
ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಸಿ ಆನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ 40 ಮತಗಳನ್ನು ಪಡೆದಿದ್ದಾರೆ.ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ಬೆಂಗಳೂರು ಡೇರಿ ವೃತ್ತ ಸಮೀಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿದ್ದು ಹುಸ್ಕೂರು ಆನಂದ್ ವಿರುದ್ಧ ಬಿಸಿ ಆನಂದ್ ಕುಮಾರ್ ಜಯಸಾಧಿಸಿದ್ದಾರೆ
ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ಶಾಸಕರ ಬೆಂಬಲ ಹಾಗೂ ಹಾಲು ಉತ್ಪಾದಕ ಸಂಘಗಳ ಅಭಿವೃದ್ಧಿ ಬಯಸಿ ನೀಡಿದ ಮತಗಳಿಂದ ಈ ಯಶಸ್ಸು ಲಭಿಸಿದೆ. ಈ ಚುನಾವಣೆಯು ಬಹಳ ಕಷ್ಟಕರವಾಗಿತ್ತು ಕಾರಣ ಈ ಚುನಾವಣೆಯಲ್ಲಿ ಹಿತ ಶತ್ರುಗಳ ನಡುವೆ ಮತ ಪಡೆಯುವ ಸವಾಲು ನನಗೆ ಎದುರಾಗಿತ್ತು , ಆರು ವರ್ಷಗಳ ನಿರಂತರವಾಗಿ ನಾನು ಮಾಡಿದ ಪ್ರಾಮಾಣಿಕ ಅಭಿವೃದ್ಧಿ ಪರ ಸೇವೆ ನನ್ನನ್ನು ಇಂದು ಜಯಶೀಲನಾಗಿ ಮಾಡಿದೆ, ಈ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕೆಂದು ನನ್ನ ವಿರುದ್ಧ ಹಲವಾರು ಕುತಂತ್ರಗಳನ್ನು ಮಾಡಿದರೂ ದೇವರ ಆಶೀರ್ವಾದ,ಮತದಾರರ ಆಶೀರ್ವಾದ ನಾನು 156 ಮತಗಳನ್ನು ಪಡೆಯುವ ಮೂಲಕ ಬಹು ಅಂತರದಿಂದ ಜಯಶೀಲನಾಗಿದ್ದೇನೆ , ನನ್ನ ಕಾರ್ಯ ವೈಕರಿ ಹಾಗೂ ಸೇವೆಯನ್ನು ಮುಂದೆಯೂ ಉತ್ತಮ ಸೇವೆ ಸಲ್ಲಿಸಲಿ ಎಂದು ನನಗೆ ಮತದಾನ ಮಾಡಿರುವ ತಾಲೂಕಿನ ಎಲ್ಲಾ ಡೈರಿ ಅಧ್ಯಕ್ಷರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ತಾಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು ರವರು ಈ ಚುನಾವಣೆಯ ಸಾರಥ್ಯವಹಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ ಅಲ್ಲದೇ ಮುಖಂಡರಾದ ತಿ. ರಂಗರಾಜು, ಅಂಜನ್ ಗೌಡ ಸೇರಿದಂತೆ ನನ್ನ ಆತ್ಮೀಯರು ಹಾಗೂ ಗೆಳೆಯರ ಬಳಗದ ನಿರಂತರ ಪರಿಶ್ರಮ ಇಂದಿನ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದರು.