
ದೊಡ್ಡಬಳ್ಳಾಪುರ : ನಗರದಲ್ಲಿ ಕಾನೂನುಬಾಹಿರವಾಗಿ ಸ್ಥಾಪಿತವಾಗಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳ ಪರವಾನಗಿ ರದ್ದುಗೊಳಿಸುವಂತೆ, ರಾಜೀವ್ ಗಾಂಧಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಅಶ್ರಯ ಮನೆಗಳಲ್ಲಿ ಕೆಲವು ಬಲಾಢ್ಯರು ದಾಖಲಾತಿ ಇಲ್ಲದೆ ವಾಸಿಸುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ನಗರಸಭೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದ ನಗರಸಭೆಯ ಮುಂದೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪ್ರತಿಭಟನೆ ನಡೆಸಿತು.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಯು ಮುನಿರಾಜು ನಗರಸಭೆ ಪೌರಾಯುಕ್ತರಾದ ಕಾರ್ತಿಕೇಶ್ವರ್ ಅವರಿಗೆ ಮನವಿ ಸಲ್ಲಿಸಿದರು
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 2002ರಲ್ಲಿ ಅಶ್ರಯ ಯೋಜನೆಯಡಿ ಬಡವರು, ನಿರ್ಗತಿಕರು ಮತ್ತು ದಲಿತರಿಗೆ ನಿವೇಶಗಳ ಹಂಚಿಕೆ ಮಾಡಲಾಗಿದೆ, ಸುಮಾರು 50ಕ್ಕೂ ಹೆಚ್ಚು ಮನೆಗಳು ಇಲ್ಲಿನ ಸ್ಥಳೀಯ ಮುಖಂಡರೆಂದು ಕರೆಸಿಕೊಳ್ಳುವರ ವಶದಲ್ಲಿವೆ, ಅಕ್ರಮವಾಗಿ ವಾಸವಾಗಿರುವ ನಿವಾಸಿಗಳ ಮನೆಗಳನ್ನ ಖಾಲಿ ಮಾಡಿಸಿ, ಅಸಲಿ ಹಕ್ಕುಪತ್ರ ವಾರಸುದಾರರಿಗೆ ಅಶ್ರಯ ಮನೆಗಳನ್ನ ನೀಡುವಂತೆ ಪ್ರಬುದ್ಧ ಭೀಮ ಸೇನೆ ಒತ್ತಾಯಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಯು.ಮುನಿರಾಜು, ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸ್ಥಳೀಯ ಕೆಲವು ಮುಖಂಡರು ಅಕ್ರಮವಾಗಿ ಮನೆಗಳ ಬೀಗ ಹೊಡೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಅಕ್ರಮವಾಗಿ ದಾಖಲೆಗಳನ್ನ ಸೃಷ್ಠಿಸಿ ಅಸಲಿ ಹಕ್ಕುದಾರರಿಗೆ ವಂಚನೆ ಮಾಡಿದ್ದಾರೆ, ಹಕ್ಕುಪತ್ರದ ವಾರಸುದಾರರು ಮನೆಗಳ ಬಳಿ ಬಂದರೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಲ್ಲಿಂದ ಓಡಿಸುತ್ತಾರೆ, ಪೌರಾಯುಕ್ತರು ಪ್ರತಿ ಮನೆಗೂ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ಮಾಡಬೇಕು, ನಕಲಿ ವಾಸಿಗಳನ್ನ ಪತ್ತೆ ಮಾಡಿ ಅಸಲಿ ಹಕ್ಕುಪತ್ರ ಇರುವ ಜನರಿಗೆ ಮನೆಗಳನ್ನ ನೀಡುವಂತೆ ಒತ್ತಾಯಿಸಿದರು.
ನಗರಸಭೆಯ ಎಸ್ ಡಿಎ ನೌಕರ ನಕಲಿ ದಾಖಲೆ ಸೃಷ್ಠಿಸಿ ಅಂಜಾದ್ ಖಾನ್ ರವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಅವರು ನೀಡಿರುವ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.
ನಮ್ಮ ವಾಟ್ಸ್ ಆಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ https://chat.whatsapp.com/If9mzU5oyvwJoAt1aZdd19?mode=ac_t
ಪ್ರತಿಭಟನೆಯಲ್ಲಿ ರಾಜ್ಯ ಗೌರವ ಅಧ್ಯಕ್ಷ ವಿ.ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಚನ್ನಿಗರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ರಘುಕುಮಾರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಲಿಗೆ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಮಹೇಶ್.ಎಂಡಿ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಕದ್ದರ್, ದೇವನಹಳ್ಳಿ ಮಹಿಳಾ ಘಟಕ ಅಧ್ಯಕ್ಷ ಸುಜಾತ, ಸೇರಿದಂತೆ ಮುಖಂಡರಾದ ಮಹಮ್ಮದ್ ಪೈಜುಲ್ಲಾ, ಜಬೀವುಲ್ಲಾ, ಅಂಜಾದ್ ಪಾಷಾ, ರವಿಕುಮಾರ್ ಇದ್ದರು