
ದೊಡ್ಡಬಳ್ಳಾಪುರ, (ಮಾ.19) ವಿಜಯ ಮಿತ್ರ : ಚಿಕ್ಕಮಧುರೆ (ಕನಸವಾಡಿ) ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವು ಅದ್ದೂರಿಯಾಗಿ ನೆರವೇರಿತು.
ತಾಲ್ಲೂಕಿನ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡು ಯಶಸ್ವೀಗೊಳಿಸಿದರು.ಆಗಮಿಸಿದ ಭಕ್ತಾದಿಗಳಿಗೆ ದಾಸೋಹ ಭವನದ ಮುಂಭಾಗ ಊಟದ ವ್ಯವಸ್ಥೆ ಕಲ್ಪಿಸಿದ್ದು , ಭಕ್ತಾದಿಗಳಿಂದ ದೇವಾಲಯ ಹಲವು ಭಾಗಗಳಲ್ಲಿ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿತ್ತು.
ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿಗಳಾದ ಜಿ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಸಿ.ಡಿ.ಸತ್ಯನಾರಾಯಣಗೌಡ, ಧರ್ಮದರ್ಶಿಗಳಾದ ಆದ ಕೆ ವಿ ಪ್ರಕಾಶ್ ರವರು ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.