
ಸಹಕಾರ ರತ್ನ ಪ್ರಶಸ್ತಿ ಪಡೆದ ಚುಂಚೆಗೌಡ ರವರಿಗೆ ತಾಲ್ಲೂಕಿನ ನಾಗರೀಕರ ಹಾಗೂ ಚುಂಚೇಗೌಡ ಅಭಿಮಾನಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ಡಿಸೆಂಬರ್ 19 ರಂದು ಆಯೋಜನೆ ಮಾಡಿರುವ ಕುರಿತು ಚುಂಚೇಗೌಡ ಅಭಿಮಾನಿಗಳಿಂದ ಸುದ್ದಿಗೋಷ್ಠಿ ನಡೆಸಲಾಯಿತು
ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಜಿ.ಲಕ್ಷ್ಮೀಪತಿ ಮಾತನಾಡಿ ತಾಲ್ಲೂಕಿನ ಹೆಮ್ಮೆ ಎಂದರೆ ತಪ್ಪಾಗಲಾರದು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಚುಂಚೆಗೌಡ ರವರಿಗೆ ಕರ್ನಾಟಕ ರಾಜ್ಯ ಸರ್ಕಾರ “ಸಹಕಾರ ರತ್ನ “ಪ್ರಶಸ್ತಿ ನೀಡಿ ಗೌರವಿಸಿದೆ ಈ ಸಂಭ್ರಮವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗರೀಕರ ಹಾಗೂ ಅಭಿಮಾನಿಗಳಿಂದ ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ಗೌರವಿಸುವ ಸಲುವಾಗಿ ಕಾರ್ಯಕ್ರಮ ರೂಪಿಸಿದ್ದು ಚುಂಚೆಗೌಡರ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಅಪ್ಪಯ್ಯಣ್ಣ ಮಾತನಾಡಿ ತಾಲ್ಲೂಕಿನ ಸಹಕಾರ ಸಂಘದ ಹೆಮ್ಮೆ ರಾಜ್ಯ ಮಟ್ಟದಲ್ಲಿ ಗುರುತಿಸುವುದು ಶ್ಲಾಘನೀಯ ಚುಂಚೇಗೌಡರ ಅಭಿಮಾನಿಗಳು ಹಾಗೂ ವಿಎಸ್ಎಸ್ಎನ್ ಹಾಗೂ ಇತರೆ ಸಹಕಾರಿ ಸಂಘಗಳ ಸಹಕಾರದೊಂದಿಗೆ ಸನ್ಮಾನಿತರ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು
ಜೆಡಿಎಸ್ ಮುಖಂಡ ಕುರಿವಿಗೆರೆ ನರಸಿಂಹಯ್ಯ ಮಾತನಾಡಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ಯಾನ್ನು ಹಿರಿಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್.ಜಿ.ವೆಂಕಟಾಚಲಯ್ಯ ವಹಿಸಲಿದ್ದು ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ತಾಲ್ಲೂಕಿನ ಮಾಜಿ ಶಾಸಕರು ಆದ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತೆಂಗು ನಾರೀನ ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು ,ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ , ಎ.ನರಸಿಂಹಯ್ಯ, ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಕಾಂಗ್ರೆಸ್ ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಮುಖಂಡರಾದ ಕೆಂಪೇಗೌಡ, ರಾಮಕೃಷ್ಣ, ರಾಜಗೋಪಾಲ್, ಮುನಿರಾಜು, ತಳವಾರ್ ನಾಗರಾಜ್, ನಾರಾಯಣಪ್ಪ, ವೆಂಕಟಾಚಲಪತಿ ಮತ್ತಿತರರು ಉಪಸ್ಥಿತರಿದ್ದರು