
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಿಸವನಹಳ್ಳಿ ಗ್ರಾಮದಲ್ಲಿ ಪಡಿತರ ಆಹಾರ ಧಾನ್ಯ ವಿತರಿಸುವಂತೆ ಆಹಾರ ಸರಬರಾಜು ಇಲಾಖೆಯ ಅಧಿಕಾರಿಯಾದ ಶಶಿಕಲಾರವರಿಗೆ ಗ್ರಾಮಸ್ಥರಿಂದ ಮನವಿ ಪತ್ರ ಸಲ್ಲಿಸಲಾಯಿತು.
ಕಸುವನಹಳ್ಳಿ ಗ್ರಾಮದಲ್ಲಿ ಆಹಾರ ಪಡಿತರ ಕೇಂದ್ರವಿದ್ದು ಬಿಸುವನಹಳ್ಳಿ ಗ್ರಾಮದಿಂದ ಒಂದುವರೆ ಕಿಲೋಮೀಟರ್ ಹೋಗಿ ಪಡಿತರ ಆಹಾರ ದಾನ್ಯ ಪಡೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಬಿಸವನಹಳ್ಳಿ ಗ್ರಾಮಸ್ಥರ ಮತ್ತು ಕಸುವನಹಳ್ಳಿ ಗ್ರಾಮಸ್ಥರ ನಡುವೆ ಆಹಾರ ಧಾನ್ಯ ಪಡೆಯುವ ವೇಳೆ ಜಗಳ ,ಗಲಾಟೆಗಳು ನಡಯುತ್ತಿದ್ದು ಅದನ್ನು ತಡಯುವ ಉದ್ದೇಶ ದಿಂದ ಬಿಸುವನ ಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಆಹಾರ ಪಡಿತರ ದಾನ್ಯ ವಿತರಿಸಬೇಕು ಹಾಗೂ ಸ್ಥಳೀಯವಾಗಿ ಕೇಂದ್ರ ಸ್ಥಾಪಿಸಿ ಅಹಾರ ಕೊಡಬೇಕೇಂದು ಬಿಸವನಹಳ್ಳಿ ಗ್ರಾಮಸ್ಥರು ಮತ್ತು ಮುಖಂಡರಿಂದ ಆಹಾರ ಸರಬರಾಜು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾರಾಯಣ ಸ್ವಾಮಿ ಮಾತನಾಡಿ ವಯಸ್ಸಾದವರು , ಅಂಗವಿಕಲರು ಕಿಲೋಮೀಟರ್ ಗಟ್ಟಲೇ ಧಾವಿಸಿ ಆಹಾರ ಧಾನ್ಯ ಪಡೆದುಕೊಳ್ಳಲು ಕಷ್ಟ ಸಾದ್ಯ, ಮತ್ತು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದ ಜನಾಂಗದವರು ಶೇಕಡಾ 80% ಇರುವುದರಿಂದ ದಯವಿಟ್ಟು ಬಿಸುವನ ಹಳ್ಳಿ ಗ್ರಾಮದಲ್ಲಿ ಆಹಾರ ಪಡಿತರ ದಾನ್ಯ ವಿತರಿಸಬೇಕಾಗಿ ಅಧಿಕಾರಿಯವರನ್ನು ಒತ್ತಾಯಿಸಿದ್ದೇವೆ ಕಸುವನಹಳ್ಳಿ ಗ್ರಾಮದ ಜನರು ನಮ್ಮ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡುತ್ತಿರುವ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.ನಮ್ಮ ಗ್ರಾಮದಲ್ಲಿ ಕಸುವನಹಳ್ಳಿ ಗ್ರಾಮಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಇದ್ದು ಪಡಿತರ ಚೀಟಿಯೂ ಸಹ ಆ ಗ್ರಾಮಕ್ಕಿಂತ ಹೆಚ್ಚು ಇವೆ. ಹಾಗೂ ಶೇ 80 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾತಿಗೆ ಸೇರಿದವರು ವಾಸಿಸುತ್ತಿದ್ದು. ಜೊತೆಗೆ ಇತರೆ ಜನಾಂಗದ ಜನರು ವಾಸಿಸುತ್ತಿದ್ದಾರೆ, ಸುಮಾರು 2500 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದರು ಸಹ ನಮ್ಮ ಗ್ರಾಮಸ್ಥರು ಕಸುವನಹಳ್ಳಿ ಗ್ರಾಮಕ್ಕೆ ಹೋಗಿ ಆಹಾರ ಪಡಿತರ ಧಾನ್ಯ ಪಡೆಯುವಂತ್ತಾಗಿದೆ. ಅಲ್ಲಿನ ಗ್ರಾಮಸ್ಥರು ನೀವೂ ಯಾಕೆ ಇಲ್ಲಿಗೆ ಬರುವುದು , ನಿಮಗೆ ಮಾನ ಮರ್ಯಾದೆ ಇಲ್ವ , ನಿಮ್ಮ ಗ್ರಾಮದಲ್ಲಿ ನೀವೂ ಆಹಾರ ಧಾನ್ಯ ಪಡೆದು ಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಎರಡು ಗ್ರಾಮಗಳ ಮಧ್ಯೆ ಜಗಳ ಗಲಾಟೆ ನಡೆಯುವ ಸನ್ನಿವೇಶಗಳು ಹೆಚ್ಚಿದೆ. ಈ ಸೂಕ್ಷ್ಮತೆಯನ್ನು ಮನಗಂಡು ಮುಂದೆ ಆಗುವ ಅನಾಹುತವನ್ನು ತಡೆಯುವ ಉದ್ದೇಶದಿಂದ ಕೂಡಲೇ ನಮ್ಮ ಗ್ರಾಮದ ಫಲಾನುಭವಿಗಳಿಗೆ ನಮ್ಮ ಗ್ರಾಮದಲ್ಲೇ ಆಹಾರ ಪಡಿತರ ಧಾನ್ಯ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ ಇಲ್ಲವಾದರೇ ನಾವೂ ಮುಂದಿನ ತಿಂಗಳಿಂದ ಕಸುವನಹಳ್ಳಿ ಅಥವಾ ಬಾಶೆಟ್ಟಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯ ಪಡೆಯುವುದಿಲ್ಲ ನಮ್ಮ ಗ್ರಾಮದಲ್ಲಿ ವಿತರಿಸುವ ತನಕ ಪ್ರತಿಭಟನೆ ಮಾಡುತ್ತೇವೆ ಗ್ರಾಮಸ್ಥರ ನೋವನ್ನು ಮನಗೊಂಡು ಮುಂದಿನ ತಿಂಗಳಿನಿಂದ ಪಡಿತರ ವಿತರಣೆ ನಮ್ಮ ಗ್ರಾಮದಲ್ಲೇ ನೀಡಬೇಕೆಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಣ್ಣ , ಮಂಜುನಾಥ, ಯಲ್ಲಪ್ಪ , ನಾರಾಯಣಸ್ವಾಮಿ, , ವೆಂಕಟರಮಣಪ್ಪ ಮತ್ತು ನವೀಲ್ ಮತ್ತಿತರರು ಉಪಸ್ಥಿತರಿದ್ದರು