
ದೊಡ್ಡಬಳ್ಳಾಪುರ :ಬಿಜೆಪಿ ನಗರ ಮತ್ತು ತಾಲ್ಲೂಕು ಮಹಿಳಾ ಮೋರ್ಚಾ ತಂಡಗಳವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಜಿಲ್ಲಾ ಬಿಜೆಪಿ ಕಚೇರಿ ದೊಡ್ಡಬಳ್ಳಾಪುರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ರಾಜ್ಯ ಮಹಿಳಾ ಮೋರ್ಚ ತಂಡದ ಡಾ.ಪದ್ಮಾಪ್ರಕಾಶ್ ಅಂಗಾಂಗ ದಾನ, ನೇತ್ರದಾನ ಮತ್ತು ದೇಹದಾನದ ಬಗ್ಗೆ ವಿಸ್ತಾರವಾಗಿ ಮಹಿಳೆಯರಿಗೆ ಮಾಹಿತಿ ನೀಡುವ ಮೂಲಕ ಎಲ್ಲರನ್ನು ಹುರಿದುಂಬಿಸಿದರು.
ಈ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಶ್ರೀಯುತ ಸುನಿಲ್ ರವರ ಕುಟುಂಬವನ್ನು ಹಾಗೂ ದೇಹದಾನ ಮಾಡಿದ ಎಸ್ .ಎಸ್ ಜಗನ್ ಮೋಹನ್ ಬಾಬು ಹಾಗೂ ಹೆಚ್ ಎನ್ .ನಾಗರಾಜುರವರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ನಗರ ಮಹಿಳಾ ಮೋರ್ಚದ ಅಧ್ಯಕ್ಷರಾದ ಪ್ರಿಯಾಂಕ. ಬಿ.ಪಿ ರವರು ಮತ್ತು ಮಹಿಳಾ ಮೋರ್ಚ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಮ್ಮರವರ ಉಪಸ್ಥಿತಿಯಲ್ಲಿ ನಡೆಯಿತು
ಈ ಕಾರ್ಯಕ್ರಮ ದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಕಾರ್ಯದರ್ಶಿಗಳಾದ ನಿರ್ಮಲಮ್ಮ , ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಸದಸ್ಯರಾದ ವತ್ಸಲ .ಎಸ್ , ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ಅನುರೆಡ್ಡಿ , ಜಿಲ್ಲಾ ಅಧ್ಯಕ್ಷರಾದ ರಾಮ್ ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗವೇಣಿ , ದೊಡ್ಡಬಳ್ಳಾಪುರ ನಗರ ಮಂಡಲ ಅಧ್ಯಕ್ಷರಾದ ಮುದ್ದಪ್ಪ , ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾದ ನಾಗೇಶ್ , ಹಿರಿಯ ಮಾರ್ಗದರ್ಶಿಗಳಾದ ಗೋವಿಂದರಾಜು , ಕಾರ್ಯಾಲಯದ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ , ಮುಖಂಡರಾದ ವಾಣಿಿಿ ನಂದಕುಮಾರ, ಲೀಲಾವತಿ, ಸೇರಿದಂತೆ ಹಲವರು ಹಾಜರಿದ್ದರು.