ಭಾರತ ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಸೇವಾದಳ ಶತಮಾನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕ ಶಿಕ್ಷಕಿಯರ ಸಹಾಯಕ ಶಿಕ್ಷಣ ತರಬೇತಿ ಶಿಬಿರವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಬಿಸೆಂಟ್ ಪಾರ್ಕ್ ನಲ್ಲಿ ಆಯೋಜನೆ ಇಂದು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನೆರವೇರಿತು

ಆರು ದಿನಗಳ ಶಿಬಿರದಲ್ಲಿ ಸಾಧನೆ ಮಾಡಿದ ಹಲವು ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಸೇವಾದಳದ ವಿಶೇಷ ಆರು ದಿನಗಳ ಶಿಬಿರವನ್ನು ಕುರಿತು ಶಿಕ್ಷಕಿ ಸರಸ್ವತಿಯವರು ಮಾತನಾಡಿ ಒತ್ತಡ ನಿರ್ವಹಣೆ ಹೇಗೆ ಎಂಬುದು ಈ ಶಿಬಿರದಲ್ಲಿ ಕಲಿತ್ತಿದ್ದೇವೆ, ಮುಖ್ಯವಾಗಿ ಧ್ವಜಾವಂದನಾ ಕಾರ್ಯಕ್ರಮ ನಮ್ಮಲ್ಲಿ ನೂತನ ಚೈತನ್ಯ ತಂದಿದೆ, ಧ್ವಜಾರೋಹಣ ಹಾಗೂ ಧ್ವಜ ಅವರೋಹಣ ಹೇಗೆ ಮಾಡಬೇಕು ಧ್ವಜವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಈ ಶಿಬಿರದಲ್ಲಿ ಹಿರಿಯರಿಂದ ಕಲಿತಿದ್ದೇವೆ. ತರಬೇತಿಯು ಅತ್ಯುತ್ತಮವಾಗಿ ಮೂಡಿ ಬಂದಿದ್ದು ನಮ್ಮ ಶಾಲಾ ಮಕ್ಕಳಿಗೆ ಅನುಕೂಲಕರವಾಗಿರುವ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಎಂದು ತಿಳಿಸಿದರು

ನೆಲಮಂಗಲ ಶಿಕ್ಷಕಿಯಾದ ಪ್ರೀತಿ ಮಾತನಾಡಿ ಸಾಮಾನ್ಯವಾಗಿ ನಾವೆಲ್ಲ ನಮ್ಮ ಶಾಲೆಗಳಲ್ಲಿ ಒಂದು ವಿಷಯಕ್ಕೆ ಸೀಮಿತವಾಗಿರುವ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತೇವೆ. ಆದರೆ ನಾವು ಎಲ್ಲಾ ವಿಷಯಗಳಲ್ಲೂ ಆಸಕ್ತಿಯುಳ್ಳ ವ್ಯಕ್ತಿತ್ವ ಹೊಂದಿರಬೇಕು ಹಾಗೂ ನೃತ್ಯ ಹಾಡುಗಾರಿಕೆ ಬರವಣಿಗೆ ಎಲ್ಲಾ ವಿಷಯಗಳನ್ನು ಬೋಧಿಸುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂಬುದು ಈ ಶಿಬಿರದಿಂದ ನನಗೆ ಅರ್ಥವಾಗಿದೆ. ಹಿರಿಯ ಶಿಬಿರರ್ಥಿಗಳ ಮಾರ್ಗದರ್ಶನದಿಂದ ಹಲವು ವಿಚಾರಗಳನ್ನು ಕಲಿತಿದ್ದೇವೆ ಎಂದರು ಶಿಬಿರಾವಧಿಯಲ್ಲಿ ತಮಗೆ ಹಿರಿಯ ತರಬೇತಿದಾರರು ನೀಡಿದ ಸಹಕರವನ್ನು ನೆನೆದು ಭಾವುಕರಾದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಜಿ ಲಕ್ಷ್ಮಿಪತಿ ಮಾತನಾಡಿ ಶಿಬಿರದಲ್ಲಿ ಆರು ದಿನಗಳ ಕಾಲ ತಾವು ಕಾಯುತ್ತಿರುವ ಸಕಲ ವಿದ್ಯೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಸಮಾಜದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮುಂದಾಗಬೇಕು. ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಧ್ವಜಾರೋಹಣ ಮತ್ತು ಧ್ವಜ ಅವರೋಹಣ ಕುರಿತು ತರಬೇತಿ ನೀಡಬೇಕಿದೆ. ಶಿಬಿರದಲ್ಲಿ ಹಲವು ವಿಚಾರಗಳನ್ನು ಕುರಿತು ತಿಳುವಳಿಕೆ ಪಡೆದುಕೊಂಡಿರುವ ತಾವು ದೇಶಪ್ರೇಮ,ಧ್ವಜಗೌರವ, ಶಿಸ್ತು, ಸಮಯ ಪ್ರಜ್ಞೆ, ಉತ್ತಮ ನಡವಳಿಕೆ ಕುರಿತಂತೆ ತಮ್ಮ ಶಾಲಾ ಮಕ್ಕಳಿಗೆ ತಿಳಿಸುವ ಮೂಲಕ ಮಕ್ಕಳನ್ನು ನಮ್ಮ ದೇಶದ ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವ ಕಾರ್ಯ ತಮ್ಮಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸೇವಾದಳ ಪದಾಧಿಕಾರಿಗಳು ಉಪಸ್ಥಿತರಿದ್ದರು
