
ದೊಡ್ಡಬಳ್ಳಾಪುರ : 134 ನೇ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಶಾಲಾ ಮಕ್ಕಳೊಂದಿಗೆ ವಿಶೇಷವಾಗಿ ನಿರಂತರ ಅನ್ನದಾಸೋಹ ಸಮಿತಿ ಆಚರಿಸಿತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಲಾ ಮಕ್ಕಳಿಗೆ ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಬಾಬಾ ಸಾಹೇಬರ ಜನ್ಮದಿನವನ್ನು ಆಚರಿಸಲಾಯಿತು .
ಕೆ.ಸತೀಶ್ ಕುಮಾರ್ ಇವರ ಜ್ಞಾಪಕಾರ್ಥವಾಗಿ 1846 ನೇ ದಿನದ ಅನ್ನದಾಸೋಹ ದಾನಿಗಳಾಗಿ ವಿಜಯ ಕೃಷ್ಣ ಹಾಗೂ ಕಲಾವತಿ ಕುಟುಂಬದವರು ಸಹಾಯ ಹಸ್ತ ನೀಡಿದ್ದು, ವಯೋವೃದ್ದರಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ಆಯೋಜಕ ಮಲ್ಲೇಶ್ ಮಾತನಾಡಿ ಡಾ. ಬಿಆರ್ ಅಂಬೇಡ್ಕರ್ ಅವರು ಭಾರತ ದೇಶದಲ್ಲಿ ಬಡವರ, ದಲಿತರ, ಶೋಷಿತರ ಧ್ವನಿಯಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ , ಅವರು ಸರ್ವ ಸಮುದಾಯಗಳಿಗೂ ಸಲ್ಲುವಂತಹ ವಿಶ್ವಮಾನವ ಅವರ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಈ ಸಂದರ್ಭದಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ಯೋಗ ಕೃಷ್ಣಪ್ಪ, ಹರೀಪ್ರಸಾದ್, ನವೀನ್, ದರ್ಶನ್ ಸೇರಿದಂತೆ ಹಲವರು ಹಾಜರಿದ್ದರು.