
ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ(ಸೆ.18) : ಸರಳ, ಸಜ್ಜನಿಕೆ ಹಾಗೂ ತಮ್ಮ ಅಭಿನಯ ಕಲೆಯಿಂದಲೇ ಎಲ್ಲರ ಆರಾಧ್ಯ ದೈವ ವಾಗಿರುವ ಡಾ. ವಿಷ್ಣುವರ್ಧನ್ ರವರ ಜೀವನಶೈಲಿಯೇ ನಮ್ಮಗೆ ಆದರ್ಶ ಅವರ ಉತ್ತಮ ಕಾರ್ಯಗಳು ನಮಗೆ ಸದಾ ಮಾರ್ಗದರ್ಶನವಾಗಿರುತ್ತವೆ ಎಂದು ಅಭಿಮಾನಿ ಅನ್ನದಾಸೋಹಿ ಮಲ್ಲೇಶ್ ತಿಳಿಸಿದರು.
ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಹೃದಯವಂತ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಡಾ. ವಿಷ್ಣುವರ್ಧನ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಅಭಿಮಾನಿಗಳಿಂದ ದಾದಾ ಎಂದೇ ಪ್ರಸಿದ್ದಿ ಪಡೆದಿರುವ ಸಾಹಸಸಿಂಹ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಕೇವಲ ಒಬ್ಬ ನಾಯಕ ನಟರಾಗಿ ಉಳಿದಿಲ್ಲ ಅವರೊಂದು ಶಕ್ತಿಯಾಗಿ ಪ್ರತಿ ಅಭಿಮಾನಿಯ ಉತ್ತಮ ಕಾರ್ಯಗಳಲ್ಲಿ ಸದಾ ಜೀವಂತರಾಗಿದ್ದಾರೆ. ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ಅವರಿಗಿದ್ದ ಗೌರವ ಅಪಾರವಾದದ್ದು , ನಾವುಗಳು ಅವರ ಅಭಿಮಾನಿಗಳಾಗಿದ್ದೇವೆ ಎಂದು ಹೇಳುವುದೇ ಹೆಮ್ಮೆಯ ವಿಷಯವಾಗಿದೆ ಎಂದರು.
ಹೃದಯ ವಂತ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಲಕ್ಷ್ಮಣ ಮಾತನಾಡಿ ಡಾ. ವಿಷ್ಣುವರ್ಧನ್ ಪಂಚ ಭಾಷ ನಟರು , ಅವರ ಉತ್ತಮ ನಡತೆಯಿಂದಲೇ ಸಾಕಷ್ಟು ಹೆಸರು ಮಾಡಿದ ಅವರು ನಮ್ಮೆಲ್ಲರ ಅಚ್ಚುಮೆಚ್ಚು, ಅಭಿಮಾನಿಗಳ ಮೇಲೆ ಅವರಿಗಿದ್ದ ಗೌರವ ನಾವು ನೋಡಿದ್ದೇವೆ , ಅಂತಹ ಉತ್ತಮ ನಟರು ಮುಂದೆಂದೂ ಬರಲು ಸಾಧ್ಯವಿಲ್ಲ , ಉತ್ತಮ ಕೌಟುಂಬಿಕ ಕಥೆಯುಳ್ಳ ಚಿತ್ರಗಳ ಮೂಲಕ ರಾಜ್ಯವಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿಯೂ ತಮ್ಮ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ನಟ ಎಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದಲ್ಲಿ ಅನ್ನ ದಾಸೋಹಿ ಮಲ್ಲೇಶ್ ,ಮಾಜಿ ಗ್ರಾಮ ಪಂಚಾಯಿತಿ ಸದಸ್ಯ H. ರಂಗನಾಥ್, ಹೃದಯ ವಂತ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಕೇಶವ, ಎಂ.ರಾಜಣ್ಣ ಹೈಟೆಕ್, ಸೇರಿದಂತೆ ಎಲ್ಲಾ ವಿಷ್ಣುವರ್ಧನ್ ಅಭಿಮಾನಿ ಬಳಗದ ಎಲ್ಲಾ ಪ್ರಮುಖರು ಹಾಜರಿದ್ದರು.