
ದೊಡ್ಡಬಳ್ಳಾಪುರ : ಶ್ರೀ ವಾಸವಿ ಮಾತ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಾಯಕನಟ ಸುಧೀರ್ ಹಾಗೂ ಸುವರ್ಣ ಪ್ರಕಾಶ್ ಇದೇ ಮೊದಲ ಬಾರಿಗೆ ನಾಯಕನಟಿಯಾಗಿ ಅಭಿನಯಿಸಿರುವ “ದೈವ ಪುತ್ರ “ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.
ಸದ್ಯ ದೊಡ್ಡಬಳ್ಳಾಪುರ ನಗರದ ಜಿ ಕೆ ವ್ಯಾಲಿಯ ಡಿ ಏನ್ ತಿಮ್ಮರಾಜು ಅವರ ಮನೆಯಲ್ಲಿ ಚಿತ್ರೀಕರಣ ಸಾಗುತ್ತಿದ್ದು, ತಾಲ್ಲೂಕಿನ ಸುತ್ತಮುತ್ತ 15 ದಿನಗಳ ನಿರಂತರ ಚಿತ್ರೀಕರಣ ನೆಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ
ಚಿತ್ರದಲ್ಲಿ ವೀಡೆ ಚಿತ್ರದ ಮೂಲಕ ಪ್ರಸಿದ್ಧಿ ಪಡೆದಿರುವ ನಟ ಸುಧೀರ್, ಹೊಸ ಪರಿಚಯ ಸುವರ್ಣ ಪ್ರಕಾಶ್, ಬಹು ತಾರಗಣ ಹೊಂದಿರುವ ಚಿತ್ರಕ್ಕೆ ಕೃಷ್ಣ ಮೋಹನ್ ಆಕ್ಷನ್ ಕಟ್ ಹೇಳಲಿದ್ದಾರೆ.
ನಾಯಕನಟ ಸುಧೀರ್ ಸಿನಿಮಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ತೆಲುಗು ಚಿತ್ರಗಳಲ್ಲಿ ಈಗಾಗಲೇ ನಾಯಕನನ್ನಾಗಿ ಅಭಿನಯಿಸಿದ್ದು, ಮೊದಲ ಬಾರಿಗೆ ಕನ್ನಡದಲ್ಲಿ ನಾಯಕ ನಟನಾಗಿ ದೈವ ಪುತ್ರ ಚಲನಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ . ಸಹನಟನಾಗಿ ಕನ್ನಡ ಭಾಷೆಯ ನಾಲ್ಕೈದು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಮೊದಲ ಸಿನಿಮವಾದರೂ ಸಹ ಸ್ಥಳೀಯವಾಗಿ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು , ಕನ್ನಡ ಭಾಷೆಯಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡಲು ಹುಮ್ಮಸ್ಸು ದುಪ್ಪಟ್ಟಾಗಿದೆ , ದೈವ ಪುತ್ರ ಸಿನಿಮಾ ಕೌಟುಂಬಿಕ ಕಥೆಯುಳ್ಳ ಪ್ರಸ್ತುತ ವಿದ್ಯಮಾನಗಳು ಒಳಗೊಂಡ ಯುವ ಪೀಳಿಗೆಯನ್ನು ಎಚ್ಚರಿಸುವಂತಹ ಹಲವು ವಿಷಯಗಳೊಂದಿಗೆ ಸಿದ್ಧವಾಗುತ್ತಿದ್ದು . ಕರುನಾಡಿನ ಎಲ್ಲ ಸಿನಿಪ್ರಿಯರು ನಮ್ಮ ದೈವಪುತ್ರ ಸಿನಿಮಾ ನೋಡಿ ಆಶೀರ್ವದಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಸಿನಿಮಾದ ನಾಯಕ ನಟಿ ಸುವರ್ಣ ಪ್ರಕಾಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಉತ್ತಮ ಸಿನಿಮಾಗಳು ಬರುವುದು ಗಣನಿಯವಾಗಿ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಸಿನಿಪ್ರೇಕ್ಷಕರಿಗೆ ಬೇಕಾಗುವ ಎಲ್ಲಾ ಅಂಶಗಳು ಉತ್ತಮ ಸಂಸಾರಿಕ ಕಥೆಯೊಂದಿಗೆ ನಮ್ಮ ದೈವಿಪುತ್ರ ಸಿನಿಮಾ ತೆರೆಯ ಮೇಲೆ ಬರಲಿದೆ. ಉತ್ತಮ ಕಂಟೆಂಟ್ ಉಳ್ಳ ಸಿನಿಮಾಗಳನ್ನು ಕನ್ನಡಿಗರು ಎಂದು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ಸ್ಥಳೀಯ ಮುಖಂಡರದ ಮಲ್ಲೇಶ್ ಮಾತನಾಡಿ ತೆಲುಗು ಭಾಷೆಯಲ್ಲಿ ವೀಡೆ ಸಿನಿಮಾದ ಮೂಲಕ ಈಗಾಗಲೇ ಪ್ರಸಿದ್ದಿ ಪಡೆದಿರುವ ನಾಯಕ ನಟ ಸುಧೀರ್ ರವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ, ಅವರಿಗೆ ಶುಭವಾಗಲಿ ದೈವ ಪುತ್ರ ಚಿತ್ರವು ಉತ್ತಮ ಪ್ರದರ್ಶನ ಕಂಡು ಚಿತ್ರತಂಡಕ್ಕೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಚೌಡರಾಜು, ಮಲ್ಲೇಶ್,ಶರವಣ, ಸೇಲ್ವಮ್, ಡಿ ಏನ್ ತಿಮ್ಮರಾಜು, ಸಾಹಸಮಯ ದೃಶ್ಯಗಳ ನಿರ್ದೇಶಕ ಯೇಸುದಾಸ್, ನಿರ್ದೇಶಕ ಮೋಹನ್ ಕೃಷ್ಣ, ನೃತ್ಯ ಸಂಯೋಜಕ ಬಾಲು , ಖಳನಾಯಕ ನಟ ಬಟ್ಟು, ಹನುಮಂತು ಸೇರಿದಂತೆ ಹಲವರು ಹಾಜರಿದ್ದರು.