
ದೊಡ್ಡಬಳ್ಳಾಪುರ : ಹಸಿದವರಿಗೆ ,ಕಡುಬಡವರಿಗೆ ಸಹಾಯ ಮಾಡಲು ದಾನಿಗಳ ನೆರವು ಅಗತ್ಯವಿದೆ .ಹುಟ್ಟುಹಬ್ಬ ಸೇರಿದಂತೆ ವಿಷೇಶದಿನಗಳನ್ನು ಹಸಿದವರಿಗೆ ಅನ್ನ ದಾಸೋಹ ಮಾಡುವ ಮೂಲಕ ಆಚರಿಸಿ ಎಂದು ಅನ್ನದಾಸೋಹಿ ಮಲ್ಲೇಶ್ ಮನವಿ ಮಾಡಿದರು
1395 ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತತವಾಗಿ ನಿರಾಶ್ರಿತ ಬಡವರಿಗೆ ಅನ್ನದಾಸೋಹ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳನ್ನು ದಾನಿಗಳ ನೆರವಿನಿಂದ ನಡೆಸುತ್ತಿದ್ದು . ದಿನದಿಂದ ದಿನಕ್ಕೆ ಸೇವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ದಾನಿಗಳ ನೆರವು ಬೇಕಾಗಿದೆ .ಸೇವಾ ಮನೋಭಾವ ಹೊಂದಿರುವ ದಾನಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮೊಂದಿಗೆ ಅನ್ನದಾಸೋಹ ಮಾಡುವ ಮೂಲಕ ಆಚರಿಸಿ ಸಹಕರಿಸಬೇಕಾಗಿ ಮನವಿ ಮಾಡಿದರು
ದಾನಿಗಳು ಹಾಗೂ ಅದ್ದಿಗಾನಹಳ್ಳಿ ಯುವ ಮುಖಂಡರು ಆದ ಕಿರಣ್ ಗೌಡ ಮಾತನಾಡಿ ಮಲ್ಲೇಶ್ ಮತ್ತು ತಂಡ ಮಾಡುತ್ತಿರುವ ಜನಸೇವಾ ಕಾರ್ಯಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸಿದ್ದೇವೆ. ಈ ಅನ್ನದಾಸೋಹ ಸಮಿತಿಯ ಕುರಿತು ಕೇಳಿದ್ದೆವು ಆದರೆ ಇಲ್ಲಿ ಭೇಟಿಕೊಟ್ಟು ನೋಡುವ ಸಂದರ್ಭದಲ್ಲಿ ನೈಜತೆಯ ಅರಿವಾಗಿದೆ ಮುಂದೆ ಅನ್ನದಾಸೋಹ ಸಮಿತಿಯು ಆಯೋಜನೆ ಮಾಡುವ ಕಾರ್ಯಕ್ರಮಗಳಿಗೆ ಸ್ಪಂದಿಸಿ ಸಹಕರಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ನಿಶಾಂತ್, ರಾಕೇಶ್, ಬೆಟ್ಟದ ಅಲಸುರು ಪಂಚಾಯಿತಿ ಸದಸ್ಯರಾದ ಮುನಿಕೃಷ್ಣ ,ಮತ್ತು ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .