
ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ದಿನಾಂಕ 08,09,15,16 ಜೂನ್ 2024 ಆನ್‌ಲೈನ್ ನಲ್ಲಿ ನಡೆದ 8ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್ -2024 ಯೋಗ ಚಾಂಪಿಯನ್‌ಷಿಪ್ ನಲ್ಲಿ ದೊಡ್ಡ ಬಳ್ಳಾಪುರದ ಯೋಗಪಟುಗಳು ಪ್ರತಿಭೆಗಳು ಭಾಗವಹಿಸಿ ಜಯಗಳಿಸಿದ್ದಾರೆ.
ತಾಲೂಕಿನ ನಿಸರ್ಗ ಯೋಗ ಕೇಂದ್ರ (ರಿ) ದ ಯೋಗಪಟುಗಳಾದ ಎನ್ ಖುಷಿಪ್ರಿಯ ಆದಿತ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮತ್ತು ನಳಂದ ಪ್ರೌಢಶಾಲೆಯ ಹಿತಶ್ರೀ ಕೆ.ಎಂ ಬಾಲಕಿಯರ ರಿದಮಿಕ್ ಪೇರ್ ಯೋಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.ಬಾಲಕರ ವಿಭಾಗದಲ್ಲಿ ಲಿಟ್ಸ್ ಏಂಜಲ್ ಶಾಲೆಯ ಜೆ.ಸಿ.ಪ್ರಥಮಶೆಟ್ಟಿ ಮತ್ತು ಸರಸ್ವತಿ ಶಾಲೆಯ ಎ.ಹಿತೇಶ್ ರಿದಮಿಕ್ ಪೇರ್‌ಯೋಗ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಪ್ರದಾಯಿಕ ಯೋಗದಲ್ಲಿ ನಾಗಾರ್ಜುನ ಪಿ.ಯು. ಕಾಲೇಜಿನ ಎಮ್.ಆರ್.ಜಾನ್ಹವಿ 6 ನೇ ಸ್ಥಾನವನ್ನು ಹಾಗೂ ನಳಂದ ಪ್ರೌಢಶಾಲೆಯ ಎಲ್.ನೀರಜ್ 6 ನೇ ಸ್ಥಾನವನ್ನು ಪಡೆದಿದ್ದಾರೆ.
ಯೋಗಾಸನ ಸ್ಪರ್ಧೆಯಲ್ಲಿ ವಿಶ್ವವಿದ್ಯಾ ಪೀಠದ ಎಸ್.ಆವಿಷ ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲಿನ ಮಧುಶಾಲಿನಿ.ಡಿ.ಎಸ್ ಭಾಗವಹಿಸಿದ್ದು. ಜಯಗಳಿಸಿ ತಾಲೂಕಿಗೆ ಗೌರವತಂದ ಕ್ರೀಡಾಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ತರಬೇತಿದಾರರು,ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭ ಹಾರೈಸಿದ್ದಾರೆ.