
ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮದ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ, ಗ್ರಾಮಗಳ ರೈತರು ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗದ ಹಿನ್ನಲೆ ಇಂದಿನಿಂದ ( ಜ.16) ಕೊನಾಘಟ್ಟ ಗ್ರಾಮದ ರಾಮನಬಂಡೆ ಬಳಿ ಒಮ್ಮತದಿಂದ ಅನಿರ್ದಿಷ್ಟವಾಧಿ ಧರಣಿಗೆ ಕುಳಿತ್ತಿದ್ದಾರೆ.
ನಾಲ್ಕು ಗ್ರಾಮಗಳ ಫಲವತ್ತಾದ 1540 ಎಕರೆ ರೈತರ ಜಮೀನು ಸ್ವಾಧೀನಕ್ಕಾಗಿ ಕೆಐಎಡಿಬಿ ಮುಂದಾಗಿದೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂ ಸ್ವಾಧೀನ ನಿಯಮದ ಆಧಾರದಂತೆ ಜಮೀನು ಸ್ವಾಧೀನಕ್ಕೆ ಪರಿಹಾರ ನೀಡಬೇಕೆಂಬುದು ರೈತರು ಆಗ್ರಹಿಸುತ್ತಿದ್ದಾರೆ, ಆದರೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಕೊಡದ ಹಿನ್ನಲೆ ನಾಲ್ಕು ಗ್ರಾಮದ ರೈತರು ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ .
ಭೂಮಿ ಕಳೆದುಕೊಳ್ಳುತ್ತಿರುವ ರೈತರ ಜೀವನದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರಕ್ಕೆ ನಮ್ಮ ಫಲವತ್ತಾದ ಭೂಮಿ ಬೇಕು . ರೈತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ನಮ್ಮ ಈ ಪ್ರತಿಭಟನೆ ಸರ್ಕಾರ ರೈತರಿಗೆ ಸ್ಪಂದಿಸಿ ನ್ಯಾಯವಾದ ಬೆಂಬಲ ಬೆಲೆ ನಿಗದಿ ಮಾಡುವವರೆಗೂ ನಮ್ಮ ಈ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ನಗರದ ಪ್ರವಸಿಮಂದಿರದ ಬಳಿ ರೈತರ ನಡೆಸುತ್ತಿರುವ ಧರಣಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಎಂ.ಬಿ.ಪಾಟೀಲರ ಜೊತೆ ಮಾತನಾಡಿ ರೈತರ ಸಮಸ್ಯೆ ಬರಿಹರಿಸುವುದಾಗಿ ತಿಳಿಸಿದರು