
ರಾಜ್ಯದ ಉಪಚುನಾವಣೆ ಫಲಿತಾಂಶ ಕುರಿತು ರಾಜ್ಯದ ಜನತೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅಭಿವೃದ್ಧಿಯನ್ನು ಬೆಂಬಲಿಸಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಕುರಿತು ನಿರಂತರವಾಗಿ ಎನ್.ಡಿ.ಎ ಪಕ್ಷದ ಮುಖಂಡರು ನಾಯಕರು ಮಾಡುತ್ತಿದ್ದ ಆರೋಪಗಳಿಗೆ ತಕ್ಕ ಉತ್ತರವನ್ನು ಮತದಾರರು ಉಪಚುನಾವಣೆಯಲ್ಲಿ ನೀಡಿದ್ದಾರೆ ಎಂದರು.
ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಸಿ ಪಿ ಯೋಗೇಶ್ವರ್ ಅವರ ಗೆಲುವಿಗೆ ತೊಂದರೆ ಉಂಟು ಮಾಡಬಹುದೆಂಬ ವಾದಗಳು ಹೇಳಿ ಬರುತ್ತಿದ್ದವು ಆದರೆ ಸ್ಥಳೀಯವಾಗಿ ಆ ರೀತಿ ಯಾವುದೇ ಚರ್ಚೆಗಳು ನಡೆದಿಲ್ಲ ಕೇವಲ ಅಭಿವೃದ್ಧಿ ಕಾರ್ಯಗಳನ್ನು ಕುರಿತಂತೆ ಮಾತ್ರ ಚರ್ಚೆಗಳು ನಡೆದಿದ್ದು, ಕೇವಲ ಅಭಿವೃದ್ಧಿ ಪರವಾಗಿ ಚನ್ನಪಟ್ಟಣ ಮತದಾರರು ಮತನೀಡಿದ್ದಾರೆ ಎಂದರು.
ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ನೀಡಿದ ಎಲ್ಲಾ ಮತದಾರರಿಗೆ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲಾ ಮುಖಂಡರಿಗೆ ನಾಯಕರಿಗೆ ಅಭಿನಂದನೆ ತಿಳಿಸಿದರು.