
ತೂಬಗೆರೆ : ಡಾ. ಬಿಆರ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಅಡಿಯಲ್ಲಿ ಅಧಿಕಾರ ಪಡೆದಿರುವ ನಾಯಕರು,ಅಧಿಕಾರಿಗಳು ಯಾವುದೇ ಪಕ್ಷಪಾತವಿಲ್ಲದೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದಲ್ಲಿ ಬಾಬಾ ಸಾಹೇಬರಿಗೆ ನಮನ ಸಲ್ಲಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆದಂತ ಅನಂತರಾಜು ಗೋಪಾಲ ತಿಳಿಸಿದರು .
ಕೆಪಿಸಿಸಿ ಸದಸ್ಯರಾದ ಎಸ್ ಆರ್ ಮುನಿರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್,ರವಿ ಸಿದ್ದಪ್ಪ,ಆರ್ ಪ್ರತಾಪ್, ಕಿಟ್ಟಿ ಕೃಷ್ಣಪ್ಪ, ಹೊಸಹಳ್ಳಿ ಗಂಗಾಧರ್, ಕರ್ನಾಟಕ ರಾಜ್ಯ ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆದಂತ ಅನಂತರಾಜು ಗೋಪಾಲ ಸೇರಿದಂತೆ ಹಲವು ಗಣ್ಯರು ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ನಾಮಫಲಕ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 134ನೇ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಪ್ರಸ್ತುತ ರಾಜಕೀಯ ಕೇವಲ ವೋಟ್ ಬ್ಯಾಂಕ್ಗೆ ಸೀಮಿತವಾಗದೆ ಅರ್ಹ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಮುಕ್ತವಾಗಿ ಯಾವುದೇ ಭ್ರಷ್ಟಾಚಾರವಿಲ್ಲದೆ ತಲುಪಿಸುವ ಕಾರ್ಯವಾಗಬೇಕಿದೆ, ಬಾಬಾ ಸಾಹೇಬರ ಆದರ್ಶಗಳನ್ನು ಕೇವಲ ಮಾತಿನಲ್ಲಿ ಇಟ್ಟುಕೊಳ್ಳದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದಲ್ಲಿ ಉತ್ತಮ ಸಮಾಜದ ನಿರ್ಮಾಣ ಖಂಡಿತ, ಬಾಬಾ ಸಾಹೇಬರ ಕನಸನ್ನು ನನಸು ಮಾಡಲು ಭ್ರಷ್ಟಾಚಾರ ರಹಿತ ಸೇವೆ ಅವಶ್ಯಕತೆ ಎಂದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ತಾವು ಅನುಭವಿಸಿದ ಕಷ್ಟವನ್ನು ಇತರರು ಅನುಭವಿಸಬಾರದೆಂದು ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ , ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನದ ಅಳಿವು ಉಳಿವಿಗೆ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗುತ್ತಿದೆ, ಈ ವಾತಾವರಣ ಬದಲಾಗಬೇಕು ದೇಶದ ಪ್ರತಿ ಪ್ರಜೆಯೂ ಬಾಬಾ ಸಾಹೇಬರು ಕಂಡ ಕನಸಂತೆ ಜೀವಿಸುವಂತಾಗಬೇಕು , ರಾಜಕೀಯ ಕೇವಲ ಮತಗಳ ಆಧಾರದ ಮೇಲೆ ನಡೆಯದೆ ಅಂಬೇಡ್ಕರರ ಆಶಾಭಾವನೆ ಅರಿತು ಚುನಾವಣೆ ನಡೆಯಬೇಕಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಸಿಹಿಹಂಚುವ ಮೂಲಕ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಎಸ್ ಆರ್ ಮುನಿರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್,ರವಿ ಸಿದ್ದಪ್ಪ,ಆರ್ ಪ್ರತಾಪ್, ಕಿಟ್ಟಿ ಕೃಷ್ಣಪ್ಪ, ಹೊಸಹಳ್ಳಿ ಗಂಗಾಧರ್,ಯುವನಾಯಕ ಸುನಿಲ್ ನಾರಾಯಣ್,ತೂಬಗೆರೆ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ನರಸಿಂಹಮೂರ್ತಿ, ದಲಿತ ಮುಖಂಡರುಗಳಾದ ನಾಗರಾಜು,ರಾಮಕೃಷ್ಣ, ಮುನಿರಾಜು,ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು