
ದೊಡ್ಡಬಳ್ಳಾಪುರ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಗಸ್ಟ್ 6 ರಂದು ಗರ್ಭಿಣಿ ಸುಷ್ಮಾ ಮಹೇಶ್ ( 24ವರ್ಷ) ಸಾವನ್ನಪ್ಪಿದ್ದು ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಕೃಷ್ಣ ಲಕ್ಕಾ ರೆಡ್ಡಿ ಅವರು ಭೇಟಿ ನೀಡಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು 37 ವಾರಗಳ ಗರ್ಭಿಣಿ ಸುಷ್ಮಾ ರವರು ಆಗಸ್ಟ್ 5ರಂದು ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಸುಷ್ಮಾ ರವರ ರಕ್ತದೊತ್ತಡ ( BP) 140 / 90 ಇದ್ದು ವೈದ್ಯರು ಚಿಕಿತ್ಸೆ ನೀಡಿ ಸ್ವಲ್ಪ ಸಮಯದ ನಂತರ ಮತ್ತೆ ಪರೀಕ್ಷೆ ನಡೆಸಿದಾಗ 120/80 ಆಗಿ ಬಿ ಪಿ ನಾರ್ಮಲ್ ಬಂದಿದ್ದು ಎಸ್ಪೆಕ್ಟೆಡ್ ಡೇಟ್ ಆಫ್ ಡೆಲಿವರಿ ( EDD) ಗೆ ಇನ್ನು ಸಮಯವಿದ್ದ ಕಾರಣ ಗರ್ಭಿಣಿ ಸುಷ್ಮಾ ರನ್ನು ಮನೆಗೆ ಕಳಿಸಲಾಗಿದೆ ಎಂದು ತಿಳಿದ್ದಾರೆ.
ಯಾವುದೇ ತಾಯಿ ಮತ್ತು ಮಗು ಮರಣ ಹೊಂದಿದ ಸಂದರ್ಭದಲ್ಲಿ ಮೆಟರ್ನಲ್ ಡೆತ್ ಎಂದು ಪ್ರಕರಣ ದಾಖಲಿಸಿಕೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಪೂರ್ಣ ತನಿಖೆ ಆಗುತ್ತದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಈ ಪ್ರಕರಣವನ್ನು ಹಾಗೆಯೇ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 13 ವೈದ್ಯರಿದ್ದು ದಿನದ 24 ಗಂಟೆಗಳು ಕೂಡ ವೈದ್ಯರು ಲಭ್ಯವಿರುತ್ತಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಸದಾ ವೈದ್ಯರು ಕಾರ್ಯಪ್ರವೃತ್ತರಾಗಿರುತ್ತಾರೆ. ಇಂದು ಮುಂಜಾನೆ ಮೃತ ಸುಷ್ಮಾ ರವರು ಆಸ್ಪತ್ರೆಗೆ ಬಂದಾಗ ಡಾ. ಶರ್ಮಿಳಾ ಹೆಗ್ಗಡೆ ಅವರು ತಪಾಸಣೆ ನಡೆಸಿದ್ದಾರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ ಎನ್ನುವುದು ಕೇವಲ ಆರೋಪವಷ್ಟೇ ಈ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಮತ್ತು ಮಗು ಸಾವಾಗಿದೆ ಎನ್ನುವ ಆರೋಪವಿದೆ ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ತಾಯಿ ಮತ್ತು ಮಗು ಆಸ್ಪತ್ರೆಗೆ ಬರುವ ಮುಂಚೆಯೇ ಸಾವನ್ನಪ್ಪಿದ್ದರು (ಬ್ರಾಂಡೆಡ್) ಎನ್ನುವ ಮಾಹಿತಿ ಲಭ್ಯವಾಗಿದೆ ಆದರೂ ಈ ಕುರಿತು ಸಂಪೂರ್ಣ ರೀತಿಯಲ್ಲಿ ಪಾರದರ್ಶಕವಾಗಿ ತರೀಕೆರಳಿಸಲಾಗುವುದು ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.