ದೊಡ್ಡಬಳ್ಳಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶತಮಾನೋತ್ಸವದ ಸುಸಂದರ್ಭದಲ್ಲಿ ಹಿಂದೂ ಸಮಾಜ್ಯೋತ್ಸವ ಸಮಿತಿ, ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ಇತರೆ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜ.28 ಮತ್ತು ಜ. 29 ತಾರೀಕಿನಂದು ಹಿಂದೂ ಸಮಾಜ್ಯೋತ್ಸವ ಆಯೋಜನೆ ಮಾಡಲಾಗಿದೆ ಎಂದು ಹಿಂದೂ ಮುಖಂಡರಾದ ಹನುಮಂತರಾಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾಸಂಸ್ಥಾನ ಮತ್ತು ದೇವಾಂಗ ಜಗದ್ಗುರು ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ , ತಪಸೀಹಳ್ಳಿಪುಷ್ಪಾಂಡಜ ಮಹರ್ಷಿ ಆಶ್ರಮದಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ವಹಿಸಲಿದ್ದಾರೆ. ವೇದಿಕೆಯಲ್ಲಿ ದಿಕ್ಕೂಚಿ ಭಾಷಣ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೆ ಮಾಡಲಿದ್ದಾರೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ಮನವಿ ಮಾಡಿದರು.
ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷರಾದ ಮುನಿರಾಮೇಗೌಡ ಮಾತನಾಡಿ ಗುರುವಾರ (ಜ.29)ಬೆಳಿಗ್ಗೆ 8:00 ಕ್ಕೆ ತಾಲ್ಲೂಕಿನ ಎಲ್ಲಾ ಶಕ್ತಿ ದೇವತೆಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು ನಂತರ ಸುದರ್ಶನ ಹೋಮ, ಎಲ್ಲಾ ಭಜನಾ ಮಂಡಳಿಗಳಿಂದ “ಭಕ್ತಿ ಪಾರಾಯಣ” ನಡೆಯಲಿದೆ ಎಂದರು.
ಜ. 28 ರಂದು ಸಂಜೆ 4.00ಕ್ಕೆ ಬೈಕ್ ರ್ಯಾಲಿ
ನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ಡಿ.ಕ್ರಾಸ್, ಎಲ್.ಐ.ಸಿ. ರಸ್ತೆ, ಗಾಂಧಿ ಸರ್ಕಲ್ ಸೌಂದರ್ಯಮಹಲ್ ಸರ್ಕಲ್, ಬಸ್ ಸ್ಟ್ಯಾಂಡ್, ಲಕ್ಷ್ಮೀ ಟಾಕೀಸ್, ಶ್ರೀಕಂಠೇಶ್ವರ ದೇವಸ್ಥಾನ, ಅರಳುಮಲ್ಲಿಗೆ ಸರ್ಕಲ್, ಕೆ.ಸಿ.ಪಿ. ಸರ್ಕಲ್, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಮುಗವಾಳಪ್ಪ ಸರ್ಕಲ್.ತಾಲ್ಲೂಕು ಆಫೀಸ್ ಸರ್ಕಲ್ ನಂತರ ಭಗತ್ಸಿಂಗ್ ಕ್ರೀಡಾಂಗಣ ತಲುಪುವುದು.
ಜ. 29ಕ್ಕೆ ಬೃಹತ್ ಶ್ರೀ ರಾಮ ಶೋಭಾಯಾತ್ರೆ
ಗುರುವಾರ ಮಧ್ಯಾಹ್ನ 2:30ಕ್ಕೆ ನಗರದ ನೆಲದಾಂಜನೇಯ ದೇವಾಲಯದಿಂದ ಭಗತ್ ಸಿಂಗ್ ಕ್ರೀಡಾಂಗಣದವರೆಗೂ ಬೃಹತ್ ಶ್ರೀ ರಾಮ ಶೋಭಾಯಾತ್ರೆ ನಡೆಯಲಿದ್ದು ಎಲ್ಲಾ ಹಿಂದೂ ಭಾಂದವರು ಭಾಗವಹಿಸಬೇಕೆಂದು ಹಿಂದೂ ಮುಖಂಡರು ವಿನಂತಿಸಿದರು.
ವಿಶಾಲ ಜನಜಾಗೃತಿ ಸಭೆಯ ಮೂಲಕ ಹಿಂದೂಗಳೆಲ್ಲ ನಾವು ಸೋದರರೆಂಬ ಭಾವನೆಯನ್ನುಅಭಿವ್ಯಕ್ತಿಗೊಳಿಸಬಹುದಾಗಿದೆ.ಈ ಹಿಂದೂ ಸಮ್ಮೇಳನದಲ್ಲಿ ಸಾವಿರ ಸಾವಿರಾರು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದ್ದು.ಹಿಂದೂ ಶಕ್ತಿಯ ಅರಿವು ಮೂಡಿಸಲು ಒಟ್ಟಾಗಿ ಸೇರಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಹಿಂದೂ ಸಮಾಜ್ಯೋತ್ಸವ ಸಮಿತಿಯ ಪ್ರಮುಖರಾದ ಮುನಿರಾಮೇಗೌಡ, ಡಾ|| ಇಂದಿರಾ .ಆರ್. (ಸ್ತ್ರೀರೋಗ ತಜ್ಞರು),ಪೂರ್ಣಚಂದ್, ಭಾಸ್ಕರ್ .ಎಸ್,ವಿರಾಜ್,ಬಿ.ಜಿ.ಶ್ರೀನಿವಾಸ್,ರವಿಕುಮಾರ್,ಮಧು ಬೇಗಲಿ, ಅಗ್ನಿ ವೆಂಕಟೇಶ್, ಮಹಿಳಾ ಮುಖಂಡರಾದ ವತ್ಸಲ, ದಾಕ್ಷಾಯಿಣಿ, ವಾಣಿ, ಅಂಬಿಕಾ, ಉಮಾ ಮಹೇಶ್ವರಿ, ಮಂಜುಳಾ, ಯಶೋದಾ ಸೇರಿದಂತೆ ಹಲವರು ಹಾಜರಿದ್ದರು.
