
ದೊಡ್ಡಬಳ್ಳಾಪುರ : ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಾಮ ಮಾರ್ಗದಲ್ಲಿ ಎಷ್ಟೋ ಬಲಾಡ್ಯರು ಅಕ್ರಮವಾಗಿ ದಾಖಲೆ ಸೃಷ್ಟಿಸಿ ತಮ್ಮದೆಂದು ಸ್ಥಳೀಯ ರೈತರಿಗೆ ಸೇರಬೇಕಿದ್ದ ಭೂಮಿಯನ್ನು ಕಬಳಿಸಲು ಮುಂದಾಗಿದ್ದರು ಆದರೆ ಗುಂಜೂರು ಗ್ರಾಮದ ಗ್ರಾಮಸ್ಥರು ವಕೀಲರಾದ ಆರ್ ಪ್ರತಾಪ್ ನೇತೃತ್ವದಲ್ಲಿ ಅಂತಹ ಭೂಗಳ್ಳರ ವಿರುದ್ಧ ಹೋರಾಟ ನೆಡೆಸಿ ಇಂದು ಅಶ್ರಯ ಯೋಜನೆಗಾಗಿ 8 ಎಕರೆ ಜಾಗವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿತ್ತಾರೆ ಅಲ್ಲದೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದ್ದು ದೇವಸ್ಥಾನದ ಪ್ರಖ್ಯಾತಿಯನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ಕ್ಷೇತ್ರದ ಸುತ್ತಮುತ್ತಲಿನ ಸರ್ಕಾರಿ ಜಾಗಗಳನ್ನು ಹಂತ ಹಂತವಾಗಿ ಕಬಳಿಸ ಲು ಮುಂದಾಗಿದ್ದಾರೆ.
ಘಾಟಿ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಗಳಾದ ಗುಂಜೂರು, ಮೇಲಿನಜೂಗಹಳ್ಳಿ, ಕೆಳಗಿನಜೂಗಹಳ್ಳಿ, ಮಾಕಳಿಯಲ್ಲಿ ನೂರಾರು ಎಕರೆ ಸರ್ಕಾರಿ ಜಾಗವಿದೆ, ದಶಕದಿಂದ ರೈತರು ಈ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಭೂ ಮಂಜೂರಾತಿಗೆ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ ಇದೇ ಜಾಗ ಕ್ಷಣ ಮಾತ್ರದಲ್ಲಿ ಭೂಗಳ್ಳರ ಪಾಲಾಗುತ್ತಿದೆ. ಗುಂಜೂರು ಗ್ರಾಮದ ಸರ್ವೆ ನಂಬರ್ 33ರಲ್ಲಿ 120 ಎಕರೆ ಜಾಗವಿದ್ದು,ಕಾಲ ಕ್ರಮೇಣವಾಗಿ ಸಾಕಷ್ಟು ಭೂಮಿ ಸ್ಥಳೀಯರಿಗೆಲ್ಲದೆ ಬಲಾಡ್ಯರ ಪಾಲಾಗಿದೆ ಎಂಬುದು ಸ್ಥಳೀಯರವಾದ, ಗ್ರಾಮಸ್ಥರ ನಿವೇಶನದ ಜಾಗವನ್ನು ರೆಸಾರ್ಟ್, ಮಸಾಜ್ ಪಾರ್ಲರ್ , ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಕಬಳಿಕೆ ಮಾಡಲಾಗುತ್ತಿದೆ, ಅಂತಹವರ ವಿರುದ್ಧ ಸತತ 3 ವರ್ಷ ಹೋರಾಟ ಮಾಡಿದ ಗುಂಜೂರು ಗ್ರಾಮಸ್ಥರು 8 ಎಕರೆ ಜಾಗವನ್ನ ಅಶ್ರಯ ಯೋಜನೆಗಾಗಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೋರಾಟದ ನೇತೃತ್ವವನ್ನ ಸ್ಥಳೀಯ ಮುಖಂಡರು ಹಾಗೂ ಖ್ಯಾತ ವಕೀಲರಾದ ಆರ್.ಪ್ರತಾಪ್ ವಹಿಸಿಕೊಂಡು ಹಲವಾರು ಸಚಿವರನ್ನು ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ಜಾಗವನ್ನ ಉಳಿಸಿದ್ದಾರೆ, ನಿವೇಶನ ಹಂಚಿಕೆ ಮಾಡಲು 8 ಎಕರೆ ಜಾಗವನ್ನ ಮಂಜೂರು ಮಾಡಿಸಿದ್ದಾರೆ, ಅವರ ಹೋರಾಟಕ್ಕೆ ಗ್ರಾಮಸ್ಥರು ಹೂಮಾಲೆ ಹಾಕುವ ಮೂಲಕ ಅಭಿನಂದಿಸಿದರು.
ಗುಂಜೂರು ಗ್ರಾಮದ ಸರ್ವೇ ನಂಬರ್ 33 ರಲ್ಲಿ 8 ಎಕ್ಕರೆ ಜಮೀನು ಆಶ್ರಯ ಯೋಜನೆಗೆ ಮಂಜೂರು ಆಗಿರುವ ಪ್ರಯುಕ್ತ ಆಶ್ರಯ ಯೋಜನೆಯ ಯಶಸ್ವೀ ಕಾರ್ಯಕ್ರಮವನ್ನು ಮಾಕಳಿ ಗುಂಜೂರು ಬಳಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ವಕೀಲರಾದ ಆರ್ ಪ್ರತಾಪ್ ಮಾತನಾಡಿ ಗುಂಜೂರು ಸರ್ವೆ ನಂಬರ್ 33 ರಲ್ಲಿ 120 ಎಕರೆ ಸರ್ಕಾರಿ ಜಾಗವಿದೆ, ಈಗಾಗಲೇ 68 ಎಕರೆ ಮಂಜೂರಾತಿಯಾಗಿದೆ, ಇನ್ನುಳಿದೆ 50ಕ್ಕೂ ಹೆಚ್ಚು ಎಕರೆ ಜಾಗವನ್ನ ಭೂಗಳ್ಳರು ಕಬಳಿಸಿದ್ದಾರೆ, ಇವರ ವಿರುದ್ಧ ಲೋಕಾಯುಕ್ತ ಮತ್ತು ಎಸಿ ಕೋರ್ಟ್ ನಲ್ಲಿ ಕೇಸ್ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಈ ಜಾಗವನ್ನ ಸ್ಥಳೀಯರ ಅನುಕೂಲಕ್ಕಾಗಿ ಬಳಕೆಯಾಗುವಂತೆ ಮಾಡಲಾಗುವುದು ಎಂದರು.
ಹಲವಾರು ಅಡ್ಡಿ ಆತಂಕಗಳು ಎದುರಾದರೂ ಛಲ ಬಿಡದೆ ಸ್ಥಳೀಯ ಗ್ರಾಮಸ್ಥರ ಬೆಂಬಲದೊಂದಿಗೆ ನಿರಂತರ ಹೋರಾಟದ ಫಲವಾಗಿ ಎಂಟು ಎಕ್ಕರೆ ಪ್ರದೇಶವನ್ನು ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆ ಅಡಿ ನಿವೇಶನ ಕಲ್ಪಿಸಲು ಸರ್ಕಾರದ ಅನುಮೋದನೆ ದೊರೆತಿದೆ ಅಲ್ಲದೆ ಎರಡು ಎಕರೆ ಪ್ರದೇಶವನ್ನು ಸ್ಮಶಾನ ಜಾಗವನ್ನಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ(ಕಿಟ್ಟಿ) ಮಾತನಾಡಿ, ಇಲ್ಲಿನ ವಿದ್ಯಾವಂತ ಯುವಕರು ದುಡಿಯಲು ಬೆಂಗಳೂರಿಗೆ ಹೋಗುತ್ತಾರೆ, ಕೋಟಿ ಕೋಟಿ ಹಣ ಕೊಟ್ಟು ಬೆಂಗಳೂರಿನಲ್ಲಿ ಅಸ್ತಿ ಮಾಡಲು ಸಾಧ್ಯವಿಲ್ಲ, ಇಲ್ಲಿನ ಜಾಗವನ್ನ ಬೆಂಗಳೂರಿನ ಬಲಾಢ್ಯರು ಕಬಳಿಸುವ ಮೂಲಕ ಸ್ಥಳೀಯರಿಗೆ ಜಾಗ ಇಲ್ಲದಂತೆ ಮಾಡುತ್ತಿದ್ದಾರೆ, ಇವರ ವಿರುದ್ಧ ಹೋರಾಟ ಮಾಡಲು ಪ್ರತಾಪ್ ಅಂತ ಯುವಕರು ಬೇಕಾಗಿದ್ದಾರೆ.
ಅಶ್ರಯ ಯೋಜನೆಗಾಗಿ 8 ಎಕರೆ ಜಮೀನು ಮಂಜೂರು ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ನಮ್ಮ ಮುಂದಿರುವ ಸವಾಲು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದು, ಈಗಾಗಲೇ ನಿವೇಶನ ಹಂಚಿಕೆಗಾಗಿ 500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು. ಅರ್ಹರಿಗೆ ನಿವೇಶನ ಹಂಚಿಕೆಯಾಗ ಬೇಕಾದರೆ ವಿದ್ಯಾವಂತ ಮತ್ತು ಪ್ರಮಾಣಿಕ ಯುವಕರನ್ನ ಚುನಾವಣೆಯಲ್ಲಿ ಗೆಲ್ಲಿಸುವ ಕೆಲಸ ಮಾಡಿ ಎಂದರು.
ರೈತ ಮುಖಂಡರಾದ ವಾಸು ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ರೈತರ ಭೂಮಿ ಉಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ರಿಯಲ್ ಎಸ್ಟೇಟ್ ಉದ್ಯಮ ವ್ಯವಸಾಯ ಮಾಡಿ ಜೀವನ ಸಾಗಿಸುವ ರೈತನ ಜೀವನವನ್ನು ಹಾಳು ಮಾಡುತ್ತಿದೆ. ಇದರ ಭಾಗವಾಗಿ ಘಾಟಿ ಸುಬ್ರಮಣ್ಯ ಸುತ್ತಮುತ್ತಲಿನ ಪ್ರದೇಶವನ್ನು ಬ್ರೋಕರ್ ಗಳ ಹಾವಳಿಯಿಂದ ತಪ್ಪಿಸುವುದು ಕಷ್ಟ ಸಾಧ್ಯವಾಗಿದೆ ಫಲವತ್ತಾದ ಭೂಮಿಯನ್ನು ಸರ್ಕಾರಿ ಗೋಮಾಳಗಳನ್ನು ಹೇಗಾದರೂ ಮಾಡಿ ಮಾರಾಟ ಮಾಡಲಾಗುತ್ತಿದೆ. ರೈತರ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಕಸಿದುಕೊಂಡರೆ ಅವರ ವೃತ್ತಿಯನ್ನ ಕಸಿದುಕೊಂಡಂತೆ ಸ್ಥಳೀಯ ರೈತರು ಇದನ್ನು ಅರಿತು ತಮ್ಮ ಭೂಮಿಗಳನ್ನು ಮಾರಾಟ ಮಾಡದಂತೆ ಬ್ರೋಕರ್ ಗಳ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಿದೆ ಎಂದರು .
ಗುಂಜೂರು ಸರ್ವೇ ನಂಬರ್ 33ರಲ್ಲಿ ಈಗಾಗಲೇ ಸಾಕಷ್ಟು ಭೂಮಿಯನ್ನು ಬಲಾಢ್ಯರು ಕಬಳಿಸಿದ್ದು , ಯುವ ಮುಖಂಡ ಆರ್ ಪ್ರತಾಪ್ ರವರು ನಿರಂತರ ಹೋರಾಟ ಮಾಡುವ ಮೂಲಕ ಇಂದು ಆಶ್ರಯ ಯೋಜನೆಗೆ 8 ಎಕ್ಕರೆ ಪ್ರದೇಶವನ್ನು ಮಂಜೂರು ಮಾಡಿಸಿದ್ದಾರೆ. ಇಂತಹ ಯುವ ಉತ್ಸಾಹಿ ನಾಯಕರಿಗೆ ಶಕ್ತಿ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ತೂಬಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್, ಪಂಚಾಯತ್ ಸದಸ್ಯರಾದ ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ವಾಸು, ಮುಖಂಡರಾದ ಉದಯ್ ಆರಾಧ್ಯ, ಅಂಬರೀಷ್ ಇದ್ದರು