
ದೊಡ್ಡಬಳ್ಳಾಪುರ ಮಾ.25 ( ವಿಜಯಮಿತ್ರ ) : ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಹುಂಡಿಯಲ್ಲಿ 53,54,401 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 25 ರಂದು ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ನೆಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 56,800ರೂಪಾಯಿ ಬೆಲೆಬಾಳುವ 1ಕೆಜಿ 540ಗ್ರಾಂ ಬೆಳ್ಳಿ,5900 ರೂಪಾಯಿ ಬೆಲೆಬಾಳುವ 1ಗ್ರಾಂ 300 ಮಿಲಿಗ್ರಾಂ ಚಿನ್ನ, ಒಟ್ಟು ನಗದು 53,54,401 ರೂಪಾಯಿ ಕಾಣಿಕೆ ಸಂಗ್ರಹ ವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ತಹಶೀಲ್ದಾರ್ ಜಿ ಜೆ ಹೇಮಾವತಿ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಡಿ. ನಾಗರಾಜು, ಪ್ರಧಾನ ಅರ್ಚಕರಾದ ನಾಗೇಂದ್ರ ಶರ್ಮ, ಸಿಬ್ಬಂದಿಗಳಾದ ನಂಜಪ್ಪ ಸೇರಿದಂತೆ ಕೆನರಾಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.