ದೊಡ್ಡಬಳ್ಳಾಪುರ : ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಅಪಸ್ಮಾರ ದಿನಾಚರಣೆ (ಎಪಿಲೆಪ್ಸಿ ಡೇ) ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಭಿ (KABHI) ತಂಡದ ಸಮ್ಮಿಲಿತ ಆಯೋಜನೆಯೊಂದಿಗೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದೋಡ್ಡಬಳ್ಳಾಪುರದ ಫೈತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ರ್ಯಾಲಿ ನಡೆಸಿದರು. “ಅಪಸ್ಮಾರ ಪಗಡಿನ ವಿಷಯವಲ್ಲ, ಚಿಕಿತ್ಸೆ ಪಡೆಯೋಣ, ಬದುಕು ಬೆಳಗಿಸೋಣ” ಎಂಬ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಭಿ ತಂಡದ ಅಧಿಕಾರಿಗಳು ಮಾತನಾಡಿ, “ಗ್ರಾಮೀಣ ಮಟ್ಟದಲ್ಲಿ ಅಪಸ್ಮಾರ ರೋಗದ ಬಗ್ಗೆ ಇನ್ನೂ ಭ್ರಮೆ ಇದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಅರಿವು ಮೂಡಿಸಿ ಅವರ ಜೀವನಮಟ್ಟ ಸುಧಾರಿಸಲು ಸಹಾಯ ಮಾಡುತ್ತವೆ,” ಎಂದು ಹೇಳಿದರು.

ಈ ಯೋಜನೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಭಿ ತಂಡ ಮುಂದಾಗಿದೆ.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ,ಡಾ.ಮಂಜುನಾಥ್ ,ಆಯುಷ್ ಡಾ. ಹರಿಣಿ ,ಡಾ .ಗಾಯತ್ರಿ, ಡಾ .ಅಮೃತ,ನರ್ಸಿಂಗ್ ಸೂಪರಿಂಟೆಂಡೆಂಟ್ಗಳಾದ ಶೈಲಜಾ ಮೇಡಮ್ ಹಾಗೂ ವಂದನಾ ಮೇಡಮ್ , ಕಭಿ ತಂಡದವರು ಉಪಸ್ಥಿತರಿದ್ದರು. ರ್ಯಾಲಿ ಬಳಿಕ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ ಸಭೆಯಲ್ಲಿ ಅಪಸ್ಮಾರದ ಲಕ್ಷಣಗಳು, ಚಿಕಿತ್ಸೆ ಮತ್ತು ತುರ್ತು ನಿರ್ವಹಣೆಯ ಬಗ್ಗೆ ವಿವರಣೆ ನೀಡಲಾಯಿತು.
