
ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯಕ್ಕೆ ನಮ್ಮ ಆದ್ಯತೆ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಉದ್ದೇಶ ಎಂದು ತೂಬಗೆರೆ ಪಂಚಾಯತಿಯ ಅಧ್ಯಕ್ಷೆ ನಂಜಮ್ಮ ಬಿ ಚಿಕ್ಕಮುದ್ದೆನಹಳ್ಳಿ ತಿಳಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ತೂಬಗೆರೆ ಮತ್ತು ಮುಕ್ಕಡಿಘಟ್ಟ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ಪದಾರ್ಥ ನೀರು , ಶುದ್ದ ನೀರು ಗ್ರಾಮಗಳ ಗ್ರಾಮಸ್ಥರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕೆನ್ನುವ ಆಶಯಕ್ಕೆ, ಪಂಚಾಯಿತಿಯ ಶ್ರಮಕ್ಕೆ ಇದ್ದು ಫಲ ಸಿಕ್ಕಿದೆ ತೂಬಗೆರೆ, ಮುಕ್ಕಡಿಘಟ್ಟ ಗ್ರಾಮಗಳ ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಕುಡಿಯುವ ನೀರಿನ ಘಟಕದ ಬಳಕೆ ಹಾಗೂ ನಿರ್ವಹಣೆ ಮಾಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಕೆಪಿಪಿಸಿ ಸದಸ್ಯರಾದ ಎಸ್. ಆರ್.ಮುನಿರಾಜು ಮಾತನಾಡಿ ಸತತ ಹಲವು ವರ್ಷಗಳ ಹೋರಾಟದ ಪ್ರತಿಫಲ ನಮ್ಮ ಪಂಚಾಯಿತಿ ವ್ಯಾಪ್ತಿಗೆ ಶುದ್ದ ಕುಡಿಯುವ ನೀರಿನ ಘಟಕ ಸಿಕ್ಕಿದೆ. ಸಾರ್ವಜನಿಕರು ಶುದ್ದ ಕುಡಿಯುವ ನೀರಿನ ಘಟಕವನ್ನು ಸದುಪಯೋಗ ಪಡಿಸಿಕೊಳ್ಳಬೇಕು .ಅಧ್ಯಕ್ಷರ ಹಾಗೂ ಪಂಚಾಯಿತಿ ಅಧಿಕಾರಿಗಳ ಸತತ ಪ್ರಯತ್ನದಿಂದ ನೂತನ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ . ಈ ಘಟಕದ ಸದ್ಬಳಕೆ ಗ್ರಾಮಸ್ಥರ ಜವಾಬ್ದಾರಿ ಎಂದು ತಿಳಿಸಿದರು
ಮುಕ್ಕಡಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಮಾತನಾಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಗ್ರಾಮ ನಮ್ಮದಾಗಿದ್ದು ಸ್ಥಳೀಯ ಹೋಬಳಿ ಮುಖಂಡರ ಹಾಗೂ ತೂಬಗೆರೆ ಪಂಚಾಯಿತಿ ಅಧ್ಯಕ್ಷರ ಸಹಕಾರದೊಂದಿಗೆ ಈ ಶುದ್ದ ನೀರಿನ ಘಟಕ ಸ್ಥಾಪನೆಯಾಗಿ ಉದ್ಘಾಟನೆಯಾಗಿದ್ದು ಗ್ರಾಮಸ್ಥರಿಗೆ ಅನುಕೂಲವಾಗಿದೆ .ಗ್ರಾಮಸ್ಥರ ಉತ್ತಮ ಆರೋಗ್ಯ ಕಾಪಾಡುವಲ್ಲಿ ಈ ಶುದ್ದ ನೀರಿನ ಘಟಕಗಳು ಪ್ರಮುಖ ಪಾತ್ರವಹಿಸಲಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವರಲಕ್ಷ್ಮಿ ಕೃಷ್ಣಪ್ಪ ,ಮಾಜಿ ಅಧ್ಯಕ್ಷರಾದ ನವೀನ್ , ನರಸಿಂಹಮೂರ್ತಿ, ಮುನಿಕೃಷ್ಣಪ್ಪ , ಟಿ. ವಿ.ವೆಂಕಟೇಶ್, ಸದಸ್ಯರಾದ ಶಿವಣ್ಣ, ರಾಜ್ ಕುಮಾರ್,ನಾಗೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು