
ಕಳೆದ ಒಂದು ವಾರದಿಂದ ಮೆಳೇಕೋಟೆ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ನಾಟಕದ ಮುಖಾಂತರ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತಿದ್ದಾರೆ ಎಂದು ನವೋದಯ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುರಾನಾ ಕಾಲೇಜು,ಬೆಂಗಳೂರು ಇವರ ಸಹಯೋಗದೊಂದಿಗೆ ಗ್ರಾಮೀಣ ಮಾನಸಿಕ ಆರೋಗ್ಯದ ಕಳಂಕದ ಬಗ್ಗೆ ಪ್ರಿ ಅಸೆಸ್ಮೆಂಟ್ ಮತ್ತು ಪೋಸ್ಟ್ ಅಸೆಸ್ಮೆಂಟ್ ಅನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಮಾಡ್ಯೂಲ್ ಅಭಿವೃದ್ಧಿಪಡಿಸುತ್ತಿದ್ದು, ಈ ಕಾರ್ಯಕರ್ಮದಲ್ಲಿ ಗ್ರಾಮೀಣ ಮಾನಸಿಕ ಆರೋಗ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಾಮೀಣ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಜಾಗೃತಿಯನ್ನು ಉತ್ತೇಜಿಸಲು ತಂಡವು ಕೆಲಸ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮವನ್ನು ಕುರಿತು ಟ್ರಸ್ಟ್ ನ ಅಧ್ಯಕ್ಷ ಚೇತನ್ ಮಾತನಾಡಿ, ಮಾನಸಿಕ ಖಾಯಿಲೆ ನಮ್ಮ ಜೇವನ ಶೈಲಿಯ ಮೇಲೆ ಅವಲಂಬಿಸಿರುತ್ತದೆ, ನಗರಪ್ರದೇಶಗಳಲ್ಲಿ ಈಗಾಗಲೇ ನಾಲ್ಕುಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ, ಅದರಂತೆಯೇ ನಗರ ಪ್ರದೇಶಗಳಲ್ಲಿ ಮಾನಸಿಕ ಖಾಯಿಲೆಗೆ ಸಂಬಂಧಪಟ್ಟ ಆಸ್ಪತ್ರೆ ಗಳು ಈಗಾಗಲೇ ಸಾಕಷ್ಟು ಇವೆ, ಆದರೆ ಗ್ರಾಮೀಣ ಭಾಗದಲ್ಲಿ ಅನುಕೂಲಗಳು ಕಡಿಮೆ ಹಾಗು ಜೊತೆಯಲ್ಲಿ ಮಾನಸಿಕ ಖಾಯಿಲೆಗಳ ಬಗ್ಗೆ ಅರಿವು ಕೂಡ ಕಡಿಮೆ ಹಾಗು ಹೆಚ್ಚು ಕಳಂಕ ಇರುವುದರಿಂದ, ಸಾಂಪ್ರದಾಯಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ನಿಯಮಗಳು ಹೆಚ್ಚಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಗ್ರಾಮೀಣ ಪ್ರದೇಶದ ಜನರನ್ನು ನಿರುತ್ಸಾಹಗೊಳಿಸುತ್ತಿದೆ.
ಪ್ರಾರಂಭದ ಹಂತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಶೀಘ್ರದಲ್ಲೇ ಸಮಸ್ಯೆಯಿಂದ ಹೊರ ಬರಬಹುದು. ಆದ್ದರಿಂದ ನಾವು ಗ್ರಾಮೀಣ ಮಾನಸಿಕ ಆರೋಗ್ಯ ಉಪಕ್ರಮದ ಸಲಹೆಯ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು ಅದನ್ನು ನಮ್ಮ ದೊಡ್ಡಬಳ್ಳಾಪುರ ತಾಲೂಕಿನಿಂದಲೇ ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಮತ್ತು ಇದನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರುವುದು ನವೋದಯ ಟ್ರಸ್ಟ್ ಮತ್ತು ಸುರಾನ ಕಾಲೇಜಿನ ಗುರಿಯಾಗಿದೆ ಎಂದು ತಿಳಿಸಿದರು.