
ದೊಡ್ಡಬಳ್ಳಾಪುರ : ಎಂ ಎಸ್ ರಾಮಯ್ಯ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ 2023-25 ನೇ ಸಾಲಿನ ಪದವಿ ಪ್ರದಾನ ಕಾರ್ಯಕ್ರಮ ನೆರವೇರಿದ್ದು ತಾಲ್ಲೂಕಿನ ವರ್ಷಿಣಿ ಎಸ್ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಬಂಗಾರದ ಪದಕ ಪಡೆದಿದ್ದಾರೆ .
ನಗರದ ಪಾಲನಾಜೋಗಿಹಳ್ಳಿ ಯಾ ನಿವಾಸಿಯಾಗಿರುವ ಎಸ್ .ವರ್ಷಿಣಿ ಈ ಸಾಧನೆ ಮಾಡಿರುವುದು ಕೇವಲ ಕುಟುಂಬಕ್ಕಷ್ಟೇ ಅಲ್ಲದೆ ತಾಲ್ಲೂಕು ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಂದೆ ಶ್ರೀಧರ್ ವಿ ಹಾಗೂ ತಾಯಿ ಲಾವಣ್ಯ ಕೆ ಹರ್ಷವ್ಯಕ್ತಪಡಿಸಿದ್ದಾರೆ .
ಈ ಕುರಿತು ವಿದ್ಯಾರ್ಥಿ ವರ್ಷಿಣಿ ಮಾತನಾಡಿ ನಾನು ಉತ್ತಮ ಅಂಕಗಳನ್ನು ಗಳಿಸಲು ನಮ್ಮ ಕಾಲೇಜಿನ ಉಪನ್ಯಾಸಕರ ಶ್ರಮ ಸಾಕಷ್ಟಿದೆ ಅಲ್ಲದೆ ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ನನ್ನ ತಂದೆ ತಾಯಿಯ ಸಹಕಾರದಿಂದಾಗಿ ಇಂದು ಈ ಪುರಸ್ಕಾರ ಲಭಿಸಿದೆ . ನಿರಂತರ ಅಭ್ಯಾಸ ಹಾಗೂ ಉತ್ತಮ ಬೋಧನೆ ಇಂದಿನ ಈ ಗೌರವಕ್ಕೆ ಕಾರಣ ಎಂದರು .
ಈ ಸಂದರ್ಭದಲ್ಲ್ಲಿ HAJ ಚಿಕನ್ ಸೆಂಟರ್ ಮಾಲಿಕರಾದ ಅಂಬರೀಶ್.ಕೆ ಅವರು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದ ಚಿನ್ನದ ಪದಕ ವಿಜೇತೆ ವರ್ಷಿಣಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಎಚ್ ಎ ಜೆ ಚಿಕನ್ ಸೆಂಟರ್ ಮಾಲಿಕರಾದ ಅಂಬರೀಶ್ ಮಾತನಾಡಿ ವರ್ಷಿಣಿ ಕಠಿಣ ಪರಿಶ್ರಮ ಹಾಗೂ ಸಾಧನೆಯಿಂದಾಗಿ ಚಿನ್ನದ ಪದಕ ಪಡೆಯುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಮ್ಮೆ ಹೆಚ್ಚಿಸಿದ್ದಾರೆ. ಬೋಧಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಮುಂದೆ ಪಿ ಎಚ್ ಡಿ ಮಾಡುವ ಉದ್ದೇಶ ಹೊಂದಿದ್ದಾರೆ ಮುಂದೆ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಹಿರಿಮೆ ಹೆಚ್ಚಿಸುವಂತಗಲಿ ಎಂದು ಶುಭ ಹಾರೈಸಿದ್ದಾರೆ.