ದೊಡ್ಡಬಳ್ಳಾಪುರ : ತಾಲ್ಲೂಕಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಬೆ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು(ಜ. 13) ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಹಣಬೆ VSSN ಅಧ್ಯಕ್ಷರಾದ ಕೆ ಎಸ್ ರವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಮುನಿರಾಜು, ಹೆಚ್ ಸಿ ಹರೀಶ್, ಹಣಬೆ ವಿ ಎಸ್ ಎಸ್ ಎನ್ ಕಾರ್ಯದರ್ಶಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಕೆ ಎಸ್ ರವಿ ಮಾತನಾಡಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ, ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು, ನಿಕಟ ಪೂರ್ವ ಶಾಸಕರಾದ ಟಿ ವೆಂಕಟರಮಣಯ್ಯ ಮತ್ತು ಆರ್ ಡಿ ಪಿ ಆರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿರುವಂತೆ ತಾಲ್ಲೂಕಿನ 05 ಕೆರೆಗಳನ್ನು ಗುರುತಿಸಲಾಗಿದೆ. ಈ ಆಯ್ಕೆ 5 ಕೆರೆಗಳಿಂದ ಕುಡಿಯುವ ನೀರನ್ನು ಕಲ್ಪಿಸುವ ವರದಿ (Feasibality Report )ತಯಾರಿಕೆಯ ಹಂತದಲ್ಲಿದ್ದು. ಸದರಿ 05 ಕರೆಗಳಲ್ಲಿ ಹಣಬೆ ಕೆರೆಯೂ ಸೇರಿದೆ, ಹಣಬೆ ಕೆರೆಗೆ ನೀರು ತುಂಬಿಸಿ ಇಲ್ಲಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು

ಈ ವೇಳೆ ಹಣಬೆ ಗ್ರಾಮದ ಮುಖಂಡರಾದ ಮಲ್ಲ ರಾಜು,ಮುನಿರಾಜು, ರಾಮಕೃಷ್ಣಪ್ಪ, ಜಗದೀಶ್ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.
Ad

