
ದೊಡ್ಡಬಳ್ಳಾಪುರ : ರಸ್ತೆ ಕಾಮಗಾರಿ ಪರಿಶೀಲನೆಗೆ ಮುಂದಾದ ಗ್ರಾಮಪಂಚಾಯಿತಿ ವಿರುದ್ಧ ಹೋರಾಟ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ.
ಘಟನೆ ಸಂಬಂಧ ಕೊನೇನಹಳ್ಳಿ ಯಿಂದ ಜ್ಯೋತಿಪುರದ ವರೆಗೆ ಸಾಗುವ ರಸ್ತೆ ಕುರಿತಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗುಣಮಟ್ಟದ ಪರಿಶೀಲನೆ ಎಂದು ತೆರಳಿದ್ದು ರಸ್ತೆ ಕಾಮಗಾರಿ ಕೆಲಸ ಸ್ಥಗಿತಗೊಂಡಿರುವ ಕಾರಣ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯ ಮಟ್ಟದ ಮುಖಂಡರಿಂದ ಗ್ರಾಮ ಪಂಚಾಯಿತಿ ಮುಂಭಾಗ ಧರಣಿ ಮಾಡಲಾಯಿತು
*ರಸ್ತೆ ಕುರಿತು ಸ್ಥಳೀಯರ ಮಾತು*
ಸಕ್ಕರೆಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಮ್ಮ ಕಂಗಳಾಪುರ ಹಾಗೂ ಜ್ಯೋತಿಪುರ ಗ್ರಾಮಗಳಿಗೆ ಸರಿಯಾದ ರಸ್ತೆ ಮಾರ್ಗ ಇಲ್ಲವಾಗಿದ್ದು ಕಳೆದ ಬಾರಿ ಶಾಸಕರಾಗಿದ್ದ ಟಿ.ವೆಂಕಟರಮಣಯ್ಯಾ (ಮಾಜಿ ಶಾಸಕರು )ರವರ ನೇತೃತ್ವದಲ್ಲಿ ನಮ್ಮ ಊರಿಗೆ ರಸ್ತೆ ಯ ಅನುದಾನ ನೀಡಲಾಗಿದೆ ಮುಕ್ತಯ ಹಂತ ತಲುಪಿರುವ ರಸ್ತೆಗೆ ಮತ್ತೆ ವಿಘ್ನ ಎದುರಾದಂತಿದೆ. ರಸ್ತೆ ವಿಚಾರದಲ್ಲಿ ರಾಜಕೀಯ ನೆಡೆಯುತ್ತಿದೆಯೇ ಎಂದು ಅನುಮಾನ ಶುರುವಾಗಿದೆ ಎನ್ನುತ್ತಾರೆ ಸ್ಥಳೀಯರು
*ಆರೋಪ ಏನು?*
ಸ್ಥಳೀಯ ಹಾಲಿ ಶಾಸಕರಾದ ಧೀರಜ್ ಮುನಿರಾಜು ರವರ ಗಮನಕ್ಕೆ ತರದೆ ಡಾಂಬರೀಕರಣ ಮಾಡಲಾಗಿದೆ ಎಂಬ ಒಂದೇ ಕಾರಣಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಬಿಜೆಪಿ ಮುಖಂಡರು ಇನ್ನೇನು ಮುಕ್ತಾಯ ಹಂತದಲ್ಲಿರುವ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಎಂಬುದು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ
*ಕಂಗಳಾಪುರ ಗ್ರಾಮದ ಮುಖಂಡರು ಹೇಳಿದ್ದಿಷ್ಟು*
ಗ್ರಾಮದ ಕೊನೇನಹಳ್ಳಿ ಹಾಗೂ ಜ್ಯೋತಿಪುರ ಮಾರ್ಗದ 1.5 ಕಿಲೋಮೀಟರ್ ರಸ್ತೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಡಾಂಬರು ಹಾಕಲಾಗುತ್ತಿದೆ. ನವೆಂಬರ್ 17ರಂದು ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಮೂರು ಗ್ರಾಮದ ಜನರಿಗೆ ಅನಾನುಕೂಲವಾಗಿದೆ ಕೇವಲ 200 ಮೀಟರ್ ರಸ್ತೆ ಕಾಮಗಾರಿ ಬಾಕಿ ಇದ್ದು ರಸ್ತೆ ಡಾಂಬರಿಕಾರಣ ನಿಂತು ಹೋಗಿದೆ ಗ್ರಾಮ ಪಂಚಾಯಿತಿಯು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು
*ಅಭಿವೃದ್ಧಿಯ ವಿರೋಧಿಗಳು ನಾವಲ್ಲ : ರಸ್ತೆ ಕಾಮಗಾರಿಗೆ ನಾವು ಅಡ್ಡಿ ಮಾಡಿಲ್ಲ*
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ (ಅಪ್ಪಿ )ಅವರು,ಡಾಂಬರೀಕರಣದ ಸ್ಥಳಕ್ಕೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಭೇಟಿ ನೀಡಿದ್ದು ಈ ವೇಳೆ ಕಾಮಗಾರಿಗೆ ಅಗತ್ಯ ವಸ್ತುಗಳು ಖಾಲಿಯಾಗಿದ್ದರಿಂದ ಕೆಲಸಗಾರರು ಹೊರಟು ಹೋಗಿದ್ದರು. ಕಾಮಗಾರಿಗೆ ನಾವು ಅಡ್ಡಿ ಪಡಿಸಿಲ್ಲ ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಂಶವಿಲ್ಲ. ನಮಗೂ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿಯಾಗಬೇಕು. ಗ್ರಾಮಗಳ ಅಭಿವೃದ್ಧಿಗೆ ನಮ್ಮ ಬೆಂಬಲ ಸಹಕಾರ ಇದ್ದೇ ಇರುತ್ತೆದೆ. ಕೊನೇನಹಳ್ಳಿ ಮಾರ್ಗವಾಗಿ ಜ್ಯೋತಿಪುರ ಸೇರುವ ರಸ್ತೆಯ ಡಾಂಬರೀಕರಣ ಗುಣಮಟ್ಟದ್ದಾಗಿರಲಿ ಎಂಬುದಷ್ಟೇ ನಮ್ಮ ಉದ್ದೇಶ. ಗ್ರಾಮಗಳ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪಕ್ಷಬೇದ, ಅಥವಾ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಾಧರ್ ಬಿಜೆಪಿ ಮುಖಂಡರಾದ ಸಂಕರಸನಹಳ್ಳಿ ಕೆಂಪರಾಜು, ಸಕ್ಕರೆಗೊಲ್ಲಹಳ್ಳಿ ಹನುಮಂತಯ್ಯ, ಸೋಮಶೇಖರ್, ಸಕ್ಕರೆಗೊಲ್ಲಹಳ್ಳಿ ನವೀನ್, ಸಕ್ಕರೆಗೂಲ್ಲಹಳ್ಳಿ ತಿಮ್ಮರಾಜು, ಸಕ್ಕರೆಗೊಲ್ಲಹಳ್ಳಿ ದರ್ಶನ್, ಸಕ್ಕರೆಗೂಲ್ಲಹಳ್ಳಿ ವಿನೋದ್, ಸಂಕರಸನಹಳ್ಳಿ ಗಂಗಮುತ್ತೇಗೌಡ, ಕೊನೇನಹಳ್ಳಿ ರವಿ, ಸಕ್ಕರೆಗೊಲ್ಲಹಳ್ಳಿ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು