
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ವ್ಯಾಪ್ತಿಯ ಬ್ಯಾಂಕ್ ಸರ್ಕಲ್ ನಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ನೂತನ ಶಾಖಾ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಿ ಜಿ ಬಾಬು ರವರ ಮಾರ್ಗದರ್ಶನದಲ್ಲಿ ತಾಲ್ಲೂಕು ಅಧ್ಯಕ್ಷರಾದ ಚಂದ್ರು ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ರವರ ಅಧ್ಯಕ್ಷತೆಯಲ್ಲಿ ಬಾಶೆಟ್ಟಿಹಳ್ಳಿ ವ್ಯಾಪ್ತಿಯ ನೂತನ ಶಾಖೆಯ ನಾಮಫಲಕ ಅನಾವರಣ ಮಾಡಲಾಯಿತು
ಈ ಸಂದರ್ಭದಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ಮಾತನಾಡಿ ಕನ್ನಡ ಭಾಷೆ ನಮ್ಮ ಹೆಮ್ಮೆ ಭಾಷೆಯ ಉಳಿವಿಗಾಗಿ ಶ್ರಮಿಸುವ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಗೆ ಮತ್ತೊಂದು ಶಾಖೆ ಸೇರ್ಪಡೆಗೊಂಡಿರುವುದು ಸಂತಸದ ವಿಷಯವಾಗಿದೆ . ವಿಶೇಷವಾಗಿ ಹೆಚ್ಚಿನ ಕಾರ್ಖಾನೆಗಳನ್ನು ಹೊಂದಿರುವ ಬಾಶೆಟ್ಟಿ ಹಳ್ಳಿ ವ್ಯಾಪ್ತಿಯಲ್ಲಿ ಕನ್ನಡಿಗರಿಗೆ ಮೊದಲ ಪ್ರಾಮುಖ್ಯತೆ ನೀಡಬೇಕು ಹಾಗೂ ಹೊರ ರಾಜ್ಯಗಳಿಂದ ವಲಸೆ ಬಂದು ಜೀವನ ಸಾಗಿಸುತ್ತಿರುವ ಅನ್ಯ ಭಾಷೆ ಮಾತನಾಡುವ ಜನರಿಗೆ ಕನ್ನಡವನ್ನು ಕಲಿಸುವ ಕೆಲಸ ನಮ್ಮಿಂದಾಗಬೇಕು ಎಂಬುದು ಈ ಶಾಖೆಯ ಮುಖ್ಯ ಉದ್ದೇಶವಾಗಿದೆ ನೂತನ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಿರವರಿಗೆ ಶುಭವಾಗಲಿ ಎಂದು ಹಾರೈಸಿದರು
ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಬಿ ಆರ್ ಚಂದ್ರು ಶೆಟ್ಟಿ ರವರು ಮಾತನಾಡಿ ರಾಜ್ಯದಲ್ಲಿ ಕನ್ನಡ ಪರವಾಗಿ ಶ್ರಮಿಸುವ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಗೆ ಯುವಕರ ಬೆಂಬಲ ಮತ್ತಷ್ಟು ಶಕ್ತಿ ನೀಡಿದೆ ನಮ್ಮ ದ್ವನಿ ಎಂದಿಗೂ ಕನ್ನಡಪರ ಕನ್ನಡಿಗರ ಪರ ಕನ್ನಡದ ವಿಚಾರವಾಗಿ ಎಂದೆಂದಿಗೂ ನಮ್ಮ ಸಂಘಟನೆ ಹೋರಾಟಕ್ಕೆ ಸಿದ್ಧವಿರುತ್ತದೆ ನಮ್ಮ ಸಂಘದ ಮುಖ್ಯ ಉದ್ದೇಶ ಕನ್ನಡ ನಾಡಿನಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅಭಿಮಾನ ಹುಟ್ಟಬೇಕು ಹಾಗೂ ಕನ್ನಡದ ಬಳಕೆ ಹೆಚ್ಚಾಗಬೇಕು ಎಂಬುದು ಕನ್ನಡಿಗರ ಶಕ್ತಿಯ ಪ್ರತಿರೂಪ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯಾಗಿದೆ . ನೂತನ ಅಧ್ಯಕ್ಷರಿಗೆ ಹಾಗೂ ಶಾಖೆಗೆ ಶುಭವಾಗಲಿ ತಮ್ಮಿಂದ ಮತ್ತಷ್ಟು ಕನ್ನಡ ಬೆಳೆಯಲಿ ಎಂದು ಹಾರೈಸಿದರು
ಬಾಶೆಟ್ಟಿ ಹಳ್ಳಿ ಶಾಖೆಯ ನೂತನ ಅಧ್ಯಕ್ಷರಾದ ಗೋಪಿ ಮಾತನಾಡಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯೊಂದಿಗೆ ನಾವು ಸದಾ ಇರುತ್ತೇವೆ ಕನ್ನಡದ ಉಳಿವಿಗಾಗಿ ಶ್ರಮಿಸುವ ಎಲ್ಲಾ ಪದಾಧಿಕಾರಿಗಳ ಶಕ್ತಿಯಾಗಿ ನಮ್ಮ ಶಾಖೆ ಇರುತ್ತದೆ ನಮ್ಮಿಂದ ಖಂಡಿತವಾಗಿಯೂ ಕನ್ನಡವನ್ನು ಬೆಳೆಸುವ ಕಾರ್ಯ ಸದಾ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು
ರಾಜ್ಯ ಅಧ್ಯಕ್ಷರು ಡಿ ಜಿ ಬಾಬು, ರಾಜ್ಯ ಉಪಾಧ್ಯಕ್ಷರು ಸಿ ಜಿ ಮಂಜುನಾಥ್ ,ರವರು ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷರು ಪದ್ಮಾವತಿ ,ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ,ರಾಜ್ಯ ಖಜಾಂಜಿ ಮಂಜುನಾಥ್,ರಾಜ್ಯ ಸಂಚಾಲಕರು ಭಾನುಪ್ರಕಾಶ್ ,ತಾಲ್ಲೂಕು ಗೌರವಾಧ್ಯಕ್ಷ ಗಂಗಾಧರ್,ತಾಲ್ಲೂಕು ಉಪಾಧ್ಯಕ್ಷ ಬೈರೇಗೌಡ, ನೂತನ ಶಾಖೆಯ ಉಪಾಧ್ಯಕ್ಷ ವಿಶ್ವಾಸ್ ಶೆಟ್ಟಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು