
ನಮ್ಮ ನೆಚ್ಚಿನ ನಾಯಕ ನಟ ಜೂನಿಯರ್. ( NTR) ನಂದಮುರಿ ತಾರಕ ರಾಮರಾವ್ ಮಾತಿನಂತೆ ಹಸಿದವರಿಗೆ ಊಟ ನೀಡುವ ಮೂಲಕ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಅವರ 41ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದೇವೆ ಎಂದು ದೊಡ್ಡಬಳ್ಳಾಪುರ ಎನ್‌ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಚಂದು ಎನ್ ಟಿ ಆರ್ ತಿಳಿಸಿದರು.
ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಸುಮಾರು 10 ವರ್ಷಗಳಿಂದಲೂ ತೆಲುಗು ಚಲನಚಿತ್ರ ನಟ ಜೂನಿಯರ್.ಏನ್ ಟಿ ಆರ್ ರವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತಿದ್ದು. ಕೊರೋನ ಸಂದರ್ಭದಲ್ಲಿ ನಿರಾಶ್ರಿತ ಕಡುಬಡವರಿಗೆ ಆಹಾರಕಿಟ್ ವಿತರಣೆ, ಹಸಿದವರಿಗೆ ಆಹಾರ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದು. ಈ ಬಾರಿ 41ನೇ ಹುಟ್ಟುಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಂದಿಗೆ ನೂರಾರು ಬಡ ಕುಟುಂಬಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನ ಭಾವಚಿತ್ರದ ಮುಂಭಾಗ ಕೇಕ್ ಕತ್ತರಿಸುವ ಮೂಲಕ ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ರಾಜೇಶ್ ಮಾತನಾಡಿ ಸಂಘದ ಮುಖಂಡರು ಆತ್ಮೀಯ ಗೆಳೆಯರಾದ ಚಂದುರವರ ನೇತೃತ್ವದಲ್ಲಿ ಸತತ 8-10 ವರ್ಷಗಳಿಂದ ನಮ್ಮೆಲ್ಲರ ನೆಚ್ಚಿನ ನಟ ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು ಮುಂದೆ ಈ ಸಂಭ್ರಮಾಚರಣೆ ಮತ್ತಷ್ಟು ಬೆಳೆಯಲಿ ಮತ್ತಷ್ಟು ಕುಟುಂಬಗಳಿಗೆ ಸಹಾಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ತಮ್ಮ ಸ್ಟಾರ್ ನಟನ ಹುಟ್ಟು ಹಬ್ಬದ ಆಚರಣೆಯನ್ನು ಹೀಗೂ ಮಾಡಬಹುದೆಂದು ದೊಡ್ಡಬಳ್ಳಾಪುರ ಜೂನಿಯರ್. ಎನ್ಟಿಆರ್ ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ.1515ನೇ ದಿನದ ಅನ್ನದಾಸೋಹಕ್ಕೆ ದಾನಿಗಳಾಗಿ ತಮ್ಮ ಸಹಾಯಹಸ್ತ ನೀಡಿರುವ ಚಂದು ಎನ್ಟಿಆರ್ ಅವರಿಗೆ ಶುಭವಾಗಲಿ. ಪಟಾಕಿ ಸಿಡಿಸಿ ಹಾಲಿನ ಅಭಿಷೇಕ ಮಾಡಿಸುವ ಮೂಲಕ ಸಾಕಷ್ಟು ಹಣ ದುಂದು ವೆಚ್ಚ ಮಾಡುವ ಅಭಿಮಾನಿಗಳಿಗೆ ಇದೊಂದು ಮಾದರಿಯಾಗಿದೆ. ತಮ್ಮ ನೆಚ್ಚಿನ ಸ್ಟಾರ್ ನಟನ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ತಮ್ಮ ಯಾವುದೇ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್‌ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಎ.ಸಿ.ವೆಂಕಟೇಶ್,ಶೇಖರ್,ವಿಷ್ಣು,ಯಶು,ಪ್ರವೀಣ್,ವೆಂಕಟೇಶ್,ಕೃಷ್ಣ,ವೆಂಕಿಎನ್.ಟಿ.ಆರ್.,ಗೋಪಿ,ಅರುಣ,ಪಾರ್ಥ,ಮೋಹನ,ಭಾಸ್ಕರ್, ಗಂಗಣ್ಣ. ಹಾಗೂ ಎನ್ ಟಿ ಆರ್ ಅಭಿಮಾನಿಗಳು ಉಪಸ್ಥಿತರಿದ್ದರು.