
ಜಿಲ್ಲಾಡಳಿತ ಭವನದ ಆವರಣದಲ್ಲೇ ವ್ಯಕ್ತಿಯೊಬ್ಬರು ನೇಣು ಬಿಗಿದು ಜೀವ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸ್ಥಿತಿಗೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಸಂಸದ ಡಾ.ಕೆ ಸುಧಾಕರ್ ಹೆಸರನ್ನು ಉಲ್ಲೇಖ ಮಾಡಿ ಆರೋಪಿಸಿ ನೇಣಿಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಭಾಪೂಜಿನಗರ ನಿವಾಸಿ ಬಾಬು (30) ಎನ್ನುವರು ನೇಣು ಬಿಗಿದುಕೊಂಡು ಜೀವ ಕಳೆದುಕೊಂಡ ವ್ಯಕ್ತಿಯಾಗಿದ್ದು . ಇವರು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಾನು ಈ ಸ್ಥಿತಿಗೆ ಬರಲು ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ಎನ್ಎನ್ಆರ್ ಟ್ರಾವೆಲ್ಸ್ ನಾಗೇಶ್ ಕಾರಣ ಅಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ.
ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್ ಅವರ ಮೇಲೆ ವಂಚನೆ ಆರೋಪ ಮಾಡಲಾಗಿದೆ.