
*ದೊಡ್ಡಬಳ್ಳಾಪುರ* : ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಲ್ಲೇಶ್ ರವರ ನೇತೃತ್ವದಲ್ಲಿ ಸತತವಾಗಿ ದಾನಿಗಳ ನೆರವಿನಿಂದ ಅನ್ನದಾಸೋಹ ಕಾರ್ಯಕ್ರಮ ನೆಡೆಯುತ್ತಿದ್ದು
1333ನೇ ಅನ್ನದಾಸೋಹ ದಾನಿಗಳಾಗಿ ರವಿ ಕುಮಾರ್, ಹಾಗೂ ನಗರಭಾಗದ ದರ್ಬಾರ್ ಹೋಟೆಲ್ ಮಾಲೀಕರಾದ ಅಭಿಲಾಷ್ ರವರು ಸಹಾಯ ಹಸ್ತ ನೀಡಿದ್ದು ಕುಮಾರಿ ಮೌಲ್ಯ ರವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ದರ್ಬಾರ್ ಬಿರಿಯಾನಿ ಹೋಟೆಲ್ ಮಾಲೀಕರಾದ ಅಭಿಲಾಷ್ ಮಾತನಾಡಿ ನಮ್ಮ ಪುಟಾಣಿ ಮೌಲ್ಯ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಲಾಗಿದೆ ಹಾಗೂ ಮಲ್ಲೇಶ್ ರವರ ಸಹಕಾರದೊಂದಿಗೆ ಅನ್ನದಾಸೋಹ ನೆಡೆಸಲಾಗಿದೆ. ಎಲ್ಲರೂ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ ಎಂದು ಮನವಿ ಮಾಡಿದರು
ಸಮಾಜಸೇವಕರಾದ ಸೇಲ್ವಮ್ ಮಾತನಾಡಿ ಮಲ್ಲೇಶ್ ಮತ್ತು ತಂಡ ಸತತವಾಗಿ 1333 ದಿನಗಳ ಅನ್ನದಾಸೋಹ ಕಾರ್ಯ ನೆಡೆಸುತ್ತಾ ಬಂದಿದೆ ಇನ್ನು ಮುಂದೆಯೂ ಸಹ ಯಾವುದೇ ಅಡೆತಡೆಗಳಿಲ್ಲದೆ ಸಾಗಲಿ ಎಂದು ಹಾರೈಸಿದರು
ಕಾರ್ಯಕ್ರಮದ ಆಯೋಜಕರಾದ ಮಲ್ಲೇಶ್ ಮಾತನಾಡಿ ಸತತವಾಗಿ ದಾನಿಗಳ ನೆರವಿನಿಂದ ಅನ್ನದಾಸಹ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು. ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ ಯಾವುದೇ ವಿಶೇಷ ದಿನಗಳನ್ನು ನಮ್ಮ ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ, ಬಡವರ ಹಸಿವು ನೀಗಿಸುವ ಕಾಯಕವನ್ನು ಮಾಡಬೇಕಾಗಿ ಮನವಿ ಮಾಡಿದರು ಹಾಗೂ ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ಕಿರಣ್, ಮಧುಸೂದನ್ ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು
ಈ ಸಂದರ್ಭದಲ್ಲಿ ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು