ದೊಡ್ಡಬಳ್ಳಾಪುರ : ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪದವಿ ಕಾಲೇಜು ಬಿಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಲಾವಣ್ಯ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ ಭಾಗವಹಿಸಿ ಮಾತನಾಡಿದರು ಯುವ ಶಕ್ತಿ ದೇಶದ ಪ್ರಗತಿಗೆ ಪೂರಕವಾಗಿರಬೇಕು ಇಂದಿನ ಯುವ ಜನ ಸ್ವಾಮಿ ವಿವೇಕಾನಂದರ ಆಶಯಗಳನ್ನು ಅನುಷ್ಟಾನಕ್ಕೆ ತರುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳಾಗಿದ್ದರು “ವೇದದ ತತ್ವಗಳನ್ನು ಯೋಗ ಶಾಸ್ತ್ರವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.ಯುವಕರು ದೇಶದ ಆಸ್ಥಿ ಆದರೆ ಇಂದಿನ ಯುವ ಜನಾಂಗದಲ್ಲಿ ಶ್ರದ್ದೆ ಸಹನೆ ಶಾಂತಿ ಕಡಿಮೆಯಾಗಿದೆ ಎಂದು ಹೇಳಿದರು
ಈ ವೇಳೆ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ, ಉಪನ್ಯಾಸಕರಾದ ಕಾರ್ತಿಕ್ ಮಹಾದೇವ್, ಎನ್ ರಶ್ಮಿ, ಅನುಷಾ, ಹರ್ಷಿತಾ, ಆಶಾ, ಗುರುಪ್ರಸಾದ್ ,ಗಂಗಮೂರ್ತಿ, ರಾಕೇಶ್ ,ಪರಿಮಳ, ಅನು, ಮೀನಾ, ಚಂದನ ,ಪ್ರಕಾಶ್, ಲತಾ ಹಾಗೂ ಪದವಿ ಪದವಿ ಪೂರ್ವ ಹಾಗೂ ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.
