
ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಾದರಿ ಬಸ್ ನಿಲ್ದಾಣವಾಗಬೇಕೆಂದು ನಿರ್ಮಿಸಿದ್ದ ನಿಲ್ದಾಣ ಇಂದು ಹೆಸರಿಗಷ್ಟೇ ಹೊಸ ಬಸ್ ನಿಲ್ದಾಣವಾಗಿ ಉಳಿಯುವುದರ ಜೊತೆಗೆ ನಾಗರೀಕರಿಂದ ಈ ಕನಸಿನ ನಿಲ್ದಾಣ ಕಣ್ಮರೆಯಾಗುತ್ತಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ ಎಸ್ ಚಂದ್ರಶೇಖರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹೃದಯ ಭಾಗದಲ್ಲಿ ನಿರ್ಮಿಸಿದ್ದ ಹೊಸ ಬಸ್ ನಿಲ್ದಾಣ ಜಾಲಪ್ಪರವರ ಕನಸಿನ ಕೂಸು ಆದರೆ ಅವರ ದೂರದೃಷ್ಟಿಯಿಂದ ನಿರ್ಮಿಸಿದ್ದ ಈ ಬಸ್ ನಿಲ್ದಾಣ ಇಂದು ಶಿಥಿಲಗೊಂಡಿದೆ. ಬಸ್ ನಿಲ್ದಾಣದ ಜಾಗದಲ್ಲಿ ಬಸ್ ಡಿಪೋ ಸಹ ಇದ್ದು. ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಎರಡೂ ಸೇರಿ ಇರುವ ಈ ಜಾಗ, ನಗರದ ಎರಡು ಪ್ರಮುಖ ರಸ್ತೆಗಳ ಮಧ್ಯಭಾಗದಲ್ಲಿದೆ. ಡಿಪೋ ಚಟುವಟಿಕೆಗಳನ್ನು ಹೊರತುಪಡಿಸಿ, ಬಸ್ ನಿಲ್ದಾಣದ ಭಾಗದಲ್ಲಿ ಯಾವುದೇ ಸಕ್ರಿಯ ಸಂಚಾರ ನಡೆಯುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.
ಇಂತಹ ಸಂದರ್ಭದಲ್ಲಿ ನಗರದ ಮಧ್ಯ ಭಾಗದಲ್ಲಿ ಇರುವ ಈ ಹೊಸ ಬಸ್ ನಿಲ್ದಾಣವನ್ನು ನಮ್ಮ ಬಳಕೆಗೆ ಬರುವಂತೆ ಯೋಚಿಸಿ, ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಂಚಾರ ದಟ್ಟಣೆಯು ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಧ್ಯಭಾಗದಲ್ಲಿರುವ ಡಿಪೋವನ್ನು ಹೊರವಲಯಕ್ಕೆ ಸ್ಥಳಾಂತರಿಸಿ, ಇರುವ ಜಾಗದ ಸಂಪೂರ್ಣ ಉಪಯೋಗವನ್ನು ಬಸ್ ನಿಲ್ದಾಣದ ಉದ್ದೇಶಕ್ಕಾಗಿ ಬಳಸಿಕೊಂಡು, ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. ಬಸ್ ನಿಲ್ದಾಣವನ್ನಾಗಿಸಿಕೊಂಡು ಜನಸಾಮಾನ್ಯರಿಗೆ ಸಹಾಯ ಮಾಡುವುದು ಅಷ್ಟೇ ಅಲ್ಲದೆ, ಮುಖ್ಯವಾಗಿ ಜಾಲಪ್ಪರವರ ಕನಸಿನ ಕೂಸಿಗೆ ಮತ್ತೆ ಜೀವವನ್ನು ತುಂಬುವ ಕೆಲಸವಾಗಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಅಗ್ರಹಿಸುತ್ತದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಬಿ ಎಸ್ ಚಂದ್ರಶೇಖರ್,ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ರಾಜ್ಯ ಮುಖಂಡ ಪಿ ವಾಸು, ನರೇಂದ್ರ, ಅರವಿಂದಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಪ್ರದೀಪ್, ತಾಲ್ಲೂಕು ಕಾರ್ಮಿಕ ಘಟಕ ಶಿವ ಶಂಕರ್ ರೆಡ್ಡಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ಮಹಿಳಾ ಜಿಲ್ಲಾಧ್ಯಕ್ಷ ರಾಧಾ ಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇ ಗೌಡ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ತಾಲ್ಲೂಕು ಮುಖಂಡರಾದ ಸಂದೀಪ್ ಕುಮಾರ್,ರಾಘವೇಂದ್ರ, ಮಹಿಳಾ ಮುಖಂಡರಾದ ಗಿರಿಜಮ್ಮ, ಮಮ್ತಾಜ್, ಸೇರಿದಂತೆ ಹಲವರು ಹಾಜರಿದ್ದರು.