
ದೊಡ್ಡಬಳ್ಳಾಪುರ ಏಪ್ರಿಲ್ 20 (ವಿಜಯಮಿತ್ರ ) : ಕೇಂದ್ರ ಬಿಜೆಪಿ ಸರ್ಕಾರದ ನಿಲುವುಗಳನ್ನು ಖಂಡಿಸಿ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕನ್ನಡ ಪಕ್ಷದ ಬೆಂಬಲವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹಿರಿಯ ಮುಖಂಡ ಸಂಜೀವ್ ನಾಯಕ್ ತಿಳಿಸಿದರು.
ನಗರದ ಕನ್ನಡ ಪಕ್ಷ ಕಚೇರಿಯಲ್ಲಿ ಆಯೋಜನೆಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ತಾಲ್ಲೂಕಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದ ನಾಯಕ ವೆಂಕಟರೆಡ್ಡಿಯವರು ಅವರ ಆಶಾಯದಂತೆ ನಮ್ಮ ಪಕ್ಷವು ಸದಾ ಜನ ಸಾಮಾನ್ಯರ ಪರವಾಗಿ ಶ್ರಮಿಸುತ್ತಿದೆ. ನಮ್ಮದು ಜಾತ್ಯಾತೀತ ನಿಲುವಿನ ಪಕ್ಷ ಕಳೆದ ಬಾರಿ ಕೆಲ ಕಾರಣಗಳಿಂದ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು. ಈ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿ ಕಾಂಗ್ರೆಸ್ ಪಕ್ಷವು ಪತ್ರ ರವಾನಿಸಿದೆ. ಈ ಹಿಂದೆ ಜೆಡಿಎಸ್ ಪಕ್ಷವನ್ನು ಕುರಿತು ನಮಗೆ ಉತ್ತಮ ಭರವಸೆ ಇತ್ತು ಆದರೆ ಈಗ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು. ನಮ್ಮ ಭರವಸೆ ಹುಸಿಯಾಗಿದೆ. ರಾಜ್ಯದಲ್ಲಿ ಹತ್ತಾರು ಸಮಸ್ಯೆಗಳಿದ್ದು ಪರಿಹಾರದ ಕಡೆ ಯೋಚಿಸದ ಸಂಸದರು ಇಂದು ಮತ್ತೆ ಮತ ಕೇಳಲು ನಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಇದ್ದಕ್ಕೆ ತಕ್ಕ ಉತ್ತರವನ್ನು ಕನ್ನಡಿಗರು ನೀಡಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷವು ಜನಸಾಮಾನ್ಯರಿಗೆ ತನ್ನ ಗ್ಯಾರಂಟಿಗಳ ಮೂಲಕ ಉತ್ತಮ ಕಾರ್ಯಕ್ರಮ ರೂಪಿಸಿದ್ದು ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಅನುಕೂಲವಾಗಿದೆ.ಇದನ್ನು ಗಮನಿಸಿದ ನಮ್ಮ ಪಕ್ಷ ದೇಶದ ಸಂವಿಧಾನ ರಕ್ಷಣೆಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರು
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ ಪಿ ಆಂಜನೇಯ ಮಾತನಾಡಿ ಸೈದಂತಿಕಾ ನಿಲುವುಗಳ ಮೇಲೆ ಚುನಾವಣೆ ನೆಡೆಯಬೇಕಿತ್ತು ಅದರೆ ಧರ್ಮದ ಮೇಲೆ ನೆಡೆಯುತ್ತಿದೆ. ರೈತರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಬೆನ್ನೆಲುಬು ಎನ್ನುವ ರೈತರ ಬೆನ್ನೆಲುಬ್ಬನ್ನು ಮುರಿಯುವ ನಿರ್ಧಾರಗಳನ್ನು ಕೈಗೊಂಡಿದ್ದು.ದೆಹಲಿಯಲ್ಲಿ ರೈತರು ನಿರಂತರ ಹೋರಾಟ ನೆಡೆಸುತ್ತಿದ್ದು . ರೈತರು ಹೋರಾಟಕ್ಕೆ ಬಾರದಂತೆ ಹಲವು ಅಡೆತಡೆಗಳನ್ನು ಉಂಟುಮಾಡಿರುವ ಮೋದಿ ನೇತೃತ್ವದ ಸರ್ಕಾರ ಸುಮಾರು 700 ರಿಂದ 800 ರೈತರ ಸಾವಿಗೆ ಕಾರಣವಾಗಿದೆ.ಮಣಿಪುರದ ಘಟನೆಗೆ ಸ್ಪಂದಿಸದ ಮೋದಿ ಸರ್ಕಾರದ ನೆಡೆ ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ತೋರುತ್ತದೆ. ರಾಜ್ಯದಿಂದ ನಾವು ಕೇಂದ್ರಕ್ಕೆ ಸಲ್ಲಿಸುತ್ತಿರುವ ಜಿ. ಎಸ್. ಟಿ. ಹಣವನ್ನು ನೀಡುವಲ್ಲಿ ಕೇಂದ್ರ ತರತಮ್ಯ ಮಾಡುತ್ತಿದೆ ಅದನ್ನು ಪ್ರಶ್ನಿಸಿ ರಾಜ್ಯದ ಅಭಿರುದ್ಧಿಗಾಗಿ ಕೇಂದ್ರದಿಂದ ಹಣ ತರಲು ಕರ್ನಾಟಕದ 25 ಸಂಸದರು ಸೋತಿದ್ದಾರೆ ಎಂದರು. ಪ್ರಜಾಪ್ರಭುತ್ವದ ಮೇಲೆ ನೆಡೆಯುತ್ತಿರುವ ದಬ್ಬಾಳಿಕೆ ಸಂವಿಧಾನದ ಮೆಲಿನ ದಾಳಿಯನ್ನು ನಿಲ್ಲಿಸುವ ಸಲುವಾಗಿ ರಾಜ್ಯದ ಮೇಲೆ ನೆಡೆಯುತ್ತಿರುವ ಕೇಂದ್ರದ ಅನ್ಯಾಯ ಹಾಗೂ ದೋರಣೆಗಳ ಆಧಾರದಲ್ಲಿ ನಮ್ಮ ಕನ್ನಡ ಪಕ್ಷದ ಬೆಂಬಲವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ರವರಿಗೆ ನಮ್ಮ ಬೆಂಬಲ ಸುಚಿಸುತ್ತಿದ್ದೇವೆ ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕುರಿತು ನಮಗೆ ಅಸಮಧಾನವಿದ್ದು . ಪಕ್ಷದ ಎಲ್ಲ ಸದಸ್ಯರ ಸರ್ವಾನುಮತದಿಂದ ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಕನ್ನಡ ಪಕ್ಷದ ಬೆಂಬಲವನ್ನು ನೀಡಲಿದ್ದೇವೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮುನಿಪಾಪಯ್ಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.