
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ಹುಸ್ಕುರು ಬಳಿಯ ಕೃಷಿಕ ಕುಟೀರ ಕಲ್ಯಾಣ ಮಂಟಪದಲ್ಲಿ ಕರುನಾಡ ಯುವ ರಕ್ಷಣಾ ವೇದಿಕೆಯ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಲಗ ಚಿತ್ರದ ಸೂರಿ ಅವರನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು
ತಾಲ್ಲೂಕಿನ ನಗರ ಭಾಗದ ತಾಲ್ಲೂಕು ಕಛೇರಿ ಮುಂಭಾಗದಿಂದ ಕಾರ್ಯಕ್ರಮದ ಸ್ಥಳಕ್ಕೆ ನಟ ಸೂರಿ ಯವರನ್ನು ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹುಸ್ಕೂರು ಆನಂದ್ ವಹಿಸಿದ್ದು ಕಾರ್ಯಕ್ರಮದಲ್ಲಿ ನಟ ಸೂರಿ,ತಾಲ್ಲೂಕಿನ ಪ್ರತಿಭೆ ಅಂಜಿ , ಸೇರಿದಂತೆ ಹಲವು ಸಾಧಕರಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸಲಗ ಸೂರಿ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನೊಂದಿಗೆ ನನಗೆ ವಿಶೇಷ ಅನುಬಂಧವಿದ್ದು ಕರುನಾಡ ಯುವ ರಕ್ಷಣಾ ವೇದಿಕೆ ಯ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ ಕಾರ್ಯಕ್ರಮದಲ್ಲಿ ನನ್ನನು ಆಹ್ವಾನಿಸಿ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟ ಸಂಘಟನೆಯ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮುಂದಿನ ಜನವರಿ ತಿಂಗಳಿನಲ್ಲಿ “ಸೂರಿ ಅಣ್ಣ” ಚಿತ್ರ ಸೆಟ್ಟೇರುತ್ತಿದೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದು ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಹುಸ್ಕೂರು ಆನಂದ್ ಮಾತನಾಡಿ ಸಂಘಟನೆ ಸ್ಥಾಪಿಸಿದ ಉದ್ದೇಶವೇ ಕನ್ನಡ ನಾಡು, ಭಾಷೆಯ ಉಳಿವಿಗಾಗಿ ,ಇಂದಿನ ಕನ್ನಡ ಹಬ್ಬವನ್ನು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸಂತಸದಿಂದ ಆಚರಿಸಿದ್ದಾರೆ ಕನ್ನಡ ಭಾಷೆ ಉಳಿವಿಗಾಗಿ ನಮ್ಮ ಶ್ರಮ ಯಾವಾಗಲೂ ಇರುತ್ತದೆ ನೊಂದವರ ಶಕ್ತಿ ನಮ್ಮ ಕರುನಾಡ ಯುವ ರಕ್ಷಣಾ ವೇದಿಕೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು
ಈ ಸಂದರ್ಭದಲ್ಲಿ ಕರುನಾಡ ಯುವ ರಕ್ಷಣಾ ವೇದಿಕೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಶಂಕರ್ ತಾಲ್ಲೂಕು ಅಧ್ಯಕ್ಷರಾದ ಚೇತನ್ ತಾಲ್ಲೂಕು ಉಪಾಧ್ಯಕ್ಷರಾದ ಅರುಣ್ ಕುಮಾರ್ ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .