ಜ.28ರಂದು ಕೆಐಡಿಬಿ ಉಪ ವಿದ್ಯುತ್ ಕೇಂದ್ರದಲ್ಲಿ ಹಾಗೂ ಅಪೆರಲ್ ಪಾರ್ಕ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆ ಈ ಮಾರ್ಗದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದೊಡ್ಡಬಳ್ಳಾಪುರ ನಗರ ಉಪವಿಭಾಗದ AEE ಮಂಜುನಾಥ್ ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು*
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಕೆಐಎಡಿಬಿ, ಅಪೆರಲ್ ಪಾರ್ಕ್ ಹಂತ 1,2,3, KSSIDC ಕೈಗಾರಿಕಾ ಪ್ರದೇಶ, ಮಜರಾಹೊಸಹಳ್ಳಿ ಗ್ರಾ.ಪಂ, ದೊಡ್ಡತುಮಕೂರು ಗ್ರಾ.ಪಂ, ಅರಳುಮಲ್ಲಿಗೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಆಡಚಣೆವಾಗಲಿದೆ.
ದೊಡ್ಡಬಳ್ಳಾಪುರ ನಗರದ ತೇರಿನಬೀದಿ ವೃತ್ತ, ಭುವನೇಶ್ವರಿ ನಗರ, ಸಂಜಯನಗರ, ವೀರಭದ್ರನಪಾಳ್ಯ, ಚೈತನ್ಯನಗರ, ವಿದ್ಯಾನಗರ, ಕನಕದಾಸ ರಸ್ತೆ, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ರಂಗಪ್ಪ ಸರ್ಕಲ್, ಗಾಂಧಿ ನಗರ, ತೂಬಗೆರೆ ಪೇಟೆ, ಬ್ರಾಹ್ಮಣರ ಬೀದಿ, ಖಾಸ್ ಭಾಗ್, ಶ್ರೀನಗರ, ಚಂದ್ರಶೇಖರಪುರ, ರೈಲ್ವೆ ನಿಲ್ದಾಣ, ಅರೇಹಳ್ಳಿ, ಗುಡ್ಡದಹಳ್ಳಿ, ಮುತ್ತೂರು, ಸಿದ್ದೇನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
