
ದೊಡ್ಡಬಳ್ಳಾಪುರ : ಡಿಸೆಂಬರ್ 29 ರಾಷ್ಟ್ರಕವಿ ಕುವೆಂಪು ರವರ ಜನ್ಮ ದಿನಾಚರಣೆಯ ಜೊತೆಗೆ ಈ ದಿನ ತುಂಬಾ ಸ್ಪೆಷಲ್ ಕಾರಣ 2006 ನೇ ಇಸವಿಯಲ್ಲಿ ಇದೇ ದಿನಾಂಕದಂದು ಮುಂಗಾರು ಮಳೆ ಸಿನಿಮಾ ತೆರೆ ಕಂಡಿದ್ದು ಸಂತಸದ ಸಂಗತಿಯಾಗಿದೆ ಇದೇ ದಿನ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ನಿವೇದಿತಾ ವಿಧ್ಯಾ ಸಂಸ್ಥೆಯ ವಾರ್ಷಿಕೋತ್ಸವ (ವೈಭವ) ಕಾರ್ಯಕ್ರಮ ಆಯೋಜನೆ ಮತ್ತಷ್ಟು ಸಂತಸ ತಂದಿದೆ ಎಂದು ನಟಿ ಪೂಜಾಗಾಂಧಿ ತಿಳಿಸಿದರು
ತಾಲ್ಲೂಕಿನ ನಿವೇದಿತಾ ವಿಧ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸುವುದು ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಕಲೆ ಹೊರ ತರುವುದೇ ನಿಜವಾದ ಶಿಕ್ಷಣ ಜೊತೆ ಜೊತೆಗೆ ಕನ್ನಡಾಭಿಮಾನ ಬೆಳೆಸುವುದು ಅತಿ ಮುಖ್ಯ ,ಕನ್ನಡ ನಮ್ಮ ಭಾಷೆ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಭಾಷಾಭಿಮಾನ ಬೆಳೆಸುವುದು ಶಿಕ್ಷಕರ ಜವಾಬ್ಧಾರಿ ಎಂದು ತಿಳಿಸಿದರು
ಕನ್ನಡ ನಾಮಫಲಕ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡ ಭಾಷೆಯ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ ಕರ್ನಾಟಕದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡುವ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಕನ್ನಡ ಪರ ಹೋರಾಟಗಾರರ ನಿರ್ಧಾರ ಶ್ಲಾಘನೀಯ ಆದರೆ ಈ ಪ್ರಕ್ರಿಯೆ ಹಿಂಸೆಯ ಮೂಲಕ ಆಗಬಾರದು ಕಾನೂನಾತ್ಮಕವಾಗಿ ಈ ಹೋರಾಟ ಸಾಗಲಿ ಅನ್ಯರು ಕನ್ನಡ ಬಳಕೆ ಮಾಡುವಂತೆ ಪ್ರೀತಿಯಿಂದ ತಿಳಿಸೋಣ ಎಂದರು .
ಮಕ್ಕಳೊಂದಿಗೆ ಬೊಂಬೆ ಹೇಳುತೈತೆ ಸೇರಿದಂತೆ ಕನ್ನಡ ಸಿನಿಮಾಗಳ ಹಲವು ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು ರಾಷ್ಟ್ರಕವಿ ಕುವೆಂಪು ರವರ ಕಾವ್ಯವನ್ನು ಹೇಳುವ ಮೂಲಕ ಶಾಲಾ ಮಕ್ಕಳಲ್ಲಿ ಕುವೆಂಪು ಸಾಹಿತ್ಯ ಓದುವಂತೆ ಮನವಿ ಮಾಡಿದರು
ನಿವೇದಿತಾ ಶಾಲೆಯ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ವಿಧ್ಯಾಸಂಸ್ಥೆ ನಮ್ಮ ನಿವೇದಿತಾ ವಿಧ್ಯಾಸಂಸ್ಥೆಯಾಗಿದೆ 43ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವೈಭವ ಎಂಬ ಎಂಬ ಹೆಸರಿನಡಿಯಲ್ಲಿ ಆಚರಿಸಲಾಗುತ್ತಿದ್ದು ಸ್ಟೇಟ್ ಹಾಗೂ ಸಿಬಿಎಸ್ ಸಿ ಮಾದರಿಯ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಶಾಲೆ ನಮ್ಮದಾಗಿದ್ದು ಮುಂದೆ ಹಲವು ವಿಧ್ಯಾರ್ಥಿಗಳಿಗೆ ಆಸರೆಯಾಗಲಿ ಎಂದು ತಿಳಿಸಿದರು
ನಿವೃತ್ತ ಎಸಿಪಿ ಸುಬ್ಬಣ್ಣ ಮಾತನಾಡಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೂಜಾಗಾಂಧಿ ಆಗಮಿಸಿದ್ದು ಸಂತೋಷ ತಂದಿದೆ ನಮ್ಮ ನಿವೇದಿತಾ ಶಾಲೆಯು ತಾಲ್ಲೂಕಿನ ಹೆಸರಾಂತ ಶಾಲೆಯಾಗಿದ್ದು ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರಾಜ್ಯ ಹಾಗೂ ತಾಲ್ಲೂಕಿಗೆ ಕೊಡುಗೆಯಾಗಿ ನೀಡಿದೆ ಮುಂದೆಯೂ ನಮ್ಮ ಶಾಲೆಯಿಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು .
ಕಾರ್ಯಕ್ರಮದಲ್ಲಿ ನಿವೇದಿತಾ ಶಾಲೆಯ ಮುಖ್ಯ ಶಿಕ್ಷಕರು , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು