲಿ ಈವರೆಗೂ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದೇವೆ ಮುಂದೆಯೂ ಸಹ ಈ ಸೇವೆಗಳು ನಿರಂತರ ಸಾಗಲಿವೆ, ಹರೀಶ್ ಗೌಡರು ತಾಲ್ಲೂಕಿನ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ, ಉದಾಹರಣೆಗೆ ತಾವು ವಿದ್ಯಾಭ್ಯಾಸ ನೆಡೆಸಿದ ಪುರುಷನ ಹಳ್ಳಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಅಷ್ಟೇ ಅಲ್ಲದೇ ತಾಲ್ಲೂಕಿನ ಜನತೆಯ ಆರೋಗ್ಯ ವಿಚಾರದಲ್ಲಿ,ಕ್ರೀಡಾ ವಿಚಾರದಲ್ಲಿ, ದೇವಾಲಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ತಾಲ್ಲೂಕಿನ ಜನತೆಯೊಂದಿಗೆ ನಾವಿದ್ದೇವೆ, ನಮ್ಮ ಸೇವೆಗೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ, ನಮ್ಮ ಶಕ್ತಿ ಮೀರಿ ತಮ್ಮ ಸೇವೆಗೆ ಶ್ರಮಿಸುತ್ತೇವೆ ಎಂದರು.
ತಾಳಗವಾರ ನಾಗರಾಜ್ ಮಾತನಾಡಿ ನಿರಂತರ ಸೇವೆ ಸಲ್ಲಿಸುವ ಹರೀಶ್ ಗೌಡರ ಗುಣ ಸದಾ ಹೀಗೆ ಇರಲಿ, ತಾಲೂಕಿನ ಜನತೆಗೆ ಅವರು ತೋರಿಸುವ ಪ್ರೀತಿ ಕಾಳಜಿ ಅಪಾರವಾದದ್ದು , ತಾಲೂಕಿನ ಯಾವುದೇ ಮೂಲೆಯ ಗ್ರಾಮದಲ್ಲಾದರೂ ಸಮಸ್ಯೆಯನ್ನು ತಿಳಿದರೆ ತಾವೇ ಸ್ವತಃ ಗ್ರಾಮಕ್ಕೆ ತೆರಳಿ ಸಹಾಯಕ ನೀಡುವ ನಾಯಕರು ಹರೀಶ್ ಗೌಡರು ಅವರ ಸೇವೆ ಸದಾ ನಿರಂತರವಾಗಿ ನಡೆಯಲಿ ಎಂದರು.
ಇಂದು ತಾಲ್ಲೂಕಿನ ಅಹಿಂದ ಶಕ್ತಿಯಾದ ಅಪ್ಪಯಣ್ಣ ಅವರನ್ನು ಕಳೆದು ಕೊಂಡಿದ್ದೇವೆ, ಅವರು ನಮ್ಮನ್ನು ಬಿಟ್ಟು ಹೋಗುವ ಕೆಲ ದಿನಗಳ ಹಿಂದೆ ಅಷ್ಟೇ ನಮ್ಮೊಂದಿಗೆ ಹರೀಶ್ ಗೌಡರ ಕುರಿತು ರಾಜಕೀಯವಾಗಿ ಅವರಿಗೊಂದು ಸ್ಥಾನಮಾನ ದೊರಕಿಸುವ ಸಲುವಾಗಿ ಅವರ ಚಿಂತನೆಯನ್ನು ಹಂಚಿಕೊಂಡಿದ್ದರು. ಮುಂದೆ ತಾಲೂಕಿನ ಜನರ ಸೇವೆ ಮಾಡುವ ಅದೃಷ್ಟ ದಿವಂಗತ ಅಪಾಯಣ್ಣ ಅವರ ಆಶೀರ್ವಾದ ಹಾಗೂ ಆಶಾಯದಂತೆ ಹರೀಶ್ ಗೌಡರಿಗೆ ಲಭಿಸಲಿ ಎಂದು ಹಾರೈಸಿದರು.
TAPMCS ಸದಸ್ಯ ಆನಂದ್ ಕುಮಾರ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ತಾಲ್ಲೂಕಿನ ಪ್ರತಿ ಮನೆಗೆ ತಲುಪಲಿ ಎಂಬುದು, ಉತ್ತಮ ರಾಜಕೀಯ ಅನುಭವದೊಂದಿಗೆ ಮುಂದೆ ಉತ್ತಮ ಭಾವಿಷ್ಯ ರೂಪಿಸಿಕೊಳ್ಳಲಿ ಪಕ್ಷತೀತವಾಗಿ ಹಾಗೂ ಸಂಸ್ಕಾರಯುತವಾಗಿ ರಾಜಕೀಯ ಮಾಡುವುದು ಕಷ್ಟವೇ ಸರಿ,ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹರೀಶ್ ಗೌಡ ಮತ್ತು ಅವರ ಶ್ರೀ ಮಾತಿಯವರಿಗೆ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್. ಗಂಗೆಗೌಡ ಹೊನ್ನಾವರ,ನಗರಸಭಾ ಸದಸ್ಯ ತ ನ ಪ್ರಭುದೇವ್, ನಾರಾಯಣಪ್ಪ, ಚಿಕ್ಕ ಹೆಜ್ಜಾಜಿ ಪ್ರಕಾಶ್, ತಿಮ್ಮೆಗೌಡ, ಅರಸೇಗೌಡ, ಸಿದ್ದ ಲಿಂಗಪ್ಪ, ದೊಡ್ಡತುಮಕೂರು ಚಿಕ್ಕಣಪ್ಪ, ಬಾಶೆಟ್ಟಿ ಹಳ್ಳಿ ಕೃಷ್ಣಪ್ಪ, ಪ್ರವೀಣ್ ಕುಮಾರ್ ಶಾಂತಿನಗರ, ಸಾಹಿತಿ ಆಶಾ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.