
ದೊಡ್ಡಬಳ್ಳಾಪುರ : ದೊಡ್ಡತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ ಜಿ ರಮೇಶ್ , ಉಪಾಧ್ಯಕ್ಷರಾಗಿ ಟಿ ಜಿ ಗಿಡ್ಡೇ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
11 ಸದಸ್ಯರ ಬಲ ಹೊಂದಿರುವ ದೊಡ್ಡತುಮಕೂರು ಹಾಲು ಉತ್ಪಾದಕರ ಸಹಕಾರ ಚುನಾವಣೆ ನೆಡೆದಿದ್ದು ನೂತನ ನಿರ್ದೇಶಕರಾಗಿ ಚಿಕ್ಕಣಪ್ಪ,ಪದ್ಮಮ್ಮ, ನಂದಮ್ಮ, ಮುನಿರಾಜು,ಸೋಮಶೇಖರ್,ರಾಜಣ್ಣ, ನಂಜೇಗೌಡ,ವೆಂಕಟಸ್ವಾಮಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್ (LIC) ಅಭಿನಂದಿಸಿ ಮಾತನಾಡಿದ ಅವರು ಸ್ಥಳೀಯ ಮುಖಂಡರು ಹಾಗೂ ಸರ್ವ ಸದಸ್ಯರ ಆಶೀರ್ವಾದದಿಂದ ಇಂದಿನ ಗೆಲುವು ಲಭಿಸಿದೆ, ಹಾಲು ಉತ್ಪಾದಕರ ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ನೂತನ ಪದಾಧಿಕಾರಿಗಳು ಶ್ರಮಿಸಲಿ ಎಂದು ಶುಭ ಹಾರೈಸಿದರು.
VSSN ಮಾಜಿ ಅಧ್ಯಕ್ಷ ಟಿ ಏನ್ ನಾಗರಾಜ್ (ಬಾಬು ) ಮಾತನಾಡಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಸ್ಥಳೀಯ ರೈತರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ , ಹಾಲು ಉತ್ಪಾದಕರ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ಪರಿಹಾರ ಕಲ್ಪಿಸುವ ಮೂಲಕ ಹೈನುಗಾರಿಕೆ ಉತ್ತಮಗೊಳಿಸುವಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಶುಭ ಕೋರಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಗ್ರಾ ಪಂ ಮಾಜಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್, ಲಕ್ಷ್ಮೀ ದೇವಿ ಚನ್ನೇಗೌಡ,ತಾಲ್ಲೂಕು OBC ಮೋರ್ಚಾ ಅಧ್ಯಕ್ಷರು ಮಂಜುನಾಥ್ SST, ಗ್ರಾ ಪಂ ಸದಸ್ಯ ಪಿ ಲೋಕೇಶ್,ಮದುರೆ ಹೋಬಳಿಯ ಅಧ್ಯಕ್ಷರು ಹಾಗು VSSN ಮಾಜಿ ಅಧ್ಯಕ್ಷರು ಗಳಾದ ಟಿ ಏನ್ ನಾಗರಾಜ್ (ಬಾಬು ), ಟಿ ಹೆಚ್ ಶಿವಕುಮಾರ್, MPCS ನ ಮಾಜಿ ಅಧ್ಯಕ್ಷರು ಗಳಾದ ಅಂಜಿನಮೂರ್ತಿ, ಗೋಪಾಲಕೃಷ್ಣ, ಜಯರಾಮ್,ಮುಖಂಡರು ಗಳಾದ ಸುಬ್ರಾಯಪ್ಪ,ಪ್ರಕಾಶ್, ಮೋಹನ್ ಪುರುಷೋತ್ತಮ್ ಗೌಡ, ಯಲ್ಲಪ್ಪ, ಪುಟ್ಟರಾಜು, ಬೂತ್ ಅಧ್ಯಕ್ಷ ಟಿ.ಕೆ. ಸೋಮು,ಆನಂದ,ಹನುಮಂತರಾಜು,ರಾಮು,ಮುಂತಾದವರು ಅಭಿನಂದನೆ ಸಲ್ಲಿಸಿದರು.