
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಕಾರ್ಯಕ್ರಮವನ್ನು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು
ಕರ್ನಾಟಕ ದಲಿತ ಸಂಘರ್ಷ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ತಾಲ್ಲೂಕಿನ ದಲಿತ ಮುಖಂಡ ರಾಮು ರವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ರಾಮು ಮಾತನಾಡಿ ತಾಲ್ಲೂಕಿನಲ್ಲಿ ಬಡವರ ನೊಂದವರ ಹಾಗೂ ದಲಿತರ ದ್ವನಿಯಾಗಲಿದೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುವುದು .ನಮ್ಮ ದಲಿತ ಸಮುದಾಯದ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಯನ್ನು ನಮ್ಮ ಸಂಘಟನೆ ಖಂಡಿಸಲಿದೆ ತಾಲ್ಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ನಮ್ಮ ಸಂಘಟನೆಯ ಘಟಕಗಳು ಶ್ರಮಿಸಲು ಸಿದ್ಧವಾಗಿವೆ ಎಂದು ತಿಳಿಸಿದರು
ಜಿಲ್ಲಾ ಪ್ರಧಾನ ಸಂಚಾಲಕರಾದ ಗಂಗಾಧರ್ ಮಾತನಾಡಿ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ ಆಶಯದಂತೆ ನಮ್ಮ ಸಂಘಟನೆ ಕಾರ್ಯ ನಿರ್ವಹಿಸಲಿದೆ ತಾಲ್ಲೂಕಿನ ಮೂಲೆ ಮೂಲೆಗೂ ನಮ್ಮ ಸಂಘಟನೆಯ ಸೈನಿಕರು ತಲುಪಿ ದಲಿತ ಪರ ದ್ವನಿಯಗಿ ಶ್ರಮಿಸಲಿದ್ದಾರೆ ತಾಲ್ಲೂಕು ಘಟಕಕ್ಕೆ ಬೇಕಾದ ನೈತಿಕ ಬೆಂಬಲ ಸದಾ ನೀಡುತ್ತೇವೆ ತಾಲ್ಲೂಕಿನಲ್ಲಿ ಪ್ರೊಫೆಸರ್ ಬಿ.ಕೃಷ್ಣಪ್ಪ ರವರ ಕನಸು ನನಸಾಗುವ ನಿಟ್ಟಿನಲ್ಲಿ ತಾಲ್ಲೂಕು ಘಟಕ ಶ್ರಮಿಸಲಿ ಎಂದು ಹಾರೈಸಿದರು
ದಲಿತ ಮುಖಂಡರಾದ ನರಸಯ್ಯ ಮಾತನಾಡಿ ನೂತನ ಅಧ್ಯಕ್ಷರಾದ ರಾಮು ರವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತಷ್ಟು ಉನ್ನತ ಸ್ಥಾನ ಮನ ಸಿಗುವಂತಾಗಲಿ ತಾಲ್ಲೂಕಿನಲ್ಲಿ ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣಗಳು ಸಾಕಷ್ಟು ನಡೆದಿದೆ ಈಗಲೂ ನಡೆಯುತ್ತಿದೆ ಈ ಕುರಿತು ಪ್ರಶ್ನಿಸುವ ಕಾರ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಗಬೇಕಿದೆ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ,ಜಿಲ್ಲಾ ಸಂಘಟನಾ ಸಂಚಾಲಕರಾದ ಸಕ್ಕರೆಗೊಲ್ಲಹಳ್ಳಿ ಹನುಮಂತಯ್ಯ ,ಹನುಮಯ್ಯ ,ಜಿಲ್ಲಾ ಸಂಚಾಲಕರಾದ ನರೇಂದ್ರ ಮೂರ್ತಿ, ಜಿಲ್ಲಾ ಖಜಾಂಜಿಗಳಾದ ಆನಂದ್ ಕುಮಾರ್ ಸಕ್ಕರೆ ಗೊಲ್ಲಹಳ್ಳಿ , ಜಿಲ್ಲಾ ಮಹಿಳಾ ಘಟಕ ಜಿಲ್ಲಾ ಸಂಚಾಲಕರಾದ ನಾಗರತ್ನಮ್ಮ ಮಾಲ್ಲೋಹಳ್ಳಿ, ಮುನಿರಾಜು ಚಿಕ್ಕ ಬೆಳವಂಗಲ ,ಹಾಗೂ ಮತ್ತಿತರು ಉಪಸ್ಥಿತರಿದ್ದರು